ಕೇಜ್ರಿವಾಲ್ ಸರ್ಕಾರದಲ್ಲೂ ಹಗರಣದ ಕಪ್ಪುಕಲೆ ಗೋಚರ?

By Sathish Kumar KH  |  First Published Nov 26, 2022, 7:27 PM IST

ಮಿಸ್ಟರ್ ಪರಫೆಕ್ಟ್ ಕೇಜ್ರಿವಾಲ್ ಸರ್ಕಾರಕ್ಕೆ ಇದೀಗ `ಹಗರಣ' ಎಂಬ ಕಪ್ಪು ಕಲೆ ಮೆತ್ತಿಕೊಳ್ಳತೊಡಗಿದೆ. ದೆಹಲಿಯ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಇನ್ನು ಕೆಲವು ದಿನಗಳು ಇರುವ ಮುನ್ನವೇ ಎರಡೂವರೆ ವರ್ಷಗಳ ಹಿಂದೆ ಕೇಂದ್ರ ಜಾಗೃತ ಆಯೋಗ ನೀಡಿದ್ದ ವರದಿ ಇದೀಗ ದೆಹಲಿಯಲ್ಲಿ ಸದ್ದು ಮಾಡುತ್ತಿದೆ.


ಡೆಲ್ಲಿ ಮಂಜು

ನವದೆಹಲಿ (ನ.26) : ಮಿಸ್ಟರ್ ಪರಫೆಕ್ಟ್ ಕೇಜ್ರಿವಾಲ್ ಸರ್ಕಾರಕ್ಕೆ ಇದೀಗ `ಹಗರಣ' ಎಂಬ ಕಪ್ಪು ಕಲೆ ಮೆತ್ತಿಕೊಳ್ಳತೊಡಗಿದೆ. ದೆಹಲಿಯ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಇನ್ನು ಕೆಲವು ದಿನಗಳು ಇರುವ ಮುನ್ನವೇ ಎರಡೂವರೆ ವರ್ಷಗಳ ಹಿಂದೆ ಕೇಂದ್ರ ಜಾಗೃತ ಆಯೋಗ ನೀಡಿದ್ದ ವರದಿ ಇದೀಗ ದೆಹಲಿಯಲ್ಲಿ ಸದ್ದು ಮಾಡುತ್ತಿದೆ.
`ಪೊರಕೆ'ಯ ಹಿಡಿ ಬಿಚ್ಚಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿ ಹಗರಣ ಸದ್ದು ಮಾಡುತ್ತಿದೆ. ಆಪ್ ಪಕ್ಷದ ಅಜೆಂಡಾಕ್ಕೆ ಪೆಟ್ಟು ಕೊಡುವಂತಹ ಸುದ್ದಿಯಾಗಿದೆ.  ಶಾಲೆ, ಆರೋಗ್ಯ, ವಿದ್ಯುತ್ ದೆಹಲಿಯಲ್ಲಿ ಈ ಮೂರಕ್ಕೂ ಆಪ್ ಬಳಿ ಒಂದು ರೀತಿಯಲ್ಲಿ ಪೇಟೆಂಟ್ ಇದೆ. ಇವುಗಳ ಅಭಿವೃದ್ಧಿಯನ್ನು ಇತರರಿಗೆ ತೋರಿಸಿ ಕೇಜ್ರಿವಾಲ್ ಮಾಡೆಲ್ ಆಫ್ ಡೆವಲಪ್‍ಮೆಂಟ್ ಅಂಥ ಆಪ್ ಬಿಂಬಿಸುತ್ತಿದೆ. ಅದರ ಒಂದು ಅಂಶವೇ `ಶಿಕ್ಷಣ'. ದೆಹಲಿಯಲ್ಲಿ ಬಡವರಿಗೆ ಶಿಕ್ಷಣ ದುಬಾರಿ ಅನ್ನೋ ಕಲ್ಪನೆಗೆ ಹೊಸ ಟಚ್ ಕೊಟ್ಟು ಪ್ರತ್ಯೇಕ ಅಧ್ಯಾಯ ಬರೆದ ಆಪ್‍ಗೆ ಇದೀಗ ಅದೇ ಅಧ್ಯಾಯವೇ ಮುಳುವಾಗುತ್ತಿದೆ. ಇದರಿಂದಲೇ ಇದೀಗ ಹಗರಣದ ವಾಸೆ ಶುರುವಾಗಿದೆ. ಸಾವಿರ ಕೋಟಿಗಳ ಲೆಕ್ಕದಲ್ಲಿ ಹಣ ಲೂಟಿಯಾಗಿದೆ ಅನ್ನೋದು ಭಾರತೀಯ ಜನತಾ ಪಕ್ಷದ ನೇರ ಆರೋಪವೂ ಆಗಿದೆ.

