ಒಂದ್ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಾತ್: ಮತ್ತೊಂದ್ಕಡೆ HDK-ಡಿಕೆಶಿ ದಿಢೀರ್ ಭೇಟಿ

Published : Dec 02, 2019, 03:14 PM ISTUpdated : Dec 02, 2019, 03:21 PM IST
ಒಂದ್ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಾತ್: ಮತ್ತೊಂದ್ಕಡೆ HDK-ಡಿಕೆಶಿ ದಿಢೀರ್ ಭೇಟಿ

ಸಾರಾಂಶ

ಉಪಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ನಾಯಕರು ಮತ್ತೀಗ ಜೆಡಿಎಸ್ ಜೊತೆಗಿನ ಮೈತ್ರಿ ಮಂತ್ರ ಪಠಿಸುತ್ತಿದ್ದಾರೆ. ಇದರ ನಡುವೆ ಅಚ್ಚರಿ ಎಂಬಂತೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಭೇಟಿಯಾಗಿದ್ಯಾಕೆ..? ಎಲ್ಲಿ ಭೇಟಿ ಮಾಡಿದ್ರು..? ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.

ಹುಬ್ಬಳ್ಳಿ, (ಡಿ.02): ರಾಜ್ಯದಲ್ಲಿ ಉಪಚುನಾವಣೆ ಅಖಾಡಗಳು ದಿನದಿಂದ ದಿನಕ್ಕೆ ರಂಗೇರುತ್ತಿದೆ ಮತ್ತೊಂದೆಡೆ ಬೈ ಎಲೆಕ್ಷನ್ ಬಳಿಕ ಆಗುವ ರಾಜ್ಯ ರಾಜಕೀಯ ವಿದ್ಯಾಮನಗಳ ಬಗ್ಗೆ ಚರ್ಚೆಗಳಾಗುತ್ತಿವೆ. 

ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಕನಿಷ್ಠ 8 ಸ್ಥಾನಗಳಲ್ಲಿ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಅಷ್ಟು ಸ್ಥಾನಗಳು ಬಿಜೆಪಿ ಬರದಿದ್ದರೇ ಜೆಡಿಎಸ್‌ನೊಂದಿಗೆ ಮತ್ತೆ ಸರ್ಕಾರ ರಚಿಸುವ ಕುರಿತು ಕಾಂಗ್ರೆಸ್‌ ಚರ್ಚೆಗಳು ನಡೆದಿವೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಜತೆ ಮೈತ್ರಿ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಚುನಾವಣೋತ್ತರ ಲೆಕ್ಕಚಾರ; 'ಹೊಸ ಮೈತ್ರಿ ಸರ್ಕಾರ'ದ ಸಿಎಂ-ಡಿಸಿಎಂ ಇವರಾಗ್ತಾರಾ?

ಇದರ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್‌ ದಿಢೀರ್ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಉಭಯ ನಾಯಕರು ಭೇಟಿಯಾಗಿದ್ದು ಆಕಸ್ಮಿಕವಾಗಿಯೇ ಹೊರತು, ಯಾವುದೇ ರಾಜ್ಯ ರಾಜಕೀಯ ಚರ್ಚೆ ಮಾಡಲು ಭೇಟಿಯಾಗಿಲ್ಲ. ಆದ್ರೂ ಭೇಟಿ ವೇಳೆ ರಾಜಕಾರಣಿಗಳಾಗಿ ಪ್ರಸಕ್ತ ರಾಜಕೀಯ ಬಗ್ಗೆ ಮಾತನಾಡಿರುವುದು ಸಹಜ.

ಹುಬ್ಬಳ್ಳಿಯಲ್ಲಿ ಎಚ್‌ಡಿಕೆ-ಡಿಕೆಶಿ ಭೇಟಿ
"
ಹೌದು...ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಈ ಇಬ್ಬರು ನಾಯಕರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಭೇಟಿಯಾದರು.

 ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಉಪಚುನಾವಣೆ ವಿಚಾರವಾಗಿ ಬೆಳಗಾವಿಗೆ ಹೊರಟಿದ್ದರು. ಆದ್ರೆ, ಐಟಿ ಇಲಾಖೆಯಿಂದ ನೋಟಿಸ್ ಬಂದ ಕಾರಣ ಬೆಂಗಳೂರಿಗೆ ವಾಪಸ್ ಆಗಲು ಹುಬ್ಬಳ್ಳಿಯಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದರು. 

ಇನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಳಗಾವಿಯಿಂದ ಚಿಕ್ಕಬಳ್ಳಾಪುರಕ್ಕೆ ಹೊರಟಿದ್ದರು. ಹವಾಮಾನ ವೈಪರೀತ್ಯದ ಕಾರಣ ಹೆಲಿಕಾಪ್ಟರ್ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು. ಆಗ ಅಲ್ಲಿದ್ದ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು ಅಷ್ಟೇ.

ಇದೇ ಡಿಸೆಂಬರ್ 5ಕ್ಕೆ 15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