ಚಾ.ನಗರದಿಂದ ಬಿಎಸ್‌ವೈ, ಉ.ಕರ್ನಾಟಕದಲ್ಲಿ ಸಿಎಂ ಪ್ರವಾಸ

By Kannadaprabha News  |  First Published Nov 8, 2022, 10:18 AM IST
  • ಚಾ.ನಗರದಿಂದ ಬಿಎಸ್‌ವೈ, ಉ.ಕರ್ನಾಟಕದಲ್ಲಿ ಸಿಎಂ ಪ್ರವಾಸ
  • 140 ಸೀಟು ಗೆಲ್ಲುವುದು ನಮ್ಮ ಗುರಿ-ಬಿಎಸ್‌ವೈ
  •  ಕಾಂಗ್ರೆಸ್‌ ನಾಯಕರು ಭ್ರಮೆ ಬಿಟ್ಟು ವಾಸ್ತವ ಅರಿಯಲಿ
  •  ಕಾಪುವಿನಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗಿ

ಉಡುಪಿ (ನ.8) : ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾನು ಚಾಮರಾಜ ನಗರದಿಂದ ಹಾಗೂ ಬೊಮ್ಮಾಯಿಯವರು ಉತ್ತರ ಕರ್ನಾಟಕದಿಂದ ಪ್ರವಾಸ ಮಾಡಲಿದ್ದೇವೆ. ರಾಜ್ಯದಲ್ಲಿ 140ಕ್ಕೂ ಹೆಚ್ಚು ಸೀಟು ಗೆದ್ದು ಪ್ರಧಾನಿ ಮೋದಿ ಅವರಿಗೆ ಗೌರವ ತಂದು ಕೊಡುವುದು ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.

ಕಾಪುವಿನಲ್ಲಿ ಸೋಮವಾರ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಒಂದಿಬ್ಬರು ತಾವೇ ಮುಂದಿನ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಬಿಜೆಪಿಯ ಜನಸಂಕಲ್ಪ ಸಮಾವೇಶಕ್ಕೆ ಸೇರುತ್ತಿರುವ ಜನರ ಸಂಖ್ಯೆ ನೋಡಿದಾಗ ಮುಂದಿನ ಬಾರಿಯೂ ಬಿಜೆಪಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಕಾಂಗ್ರೆಸ್‌ ನಾಯಕರು ಸಿಎಂ ಆಗುವ ಭ್ರಮೆ ಬಿಟ್ಟು, ವಾಸ್ತವವನ್ನು ತಿಳಿದುಕೊಳ್ಳಬೇಕು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Tap to resize

Latest Videos

ಸಿಎಂ ಬೊಮ್ಮಾಯಿ-ಬಿಎಸ್‌ವೈ ಸಂಬಂಧ ಹಳಸಿದೆ: ಸಿದ್ದರಾಮಯ್ಯ

ನಾನು ರಾಹುಲ್‌ ಗಾಂಧಿ ಅವರನ್ನು ಮೋದಿ ಎದುರು ಬಚ್ಚಾ ಎಂದಾಗ ನನ್ನನ್ನು ಟೀಕೆ ಮಾಡಿದರು. ಆದರೆ, ನಾನು ನನ್ನ ಪ್ರಾಮಾಣಿಕ ಅನಿಸಿಕೆಯನ್ನು ಹೇಳಿದ್ದೇನೆ. ರಾಹುಲ್‌ ಹೋದಲ್ಲೆಲ್ಲಾ ಕಾಂಗ್ರೆಸ್‌ ಸೋಲುತ್ತದೆ. ಕೊಳ್ಳೆಗಾಲ ಪುರಸಭೆ, ವಿಜಯಪುರ ನಗರಪಾಲಿಕೆ ಚುನಾವಣಾ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದವರು ಹೇಳಿದರು.

click me!