ಸಿದ್ದರಾಮೋತ್ಸವದಿಂದ ಯಡಿಯೂರಪ್ಪಗೆ ಬೋನಸ್‌: ಜಾರಕಿಹೊಳಿ

By Kannadaprabha News  |  First Published Aug 20, 2022, 1:19 PM IST

ಸಿದ್ದರಾಮೋತ್ಸವದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ ಸಿಕ್ಕಿದೆ. ಸಿದ್ದರಾಮೋತ್ಸವ ಬಹುಶಃ ಯಶಸ್ವಿಯಾಗದಿದ್ದರೆ ಯಡಿಯೂರಪ್ಪ ಅವರನ್ನು ಬಿಜೆಪಿ ದೂರ ತಳ್ಳುತ್ತಿತ್ತು: ಸತೀಶ ಜಾರಕಿಹೊಳಿ 


ಬೆಳಗಾವಿ(ಆ.20):  ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಯಶಸ್ಸು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ಲಸ್‌ ಬೋನಸ್‌ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ ಸಿಕ್ಕಿದೆ. ಸಿದ್ದರಾಮೋತ್ಸವ ಬಹುಶಃ ಯಶಸ್ವಿಯಾಗದಿದ್ದರೆ ಯಡಿಯೂರಪ್ಪ ಅವರನ್ನು ಬಿಜೆಪಿ ದೂರ ತಳ್ಳುತ್ತಿತ್ತು. ಇದೊಂದು ಚುನಾವಣೆಗೆ ಅವರನ್ನು ಬಳಸಿಕೊಳ್ಳುತ್ತಾರೆ ಎಂದರು.

ಮುಂದೆ ಇತಿಹಾಸದಲ್ಲಿ ಯಡಿಯೂರಪ್ಪ:

Tap to resize

Latest Videos

ಯಡಿಯೂರಪ್ಪ ಅವರ ಕೊನೆಯ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಅದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಆದರೆ, ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದ ಯಶಸ್ಸಿನಿಂದ ಯಡಿಯೂರಪ್ಪ ಅವರಿಗೆ ಎರಡು ಸ್ಥಾನ ಕೊಟ್ಟಿದ್ದಾರೆ. ಚುನಾವಣೆ ಮುಗಿದ ಬಳಿಕ ನೂರಕ್ಕೆ ನೂರು ಅವರಿಗೇನೂ ಅವಕಾಶ ಇಲ್ಲ. ಅವರಿಗೂ ವಯಸ್ಸಾಗಿದೆ. ಅವರ ಪಕ್ಷದಲ್ಲಿ 75 ವಯಸ್ಸಿನ ಮಾನದಂಡವಿದೆ. ಯಡಿಯೂರಪ್ಪಗೆ ಹೆಚ್ಚು ಕಡಿಮೆ 80 ವರ್ಷ ವಯಸ್ಸಾಗಿದೆ. ಇದೊಂದು ಚುನಾವಣೆಯಲ್ಲಿ ಅವರನ್ನು ಬಳಸಿಕೊಳ್ಳುತ್ತಾರೆ. ಮುಂದೆ ಬಹುಶಃ ಇತಿಹಾಸದಲ್ಲಿ ಯಡಿಯೂರಪ್ಪ ಇರುತ್ತಾರೆ ಅಷ್ಟೇ ಎಂದರು.

ತೀವ್ರ ಸ್ವರೂಪ ಪಡೆದುಕೊಂಡ ಮೊಟ್ಟೆ ಗಲಾಟೆ, ಮತ್ತೊಂದು ರಣಕಹಳೆ ಮೊಳಗಿಸಲು ಸಿದ್ದರಾಮಯ್ಯ ಟೀಮ್ ಸಜ್ಜು

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಳವಡಿಸಿರುವ ಫ್ಲೆಕ್ಸ್‌ನಲ್ಲಿ ಜವಾಹರಲಾಲ್‌ ನೆಹರು ಅವರ ಭಾವಚಿತ್ರ ಕೈಬಿಟ್ಟು, ಗೋಡ್ಸೆ ಅವರ ಭಾವಚಿತ್ರ ಹಾಕಿದ್ದಾರೆ. ಅವರ ಅಜೆಂಡಾ ಅದೇ ಆಗಿದೆ. ಹಂತ ಹಂತವಾಗಿ ಜಾರಿ ತರುತ್ತಿದ್ದಾರೆ. ಅವಕಾಶ ಸಿಕ್ಕಾಗ ಇದನ್ನು ಅವರು ಬಳಸಿಕೊಳ್ಳುತ್ತಾರೆ. ಜನ ತಿಳಿದುಕೊಳ್ಳಬೇಕು ಅಷ್ಟೇ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಮಂತ್ರಿಗಳೇ ಮ್ಯಾನೇಜಮೆಂಟ್‌ ಸರ್ಕಾರವೆಂದು ಹೇಳಿದ್ದಾರೆ. ಮಂತ್ರಿಗಳೇ ಈ ರೀತಿ ಹೇಳಿಕೆ ನೀಡಿರುವಾಗ ಅದಕ್ಕಿಂತ ಹೆಚ್ಚಿನ ಶಬ್ದ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
 

click me!