Tap to resize

Latest Videos

ಲೂಟಿಯ ಲೆಕ್ಕ 1,300 ಕೋಟಿ.? : ಈಗ ದೆಹಲಿಯ ಜಾಗೃತ ನಿರ್ದೇಶನಾಲಯ ಹಗರಣದ ವಾಸನೆಯನ್ನು ಮತ್ತೆ ಪತ್ತೆ ಹಚ್ಚಿದೆ. ಕೋಟ್ಯಂತರ ರುಪಾಯಿ ಇದರಲ್ಲಿ ಲೂಟಿಯಾಗಿದೆ ಹಾಗಾಗಿ ಇದರ ಪತ್ತೆಗೆ ವಿಶೇಷ ತನಿಖಾ ಏಜೆನ್ಸಿಯನ್ನು ನೇಮಿಸಬೇಕು ಅಂತ ವರದಿಯೊಂದನ್ನು ಕಳುಹಿಸಿದೆ. ಆ ವರದಿಯಲ್ಲಿ ಹೆಚ್ಚು ಕಡಿಮೆ 1,300 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಉಲ್ಲೇಖಿಸಿದೆ. ಈ ಲೂಟಿಯ ಲೆಕ್ಕ ಇಡೀ ದೆಹಲಿಯಲ್ಲಿ ಇದೀಗ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಆಪ್‍ನ ಐಕಾನಿಕ್ ಕಾರ್ಯಕ್ರಮದ ಮೇಲೆ ಕಪ್ಪು ಕಲೆಗಳು ಕಾಣಿಸುತ್ತಿವೆ. ಕೇಜ್ರಿವಾಲ್ ಕೂಡ ಭಿನ್ನವಾಗಿ ನಿಲ್ಲುತ್ತಿಲ್ಲ ಅನ್ನೋ ಮಾತುಗಳು ದೆಹಲಿಯಲ್ಲಿ ಕೇಳಿಬರಲು ಶುರುವಾಗಿವೆ.

ಆಪ್‌ನಿಂದಲೇ ಆತಂಕ, ನಾಮಪತ್ರ ಹಿಂಪಡೆದ ಅಭ್ಯರ್ಥಿ ಜರಿವಾಲ ಉತ್ತರಕ್ಕೆ ಕೇಜ್ರಿವಾಲ್‌ ಕಂಗಾಲು!

