ರಾಜ್ಯ ಸರ್ಕಾರದಲ್ಲಿ ಕಾಣಿಸಿಕೊಂಡ ಅಸಮಾಧಾನ| ಮಹತ್ವ ಪಡೆದ ಬಿ.ವೈ.ವಿಜಯೇಂದ್ರ ಹೇಳಿಕೆ| ಯಡಿಯೂರಪ್ಪ ಅವರು ರಾಜ್ಯಕ್ಕೆ ನಾಲ್ಕನೇ ಬಾರಿ ಸಿಎಂ ಆಗಲು ರಾಜ್ಯದ ಜನತೆಯ ಆಶೀರ್ವಾದದ ಜೊತೆಗೆ ಶಿವಾಚಾರ್ಯರ ಆಶೀರ್ವಾದವೂ ಮುಖ್ಯ ಕಾರಣ|
ಕಲಬುರಗಿ(ಜ.23): ಮರದ ಮೇಲೆ ಕುಳಿತ ಹಕ್ಕಿ ಅಲ್ಲಾಡುವ ಮರಕಂಡು ಕಿಂಚಿತ್ತೂ ಅಂಜುವುದಿಲ್ಲ. ಏಕೆಂದರೆ, ಹಕ್ಕಿ ನಂಬಿರುವುದು ತನ್ನ ರೆಕ್ಕೆಯನ್ನೇ ಹೊರತು ಅಲ್ಲಾಡುವ ಮರವನ್ನಲ್ಲ. ಇದೇ ರೀತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಲ್ಲಿ ಕಾಣಿಸಿಕೊಂಡಿರುವ ಅಸಮಾಧಾನದ ಬೆನ್ನಲ್ಲಿಯೇ ವಿಜಯೇಂದ್ರ ಹೀಗೆ ಹೇಳಿರುವುದು ಮಹತ್ವ ಪಡೆದಿದೆ.
ಖಾತೆ ಹಂಚಿಕೆಯಲ್ಲಿ ಸಿಎಂ ಪುತ್ರನ ಪಾತ್ರ: ವಿಜಯೇಂದ್ರ ಪ್ರತಿಕ್ರಿಯೆ ಹೀಗಿದೆ
ನಗರದಲ್ಲಿ ನಡೆದ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಅಡಿಯಲ್ಲಿ ನಡೆದ ಸಮಾಲೋಚನಾ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಕ್ಕೆ ನಾಲ್ಕನೇ ಬಾರಿ ಸಿಎಂ ಆಗಲು ರಾಜ್ಯದ ಜನತೆಯ ಆಶೀರ್ವಾದದ ಜೊತೆಗೆ ಶಿವಾಚಾರ್ಯರ ಆಶೀರ್ವಾದವೂ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.