ಅನುಪಮ್ ಹೇಳಿದ ಮೋದಿ ಮಂತ್ರಕ್ಕೆ ಮಹಾಘಟಬಂಧನ್ ಮುರಿದು ಬಿದ್ದ ಅಸಲಿ ಕತೆ!

By Suvarna NewsFirst Published Aug 26, 2020, 4:31 PM IST
Highlights

ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ ಬಾಲಿವುಡ್ ಹಿರಿಯ ನಟ/ ಮೋದಿ ಬೆಳೆದಂತೆ ಅವರ ವಿರೋಧಿಗಳಿಗೆ ಭ್ರಮನಿರಸನ ಹೆಚ್ಚಾಗುತಾ ಹೋಯಿತು/ ಆಡಳಿತಾತ್ಮಕವಾಗಿ ಅತಿಹೆಚ್ಚು ಸೇವೆ ಮಾಡಿದ ನಾಯಕ/ ಮೋದಿ ವಿರೋಧಿಳನ್ನು ಮೀರಿ ಬೆಳೆದರು

ನವದೆಹಲಿ(ಆ. 25)   ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದ್ದಾರೆ. ಮೋದಿ ಪ್ರತಿಯೊಂದು ಹೆಜ್ಜೆಯಲ್ಲೂ ತಮ್ಮ ವಿರೋಧಿಗಳು ತಪ್ಪು ಎಂದು ಸಾಬೀತು ಮಾಡುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.

ಮಾಧ್ಯಮವೊಂದರಲ್ಲಿನ ಅಂಕಣ ಬರೆದಿರುವ ಖೇರ್,  ಆಡಳಿತಾತ್ಮಕ ವಿಚಾರದಿಂದ ಹೇಳುವುದಾದರೆ ನರೇಂದ್ರ ಮೋದಿ ದೀರ್ಘಕಾಲ ಸೇವೆ ಮಾಡಿದವರು ಎಂಬ ಶ್ರೇಯ ಪಡೆದುಕೊಳ್ಳುತ್ತಾರೆ.  ಮೋದಿ ಸಿಎಂ ಮತ್ತು ಪಿಎಂ ಆದ ಒಟ್ಟು ಅವಧಿ 19  ವರ್ಷಗಳನ್ನು ಮೀರಲಿದೆ. ಮೋದಿಗೆ ಸರಿಸಾಟಿಯಾಗಿ ಯಾರೂ ಇಲ್ಲ ಎಂದಿದ್ದಾರೆ.

ಮೋದಿ ತಮಗೆ ಪರ್ಯಾಯ ಎಂದು ಯಾರನ್ನೂ ಹೇಳದ ಸ್ಥಿತಿಗೆ ತಲುಪಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರಧಾನಿಯಾಗಿ ದೇಶಕ್ಕೆ ಒಳಿತು ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

ಅಣ್ಣಾಮಲೈ; ಖಾಕಿಯಿಂದ ಕೇಸರಿತನಕ

ಅಕ್ಟೋಬರ್ 7, 2001  ರಂದು ನರೇಂದ್ರ ಮೋದಿ ಗುಜತರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಒಂದೇ ವರ್ಷದ ಅವಧಿಯಲ್ಲಿ ರಾಜ್ಯದ ಚಿತ್ರಣ ಬದಲು ಮಾಡಿದರು.  ತಮ್ಮ ವಿರೋಧಿಗಳು ಹೇಳುವುದು ತಪ್ಪು ಎಂಬುದನ್ನು ಅಲ್ಲಿಂದಲೇ ಸಾಬೀತು ಮಾಡಲು ಆರಂಭಿಸಿದರು. 

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪ್ರಮಾಣ ವಚನ ಸಂದರ್ಭ ವೇಳೆ ಮೋದಿ ವಿರೋಧಿ ಪಾಳಯದ ಎಲ್ಲ ನಾಯಕರು ವೇದಿಕೆ ಹಂಚಿಕೊಂಡಿದ್ದರು. ಇದಾಗಿ ಒಂದು ವರ್ಷದ ನಂತರ ಕೇಂದ್ರದಲ್ಲಿ ಮತ್ತೆ ಮೋದಿ ಬಹುಮತದಿಂದ ಅಧಿಕಾರ ಸ್ಥಾಪನೆ ಮಾಡಿದರು ಎಂದು  ರಾಜಕೀಯ ಇತಿಹಾಸದ ಘಟನೆ ಉಲ್ಲೇಖ ಮಾಡಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಹೆದರುವುದು ರಾಹುಲ್ ಗಾಂಧಿಗೆ ಮಾತ್ರ'

ನರೇಂದ್ರ ಮೋದಿ ಬೆಳೆದಂತೆ ಅವರ  ವಿರೋಧಿ ಮತ್ತು ಟೀಕಾಕಾರರಿಗೆ ಭ್ರಮನಿರಸನವೂ ಬೆಳೆಯುತ್ತಾ ಹೋಯಿತು.  ಪ್ರಜಾಪ್ರಭುತ್ವದಲ್ಲಿ ಒಂದೆ ಧ್ರುವ ಇರುವುದಿಲ್ಲ.  ಪ್ರಜಾಪ್ರಭುತ್ವದಲ್ಲಿ ಆಯ್ಕೆಗಳು ಬಹಳಷ್ಟು ಇರುತ್ತವೆ. 

ಎಡಚಿಂತನೆಯವರು, ಜಿಹಾದಿಗಳು, ಆಡಳಿತ ಮಾಡಲು ಸಾಧ್ಯವಾಗದೇ ಇದ್ದವರು ಮೋದಿ ವಿರೋಧಿಗಳಾಗಿ ನಿಂತಿದ್ದಾರೆ.  ಜನಧನ ಯೋಜನೆ, ಆಯುಷ್ಮಾನ್ ಭಾರತ್,  ಕಿಸಾನ್ ಸಮ್ಮಾನ್, ಅಟಲ್ ಪೆನ್ಶನ್, ಫಸಲ್ ಭೀಮಾ ಯೋಜನೆ, ಉಜ್ವಲ ಯೋಜನೆಗಳು ದೇಶದ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು ತಿಳಿಸಿದ್ದಾರೆ. ಮೋದಿ ಆಡಳಿತದಲ್ಲಿ ದೇಶ ಭ್ರಷ್ಟಾಚಾರ ಮುಕ್ತವಾಗುತ್ತಿದೆ ಎಂದು ಬಾಲಿವುಡ್ ಹಿರಿಯ ನಟ ಹೇಳಿದ್ದಾರೆ. 

 

 

click me!