ಬಸ್‌ ನಿಲ್ದಾಣ ಎಲ್ಲಾ ಕಡೆ ಕಟ್ಟಲಾಗಲ್ಲ, ಪುನಃ ಬಿಜೆಪಿ ಸರ್ಕಾರ ಬರುತ್ತೆ: ಸಚಿವ ಸೋಮಣ್ಣ

By Kannadaprabha NewsFirst Published Mar 20, 2023, 11:41 PM IST
Highlights

ಅಂಗಡಿ ಮಳಿಗೆ ಎಲ್ಲಿ ಬೇಕಾದರೂ ಕಟ್ಟಬಹುದು. ಆದರೆ, ಸುಸಜ್ಜಿತ ಬಸ್‌ ನಿಲ್ದಾಣ ಎಲ್ಲಾ ಕಡೆ ಕಟ್ಟಲಾಗಲ್ಲ, ಪುನಃ ಬಿಜೆಪಿ ಸರ್ಕಾರ ಬರುತ್ತೆ, ಉಳಿಕೆ ಜಾಗವನ್ನು ಬಸ್‌ ನಿಲ್ದಾಣದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ಬೆಳೆಯುತ್ತಿರುವ ಕೊಳ್ಳೇಗಾಲದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. 

ಕೊಳ್ಳೇಗಾಲ (ಮಾ.20): ಅಂಗಡಿ ಮಳಿಗೆ ಎಲ್ಲಿ ಬೇಕಾದರೂ ಕಟ್ಟಬಹುದು. ಆದರೆ, ಸುಸಜ್ಜಿತ ಬಸ್‌ ನಿಲ್ದಾಣ ಎಲ್ಲಾ ಕಡೆ ಕಟ್ಟಲಾಗಲ್ಲ, ಪುನಃ ಬಿಜೆಪಿ ಸರ್ಕಾರ ಬರುತ್ತೆ, ಉಳಿಕೆ ಜಾಗವನ್ನು ಬಸ್‌ ನಿಲ್ದಾಣದ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ಬೆಳೆಯುತ್ತಿರುವ ಕೊಳ್ಳೇಗಾಲದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇದು ಸರ್ಕಾರದ ಮೂಲ ಉದ್ದೇಶವೂ ಆಗಿದೆ ಎಂದು ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ಅವರು ಕೊಳ್ಳೇಗಾಲ ಹೈಟೆಕ್‌ ಬಸ್‌ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆಯಾಗಿ 26ವರ್ಷವಾಗಿದ್ದು, ಕೊಳ್ಳೇಗಾಲ ನಗರವು ಅತ್ಯಂತ ಪವಿತ್ರ ಕ್ಷೇತ್ರಗಳಾದ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಾಥಸ್ವಾಮಿ ಕ್ಷೇತ್ರಗಳ ಒಳಗೊಂಡಿರುವ ಪವಿತ್ರ ಸ್ಥಳ. 

ಅತಿ ಹೆಚ್ಚಿನ ಜನಸಂಖ್ಯೆಯುಳ್ಳ ಈ ಭಾಗದಲ್ಲಿ ಬುದ್ಧಿಜೀವಿ, ವ್ಯಾಪಾರಸ್ಥರು, ಕಡು ಬಡವರು ವಾಸಮಾಡುವ ಊರಾಗಿದೆ ಎಂದರು. ಕೊಳ್ಳೇಗಾಲ ಬಸ್‌ ನಿಲ್ದಾಣವನ್ನು 1ಎಕರೆ 12ಗುಂಟೆ ಜಾಗದಲ್ಲಿ ನಿರ್ಮಿಸಲಾಗಿದ್ದು, ಉಳಿಕೆ ಜಾಗವನ್ನು ಬಸ್‌ ನಿಲ್ದಾಣಕ್ಕಾಗಿ ಸಾರಿಗೆ ವಿಭಾಗ ಹಸ್ತಾಂತರ ಮಾಡಿಕೊಂಡರೆ ಬೆಳೆಯುತ್ತಿರುವ ಕೊಳ್ಳೇಗಾಲದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗುತ್ತದೆ. ಅಂಗಡಿ ಮಳಿಗೆಗಳನ್ನು ಎಲ್ಲಿ ಬೇಕಾದರೂ ಕಟ್ಟಬಹುದು, ಆದರೆ, ಬಸ್‌ ನಿಲ್ದಾಣ ಎಲ್ಲಾ ಕಡೆ ಕಟ್ಟಲಾಗಲ್ಲ ಎಂದು ಅಭಿಪ್ರಾಯಪಟ್ಟರು.

