
ಬೆಂಗಳೂರು, (ಜು.17): ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಹೋಗುವಾಗ ವಿಶೇಷ ವಿಮಾನದಲ್ಲಿ ಆರು ಬ್ಯಾಗ್ ಗಳನ್ನು ಕೊಂಡೊಯ್ದಿದ್ದಾರೆ. ಅವರು ತೆಗೆದುಕೊಂಡು ಹೋಗಿದ್ದು ಏನು ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಬಿಎಸ್‌ವೈ ಫ್ಯಾನ್ಸ್ ಖಡಕ್ ಉತ್ತರ ಕೊಟ್ಟಿದ್ದಾರೆ.
ಕುಮಾರಸ್ವಾಮಿಯವರೇ..."ತಾನು ಕಳ್ಳ ಪರರ ನಂಬ" ಗಾದೆ ಮಾತು ನಿಮ್ಮನ್ನು ನೋಡಿಯೇ ಹೇಳಿದಂತಿದೆ. ಯಡಿಯೂರಪ್ಪನವರು ದೆಹಲಿಗೆ ತೆಗೆದುಕೊಂಡು ಹೋದ ಆರು ಬ್ಯಾಗ್ ಗಳಲ್ಲಿ ರಾಷ್ಟ್ರ ನಾಯಕರಿಗೆ ಉಡುಗೊರೆಯಾಗಿ ನೀಡಲು ಹಿಂದೂ ದೇವರಗಳ ವಿಗ್ರಹಗಳಿದ್ದವೇ ವಿನಹಃ ಬೇರೆನೂ ಅಲ್ಲ. ಅಷ್ಟಕ್ಕು ನಿಮ್ದು ಎಷ್ಟೇ ಆಗ್ಲಿ ಸೂಟ್ಕೇಸ್ ಪಕ್ಷವಲ್ಲವೇ...ಅದೇ ಧ್ಯಾನ ಎಂದು ಬಿಎಸ್‌ವೈ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ನಾಯಕರಿಗೆ ಕೊಟ್ಟಿರುವ ದೇವರ ವಿಗ್ರಹಣ ಚಿತ್ರಗಳೊಂದಿಗೆ ಫೋಸ್ಟ್ ಮಾಡಿದ್ದಾರೆ.
ಬಿಎಸ್‌ವೈ ಜತೆ 6 ದೊಡ್ಡ ಬ್ಯಾಗ್‌ಗಳೂ ದಿಲ್ಲಿಗೆ ಹೋಗಿವೆ: ಹೊಸ ಬಾಂಬ್ ಸಿಡಿಸಿದ ಎಚ್‌ಡಿಕೆ
ಸಿಎಂ ನಿನ್ನೆ ದೆಹಲಿಗೆ ಹೋಗುವಾಗ ಹೈ ಕಮಾಂಡ್ಗೆ ಕೊಡೋಕೆ ಆರು ಬ್ಯಾಗ್ ಗಳನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗಿದ್ದಾರೆ . ಉಡುಗೊರೆ ಕೊಂಡು ಹೋಗಿದ್ದಾರಾ ಅಥವಾ ಬೇರೆ ಏನು ತಗೊಂಡು ಹೋಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ಎಚ್‌ಡಿಕೆ ಹೇಳಿದ್ದರು.
ಅಲ್ಲದೇ ಪ್ರಧಾನಿಗಳನ್ನು ಭೇಟಿ ಮಾಡೋಕೆ ಸಿಎಂ ಒಬ್ಬರೇ ಹೋಗಿದ್ರಾ.. ? ಅಥವಾ ಬ್ಯಾಗ್ ಗಳನ್ನು ತಗೊಂಡು ಹೋಗಿ ಭೇಟಿ ಮಾಡಿದ್ರಾ..? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.