ಪ್ರಮುಖ ಆರೋಪವಾಗಿ ಜಾಗೃತ ದಳದ ವರದಿ ಮುಂದಿಟ್ಟಿರೋದು 193 ಶಾಲೆಗಳಲ್ಲಿ 2405 ಕೊಠಡಿಗಳು ಕಟ್ಟಲಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಜೊತೆಗೆ ಭ್ರಷ್ಟಾಚಾರವೂ ಕೂಡ ನಡೆದಿದೆ ಅಂತ ವರದಿಯನ್ನು ದೆಹಲಿ ಮುಖ್ಯ ಕಾರ್ಯದರ್ಶಿಗೆ ನೀಡಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ಶಿಕ್ಷಣ ಹಾಗು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಿ ಅಂತಲೂ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಶಾಲಾ ಕಟ್ಟಡ ನಿರ್ಮಾಣದ ನೆಪದಲ್ಲಿ ಹಣ ಪೋಲು: ಆದರೆ ಇದು ಹೊಸ ವಿಷಯ ಅಲ್ಲವಾಗಿದೆ. ಬದಲಿಗೆ 2020 ಅಂದರೆ ಎರಡೂವರೆ ವರ್ಷಗಳ ಹಿಂದೆ ಕೇಂದ್ರ ಜಾಗೃತದಳ ಶಾಲಾ ಕಟ್ಟಡಗಳ ನಿರ್ಮಾಣ ವಿಚಾರದಲ್ಲಿ ದುಡ್ಡು ಪೋಲ್ ಆಗಿದೆ ಎಂದು ಹೇಳಿ ದೆಹಲಿ ಸರ್ಕಾರದ ಅಭಿಪ್ರಾಯವನ್ನು ಕೂಡ ಕೇಳಿತ್ತು. 2015ರಲ್ಲಿ ಕೇಜ್ರಿವಾಲ್ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳು ಇದ್ದವು. ಅದರಲ್ಲೂ ಬಬ್ಬರ್ ಅಂಡ್ ಬಬ್ಬರ್ ಅಸೋಸಿಯೇಟ್ಸ್ ಎಂಬ ಖಾಸಗಿ ವ್ಯಕ್ತಿಗಳ ಪಾತ್ರದ ಬಗ್ಗೆ ಅನುಮಾನಗಳನ್ನು ಕೂಡ ವ್ಯಕ್ತಪಡಿಸಿತ್ತು. ಅಲ್ಲದೇ ಸಂವಿಧಾನೇತರ ವ್ಯಕ್ತಿಗಳು ನೀತಿ ಜಾರಿಯಲ್ಲಿ ಹಸ್ತಕ್ಷೇಪವೂ ಹೆಚ್ಚಾಗಿದೆ ಅಂತಲೂ ಜಾಗೃತಿ ದಳ ವರದಿಯಲ್ಲಿ ಉಲ್ಲೇಖಿಸಿತ್ತು.

MCD Election 2022: ಪಾಲಿಕೆ ಚುನಾವಣೆಯಲ್ಲಿ ಯಾರಿಗೆ ಡೆಲ್ಲಿಯ ದಿಲ್‌?

ಬಿಜೆಪಿ ಕಚೇರಿಯಲ್ಲಿ ಸಿದ್ಧವಾದ ವರದಿ?: ಹಗರಣದ ವಿಚಾರ ಹೊರಗಡೆ ಬಿದ್ದ ಕೂಡಲೇ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಇದು ಬಿಜೆಪಿ ಹೆಡ್ ಆಫೀಸ್‍ನಲ್ಲಿ ಸಿದ್ದವಾಗಿರುವ ಸ್ಕ್ರಿಪ್ಟ್ ಆಗಿದೆ. ಅಲ್ಲಿ ಸಿದ್ಧವಾದ ಬಳಿಕ ಮಾಧ್ಯಮಗಳಿಗೆ ಬಿಡುಗಡೆಯಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.  ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿರುವ ಹೊತ್ತಲ್ಲಿ ಆಪ್‍ನ ಐಕಾನಿಕ್ ಯೋಜನೆಯ ಮೇಲೆ ಹಗರಣದ ಕರಿನೆರಳು ಬೀಳುತ್ತಿರುವುದು ಕೇಜ್ರಿವಾಲ್ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ದೆಹಲಿ ಮತದಾರರ ಇದನ್ನು ಹೇಗೆ ಸ್ವೀಕರಿಸುತ್ತಾನೆ ಅನ್ನೋದಕ್ಕೆ ಫಲಿತಾಂಶದವರೆಗೂ ಕಾಯಬೇಕಿದೆ.
 

click me!