Latest Videos

ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ, ಅವರಿಗೆ ನಾಚಿಕೆ ಆಗಬೇಕು: ಬಿ.ಎಸ್.ಯಡಿಯೂರಪ್ಪ

ಉದ್ಘಾಟನೆಯಾಗಿಲ್ಲ: ಬಸ್‌ ನಿಲ್ದಾಣಕ್ಕೆ ಹಲವು ಕಡೆ ಭೂಮಿ ಪೂಜೆ ಮಾಡಿ 20ವರ್ಷಗಳೆ ಆಗಿವೆ. ಅವು ಪೂರ್ಣಗೊಂಡಿಲ್ಲ ಎಂದು ಕಾಂಗ್ರೆಸ್‌ ಸರ್ಕಾರದ ವೇಳೆ ಕೈಗೊಂಡ ಕಾಮಗಾರಿಗಳನ್ನು ವ್ಯಂಗ್ಯವಾಡಿದ ಸಚಿವರು, 2017-18ರಲ್ಲಿ ಈ ಕಾಮಗಾರಿಗೆ ಚಾಲನೆ, 23ಕೋಟಿ ಅನುದಾನ ಇಲ್ಲಿ ಖರ್ಚಾಗಿದೆ. ಮೂಲಸೌಲಭ್ಯ ಕಲ್ಪಿಸಬೇಕಾದ್ದು, ಜನಪ್ರನಿಧಿಗಳು, ಸರ್ಕಾರದ ಕೆಲಸ, ಈ ಹಿನ್ನೆಲೆ ಪ್ರತಿಭಟನಾನಿರತನ್ನು ವಿನಂತಿಸಿದೆ, ಅಭಿವೃದ್ಧಿ ಮುಖ್ಯ, ಪಕ್ಷ ಮುಖ್ಯವಲ್ಲ ಎಂಬ ವಾಸ್ತವ ಅರಿತವನು. 7ಬಾರಿ ಶಾಸಕನಾಗಿ, 6ಬಾರಿ ಸಚಿವನಾಗಿರುವ ನಾನು, ನಗರಸಭಾ ಸದಸ್ಯರನ್ನು ಅಗೌರವದಿಂದ ನಡೆಸಿಕೊಳ್ಳಬಾರದು ಎಂಬ ಕಾರಣಕ್ಕೆ ಕೈಮುಗಿದು ವಿನಂತಿ ಮಾಡಿಕೊಂಡೆ, ಒಳ್ಳೆಯ ಕೆಲಸ ಮಾಡುವಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನ ಅವರು ಅರಿತುಕೊಳ್ಳಲಿಲ್ಲ ಎಂದರು.

ಈ ಭಾಗದಿಂದ 850ಕ್ಕೂ ಹೆಚ್ಚು ಸಾರಿಗೆಗಳು ಸಂಚರಿಸುತ್ತಿದೆ. ಸೇವಾ ಮನೋಭಾವನೆ ಸಾರಿಗೆ ಸಂಸ್ಥೆಯ ಗುರಿಯಾಗಬೇಕು, ಬಸ್‌ ನಿಲ್ದಾಣ ಲೋಕಾರ್ಪಣೆ ಮಾಡಿ, ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟನಗರಸಭೆಯ ಆಡಳಿತ ಮಂಡಳಿ, ಸದಸ್ಯರೆಲ್ಲರಿಗೂ ಧನ್ಯವಾದ ಅರ್ಪಿಸಿದರು.

ಸಣ್ಣ ಪುಟ್ಟ ಸಮಸ್ಯೆ: ಜಿಲ್ಲೆಯಲ್ಲಿ ಶೇಕಡ 48ರಷ್ಟು ಮಾತ್ರಭೂಮಿ ಒಳಗೊಂಡಿದೆ. 26ರಷ್ಟುರೈತರ ಜಮೀನಿಗೆ ಅವಕಾಶವಿದ್ದು, ಜನಸಂಖ್ಯೆ ಬೆಳೆಯುತ್ತಿದೆ. ಭೂಮಿ ವಿಸ್ತಾರಕ್ಕೆ ಅನುಗುಣವಾಗಿ ಅನಿವಾರ್ಯವಾಗಿ ಜನತೆ ಬದುಕಬೇಕಿದೆ. ಈ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಪರ ತೀರ್ಮಾನ ಆಗಬೇಕಿದೆ. ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿವೆ, ಸಾಮಾನ್ಯ ರೈತರ ಜೀವನಕ್ಕೆ ಅನುವು ಮಾಡಿಕೊಡಬೇಕು, ಮೂಕ ಪ್ರಾಣಿಗಳ ಅವಾಂತರ ಜಿಲ್ಲೆಯನ್ನು ಕಾಡುತ್ತಿದೆ.

