
ಬೆಂಗಳೂರು (ನ.30): ನಾನು ಆ ಪತ್ರ ನೋಡಿಲ್ಲ, ಓದಿಲ್ಲ ಶಾಸಕ ಬಿ ಆ ಪಾಟೀಲ್ ಅಸಮಧಾನ ವಿಚಾರ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಏನಾದ್ರೂ ಸಮಸ್ಯೆ ಇದ್ರೆ ನಮ್ಮ ಶಾಸಕಾಂಗ ಪಕ್ಷದ ಸಭೆಯ ನಾಯಕರಾದ ಮುಖ್ಯಮಂತ್ರಿಗಳು ಆ ಬಗ್ಗೆ ಚರ್ಚೆ ಮಾಡ್ತಾರೆ. ಅದೆಲ್ಲ ಸಿಎಲ್‌ಪಿ ಸಭೆಯಲ್ಲೇ ಅದರ ಬಗ್ಗೆ ಚರ್ಚೆ ಆಗಿ ಎಲ್ಲ ಮುಗೀತು ಅನ್ಕೊಂಡಿದ್ವಿ. ಆದ್ರೆ ಅವರು ಮತ್ತೆ ಪತ್ರ ಬರೆದಿದ್ದಾರೆ, ಯಾವ ವಿಚಾರ ಅಂತ ಗೊತ್ತಿಲ್ಲ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಬಿತ್ತಿರಿಸುವ ಡಿ.ಫೇಕ್ ಸುದ್ದಿಗಳಿಗೆ ಕಡಿವಾಣ ಹಾಕಿ: ಪರಂ
ಮೊದಲ ಸಲ ಗೆದ್ದವರಿಗೆ ನಿಗಮ ಮಂಡಳಿ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಹೊಸಬರ ಅಸಮಧಾನ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಡಿಕೆಶಿ ನಮ್ಮ ಅಧ್ಯಕ್ಷರು, ಅದು ಅವರ ತೀರ್ಮಾನ. ಹೊಸಬರಿಗೆ ಯಾಕೆ ನಿಗಮ ಮಂಡಳಿ ಕೊಡ್ತಿಲ್ಲ ಅಂತಾ ಉತ್ತರವನ್ನೂ ಡಿಕೆಶಿ ಅವರೇ ಕೊಡಬೇಕು. ಬಹುಶಃ ನಾಲ್ಕಾರು ಬಾರಿ ಗೆದ್ದವರಿಗೆ ನಿಗಮ ಮಂಡಳಿ ಕೊಡುವ ನಿರ್ಧಾರ ಆಗಿರಬೇಕು ಅನ್ಸುತ್ತೆ. ಇದರಲ್ಲಿ ಅಧ್ಯಕ್ಷರು ಯಾವ ಪದ್ಧತಿ, ಯಾವ ಮಾನದಂಡ ಅನುಸರಿಸ್ತಿದ್ದಾರೆ ಅಂತ ಗೊತ್ತಿಲ್ಲ ಎಂದರು.
ಮೂರನೇ ಕಂತಿನ ಕಲೆಕ್ಷನ್ ಮಾಡಿ ಹೋದರು ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಮ್ಮ ಜನರಲ್ ಸೆಕ್ರೆಟರಿ ಬರೋದು ಕಲೆಕ್ಷನ್ ಮಾಡೋಕ್ಕೆ ಅಂತ ಬಿಜೆಪಿಯವ್ರು ಆರೋಪ ಮಾಡ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅವರ ಜನರಲ್ ಸೆಕ್ರೆಟರಿ ಯಾವಾಗಲೂ ಇಲ್ಲೇ ಇರ್ತಿದ್ರು. ಆಗ ಅವರೇನು ಮಾಡ್ತಿದ್ರು ಅನ್ನೋ ಪ್ರಶ್ನೆ ಸ್ವಾಭಾವಿಕವಾಗಿ ಬರುತ್ತೆ. ಇದಕ್ಕೆ ಬಿಜೆಪಿ ಉತ್ತರಿಸಲಿ. ಡಿಕೆಶಿ ವಿಚಾರಣೆಗೆ ಅನುಮತಿ ಇಲ್ಲದೇ ಬಿಜೆಪಿ ಸಿಬಿಐಗೆ ವಹಿಸಿತ್ತು. ಆ ಆದೇಶವನ್ನು ನಾವು ಈಗ ವಾಪಸ್ ಪಡೆದುಕೊಂಡಿದ್ದೇವೆ. ಇದರ ಬಗ್ಗೆ ಕೋರ್ಟ್ ಗೆ ತಿಳಿಸಿದ್ದೇವೆ, ಕೋರ್ಟ್ ಒಪ್ಪಿಕೊಂಡಿದೆ. ಮುಂದಿನ ಸಿಬಿಐ ಪ್ರಕ್ರಿಯೆ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಮಧ್ಯಪ್ರವೇಶ ಮಾಡೋದು ಕಷ್ಟಎಂದರು.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸದ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹಣಕಾಸು ಸಚಿವರಾದ ಸಿಎಂ ಇದ್ದಾರೆ, ಡಿಕೆಶಿ ಇದ್ದಾರೆ ಅವರು ಅದರ ಬಗ್ಗೆ ಗಮನ ಕೊಡ್ತಾರೆ. ಬಾಕಿ ಬಿಲ್ ಬಗ್ಗೆ ಅವರದ್ದೇ ಅಂತಿಮ ನಿರ್ಣಯ. ಬಾಕಿ ಬಿಲ್ ಪಾವತಿ ಬಗ್ಗೆ ಏನೋ ಪದ್ಧತಿ ಇದೆ, ಯಾರಿಗೆ ಕೊಡಬೇಕು ಅನ್ನೋ ಬಗ್ಗೆ ಏನೋ ಗೈಡ್‌ಲೈನ್ಸ್ ಇದೆ, ಅದರಂತೆ ಮಾಡ್ತಾರೆ. ಸಿಬಿಐ ಪ್ರೊಸೀಜರ್ ಏನಿದೆ ಅಂತ ಗೊತ್ತಿಲ್ಲ.
ಡಿಕೆಶಿ ಕೇಸ್ ಭವಿಷ್ಯ ಸಿಬಿಐ, ಕೋರ್ಟ್‌ಗೆ ಬಿಟ್ಟದ್ದು: ಸಚಿವ ಪರಮೇಶ್ವರ್
ಈ ಸರ್ಕಾರದಲ್ಲೂ ಕಮಿಷನ್ ಇದೆ ಎಂಬ ಕೆಂಪಣ್ಣ ಆರೋಪ ವಿಚಾರಕ್ಕೂ ಅದರ ಬಗ್ಗೆ ನಮಗೆ ಗೊತ್ತಿಲ್ಲ ಎಂದ ಗೃಹ ಸಚಿವ ಪರಮೇಶ್ವರ್. ಹಾಗೇನಾದರೂ ಆರೋಪ ಇದ್ದಲ್ಲಿ ಕೆಂಪಣ್ಣ ಸಿಎಂ ಗಮನಕ್ಕೆ ತರಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.