ಯತೀಂದ್ರ ಸಿದ್ದರಾಮಯ್ಯ ಮೇಲೆ ಸಿಎಂಗೆ ವಿಶೇಷ ಮಮಕಾರ, ವರುಣಾ ಕ್ಷೇತ್ರಕ್ಕೆ ಭರ್ಜರಿ ಅನುದಾನ

By Suvarna News  |  First Published Jul 5, 2022, 7:10 PM IST

* ಸಿದ್ದರಾಮಯ್ಯ ಪುತ್ರನ ಕ್ಷೇತ್ರಕ್ಕೆ ಭರ್ಜರಿ ಅನುದಾನ
* ಯತೀಂದ್ರ ಸಿದ್ದರಾಮಯ್ಯ ಮೇಲೆ ಸಿಎಂಗೆ ವಿಶೇಷ ಮಮಕಾರ
* ವರುಣ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ ಸಿಎಂ


ಬೆಂಗಳೂರು, ಮೈಸೂರು, (ಜುಲೈ.05): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಯತೀಂದ್ರ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ  ವಿಶೇಷ ಮಮಕಾರ ಇದ್ದಂತಿದೆ.

ಹೌದು....ಸ್ವಪಕ್ಷದ ಶಾಸಕರಿಗೆ ಬಿಟ್ಟು ವಿರೋಧ ಪಕ್ಷದ ಶಾಸಕ ಯತೀಂದ್ರ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಕ್ಷೇತ್ರಕ್ಕೆ ಭರ್ಜರಿ ಅನುದಾನ ನೀಡಿದ್ದಾರೆ. ಮೈಸೂರಿನ ಯತೀಂದ್ರ ಅವರ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು13.50 ಕೋಟಿ ರೂ. ವಿಶೇಷ ಅನುದಾನವನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ.

Latest Videos

undefined

130ಕ್ಕೆ ಗುರಿಯೊಂದಿಗೆ ಅಖಾಡಕ್ಕಿಳಿದ ಗುರಿಕಾರರು, ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ ಕೈಗೆ ನೂರೆಂಟು ವಿಘ್ನ

ಗ್ರಾಮೀಣ ರಸ್ತೆ ಕಾಮಗಾರಿಗೆ 5 ಕೋಟಿ ರೂ., ಕೆಆರ್ ಡಿ ಎಲ್ ಸಂಸ್ಥೆ ಮೂಲಕ ರಸ್ತೆ ಕಾಮಗಾರಿಗೆ ಅನುದಾನ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮೂಲಕ 8.50 ಕೋಟಿ ರೂ. ಸೇರಿದಂತೆ ಒಟ್ಟು  13.50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಬಿಜೆಪಿ ಶಾಸಕರುಗಳು ಅನುದಾನಕ್ಕೆ ಪದೇ-ಪದೇ ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಇದರ ಮಧ್ಯೆ ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಬೊಮ್ಮಾಯಿ ಅವರು ಕೋಟಿ-ಕೋಟಿ ಅನುದಾನ ಕೊಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ. ಇನ್ನು ಬಿಜೆಪಿ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

 ಅನುದಾನ ಕೋರಿ ಪತ್ರ ಬರೆದ ಸಿದ್ದು
ಮೊನ್ನೇ ಅಷ್ಟೇ(ಜುಲೈ 04) ರಂದು ಬಾದಾಮಿ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

64.48 ಕೋಟಿ ರೂ.ಅನುದಾನ ಮಂಜೂರು ಮಾಡಿ ಬಿಡುಗಡೆಗೆ ಮನವಿ ಮಾಡಿದ್ದಾರೆ. ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 40 ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆಯಿಂದ 6.80 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 10.60 ಕೋಟಿ, ಮುಜುರಾಯಿ ಇಲಾಖೆಯಿಂದ 1.65 ಕೋಟಿ ಅನುದಾನ, ಅಲ್ಪಸಂಖ್ಯಾತತ ಇಲಾಖೆಯಿಂದ 2.39 ಕೋಟಿ, ಸಾರಿಗೆ ಇಲಾಯಿಂದ 3.4 ಕೋಟಿ ಅನುದಾನ  ಒದಗಿಸುವಂತೆ ಸಿದ್ದರಾಮಯ್ಯ ಪತ್ರದ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಇದುವರೆಗೆ ಸಿಎಂ ಕರೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
 
ಈ ಹಿಂದೆ ಕೂಡ ಬಿಎಸ್ ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಗೆ ಭರ್ಜರಿ ಅನುದಾನ ಕೊಟ್ಟಿದ್ದರು. ಅಲ್ಲದೇ ಬಜೆಟ್‌ನಲ್ಲೂ ಸಹ ಬಾದಾಮಿಗೆ ವಿವಿಧ ಯೋಜನೆಗಳಿಗೆ ಕೋಟ್ಯಾನುಗಟ್ಟಲೇ ಹಣ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಂದೆಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧರಾದ ಯತೀಂದ್ರ ಸಿದ್ದರಾಮಯ್ಯ
ಮುಂಬರುವ ವಿಧಾನಸಭೆ ಚುನಾವಣೆಗೆ ವರುಣ ಕ್ಷೇತ್ರವನ್ನು ತಮ್ಮ ತಂದೆ ಸಿದ್ದರಾಮಯ್ಯನವರಿಗೆ ಬಿಟ್ಟುಕೊಡಲು ಸಿದ್ಧ ಎಂದು ಪುತ್ರ ಯತೀದ್ರ ಹೇಳಿದ್ದಾರೆ.

 ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ. ಜನ ಪಕ್ಷ ಅಪೇಕ್ಷಿಸಿದರೆ ಸಿದ್ದರಾಮಯ್ಯ ವರುಣಾದಲ್ಲಿಯೇ ಸ್ಪರ್ಧೆ ಮಾಡಲಿ. ನಾನು ಅವರ ಬೆಂಬಲಕ್ಕೆ ನಿಂತು ಅವರ ಗೆಲುವಿಗೆ ಶ್ರಮಿಸುತ್ತೇನೆ. ನಾನು ಬೇರೆ ಯಾವ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಸಿದ್ದರಾಮಯ್ಯ ಗೆಲ್ಲಿಸುವ ಕೆಲಸ ಮಾಡುತ್ತೇನೆ. ಅದು ನನ್ನ ಕರ್ತವ್ಯ. ಸಿದ್ದರಾಮಯ್ಯ ವರುಣಾಗೆ ಬಂದ ತಕ್ಷಣ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು. ಆ ರೀತಿಯ ಯಾವ ಚಿಂತನೆಯನ್ನು ನಾನು ಮಾಡಿಲ್ಲ. ಕ್ಷೇತ್ರದ ಆಯ್ಕೆ ವಿಚಾರಕ್ಕೆ ಇನ್ನೂ ಬಹಳಷ್ಟು ಸಮಯ ಇದೆ. ಬಹಳಷ್ಟು ಕ್ಷೇತ್ರಗಳಿಂದ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇದೆ. ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಅಳೆದು ತೂಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ಷೇತ್ರದ ಆಯ್ಕೆ ಚರ್ಚೆ ತುರ್ತು ಈಗ ಏನು ಇಲ್ಲ ಎಂದು ತಿಳಿಸಿದ್ದಾರೆ

click me!