ಖಾಸಗಿ ಬಸ್‌ ನಿಲ್ದಾಣದವರು ಧೃತಿಗೆಡಬೇಕಿಲ್ಲ, 2-3ದಿನದಲ್ಲಿ ಸಭೆ ನಡೆಸಿ, ಅವರಿಗೂ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿಗಳು, ಸಾರಿಗೆ ಅಧಿಕಾರಿಗಳು ಕ್ರಮವಹಿಸಬೇಕು,ಅಧಿಕಾರ ಬರುತ್ತೆ, ಹೋಗುತ್ತೆ, ಆದರೆ, ಮೂಲಭೂತವಾಗಿ ಜನರಿಗೆ ಏನೇನು ನೀಡಬೇಕು ಎಂಬುದನ್ನ ಅರಿತು ಆ ಕೆಲಸ ಮಾಡದಿದ್ದರೆ ಕಷ್ಟಎಂದರು. ಗುಂಡ್ಲುಪೇಟೆ ಶಾಸಕ ನಿರಂಜನ್‌, ಕೊಳ್ಳೇಗಾಲ ಶಾಸಕ ಮಹೇಶ್‌, ಕಾಡಾ ಅಧ್ಯಕ್ಷ ನಿಜಗುಣರಾಜು, ನಗರಸಭಾ ಸದಸ್ಯರಾದ ಚಿಂತು ಪರಮೇಶ್‌, ಪವಿತ್ರ ರಮೇಶ್‌, ರಾಮಕೃಷ್ಣ, ಕವಿತಾ, ನಾಸೀರ್‌, ಸೆಲ್ವರಾಜು, ಶಿರೀಸಾ ಸತೀಶ್‌, ಯುವ ಮುಖಂಡ ಕಿನಹಳ್ಳಿ ರಾಚಯ್ಯ, ಡೀಸಿ ರಮೇಶ್‌, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌, ನಗರಸಭೆ ಆಯುಕ್ತ ರಾಜಣ್ಣ ಇದ್ದರು.

ಮಹದೇಶ್ವರ ನಮ್ಮ ಮನೆ ದೇವರು: ಮಹದೇಶ್ವರರು ನಮ್ಮ ಮನೆ ದೇವರು, ಕಳೆದ 50ವರ್ಷಗಳಿಂದ ಚಾ.ನಗರ ಜಿಲ್ಲೆಗೂ ನನಗೂ, ಅವಿನಾಭಾವ ಸಂಬಂಧವಿದೆ. ಮಹದೇಶ್ವರ ಬೆಟ್ಟಕ್ಕೆ ನನ್ನ ತಾಯಿಯವರ ಜೊತೆ ನಡೆದುಕೊಂಡು ಬಂದ ಅನೇಕ ನಿದರ್ಶನಗಳಿವೆ. ಕೊಳ್ಳೇಗಾಲ ಹೈಟೆಕ್‌ ಬಸ್‌ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಲೈಮಹದೇಶ್ವರರು ಹಾದುಹೋಗಿರುವ ಇದೊಂದು ಪವಿತ್ರ ಸ್ಥಳ ಎಂದು ವ್ಯಾಖ್ಯಾನಿಸಿದರಲ್ಲದೆ ಜಿಲ್ಲೆಗೆ 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸಿ ಮಹದೇಶ್ವರರ ವಿಗ್ರಹ ಲೋಕಾರ್ಪಣೆಗೊಳಿಸಿದ್ದಾರೆ. ಯಾರು ದೇವರ ಮೇಲೆ ನಂಬಿಕೆ ಇಟ್ಟು ನಿಷ್ಕಲ್ಮಶ ಜೀವನ ನಡೆಸುತ್ತಾರೆ, ಅಂತಹವರಿಗೆ ಭಗವಂತನ ಆಶೀರ್ವಾದ ಸಿಕ್ಕೇ ಸಿಗುತ್ತೆ. ಕಾರ್ಯಕ್ರಮಕ್ಕೆ ಗೈರಾಗಿದ್ದ ನಗರಸಭಾಧ್ಯಕ್ಷೆ ರೇಖಾ ರಮೇಶ್‌ ಅವರ ಹೆಸರನ್ನು ಉಲ್ಲೇಖಿಸುವ ಮೂಲಕ ಗಮನ ಸೆಳೆದರು.

ಮಹೇಶಣ್ಣ ಸ್ವಾರ್ಥಕ್ಕಾಗಿ ತಪುತ್ರ್ಪ ಮಾಡಿಲ್ಲ: ಜನರ ಭಾವನೆಗಳಿಗೆ ಸ್ಪಂದಿಸುವ ಸಹೋದರ ಮಹೇಶ್‌ ಕಾರ್ಯವೈಖರಿ ಅಭಿನಂದಿಸುವೆ ಎಂದು ಸಚಿವ ಸೋಮಣ್ಣ, ಶಾಸಕ ಮಹೇಶ್‌ ಕಾರ್ಯವೈಖರಿ ಕುರಿತು ಪ್ರಶಂಸಿದರು ಯಾವ ವ್ಯಕ್ತಿ ಜೋರಾಗಿ ನಡೆಯುತ್ತಾನೆ ಅಂತಹವ್ಯಕ್ತಿ ಎಡವುತ್ತಾರೆ, ಜೊತೆಗೆ ನ್ಯೂನತೆ ಬರುತ್ತೆ. ಆದರೆ, ಮತದಾರ ಪ್ರಭುಗಳು ಎಲ್ಲವನ್ನು ಗಮನಿಸುತ್ತಿದ್ದಾರೆ. ರಾಜ್ಯ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಜನ ನೋಡುತ್ತಿದ್ದಾರೆ ಎಂದರು. ಕೇಂದ್ರದಲ್ಲಿ ಮೋದಿಯವರು, ರಾಜ್ಯದಲ್ಲಿ ಬೊಮ್ಮಾಯಿ ಜನಪರ ಕಾಳಜಿಯ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಯಾರು ನಿಮ್ಮ ಪರ ಸ್ಪಂದಿಸುತ್ತಾರೆ, ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳತ್ತಾರೆ ಅಂತಹವರಿಗೆ ನಿಮ್ಮ ಮತ ನೀಡಿ ಎಂದರು. ಮಹೇಶಣ್ಣ ತಮ್ಮ ಸ್ವಾರ್ಥಕ್ಕಾಗಿ ತಪುತ್ರ್ಪ ಮಾಡಿಲ್ಲ, ಜನಪರ ಕಾಳಜಿಯಿಂದ ಕೆಲವು ಹೆಜ್ಜೆ ಇಟ್ಟಿರಬಹುದು, ಹಾಗಾಗಿ, ಅವರನ್ನು ನಾವೆಲ್ಲರೂ ಅಭಿನಂದಿಸಬೇಕು ಎಂದು ಬಸ್‌ ನಿಲ್ದಾಣ ಉದ್ಘಾಟನೆ ವೇಳೆ ಕಾಂಗ್ರೆಸ್ಸಿಗರ ಪ್ರತಿಭಟನೆ ಸಮರ್ಥಿಸಿಕೊಂಡರು.

ಚುನಾವಣೆಗೂ ಮುನ್ನವೇ ಬೆಟ್ಟಿಂಗ್‌: ಬೆಳ್ಳಿ ಪ್ರಕಾಶ್ ಗೆಲ್ಲುತ್ತಾರೆಂದು ತನ್ನ ಇಡೀ ಆಸ್ತಿಯನ್ನೇ ಬಾಜಿಗಿಟ್ಟ ವ್ಯಕ್ತಿ!

ಬಿಜೆಪಿ ಬಿಡುತ್ತೇನೆ ಎನ್ನುವುದು ಮುಗಿದ ಅಧ್ಯಾಯ: ಎರಡು ತಿಂಗಳಿಂದ ನನ್ನ ಉಜ್ಜುತ್ತಲೆ ಇದ್ದಿರಿ, ಎಷ್ಟುಉಜ್ಜುತ್ತಿರಾ ಉಜ್ಜಿ, ನಾನು ಡೈರೆಕ್ಟ್ ರಾಜಕಾರಣಿ, ಪಕ್ಷ ಬಿಡುತ್ತೇನೆ ಎಂಬುದು ಮುಗಿದ ಅಧ್ಯಾಯ. ಕ್ಷುಲ್ಲಕ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಸೋಮಣ್ಣ ಹೇಳಿದರು. ಚಾ.ನಗರ ನನ್ನ ಪ್ರೀತಿಯ ಜಿಲ್ಲೆ, ಇದು ಸ್ವಾಭಿಮಾನದ ಹಾಗೂ ನಾನು ಇಷ್ಟಪಡುವ ಜಿಲ್ಲೆ. ಚಾ.ನಗರದಲ್ಲಿ ಸ್ಪರ್ಧಿಸಬೇಕು ಎಂಬ ತೀರ್ಮಾನ ಮಾಡಿಲ್ಲ, ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಜನಪ್ರತಿನಿಧಿಗಳಿಗೆ ಇತಿ, ಮಿತಿ ಇದೆ. ಅವರು ಸಹಕಾರ ನೀಡಿದ್ದಾರೆ ಅವರು ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡಬಾರದು ಎಂದರು.

click me!