ಸೋನಿಯಾರ ಆತ್ಮಕಥೆ ಓದಲು ಯದುವೀರ್‌ಗೆ ಹೇಳಿದ್ಯಾರು? ಸಂಸದ ಆ ಹೇಳಿಕೆಗೆ ಬಿಕೆ ಹರಿಪ್ರಸಾದ್ ಗರಂ!

Kannadaprabha News   | Kannada Prabha
Published : Nov 20, 2026, 06:13 AM IST
BK hariprasad on MP Yaduveer wadeyar

ಸಾರಾಂಶ

ಸೋನಿಯಾ ಗಾಂಧಿ ಅವರ ಪುಸ್ತಕ ಓದುವುದಿಲ್ಲ ಎಂದ ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರಿಗೆ ಪುಸ್ತಕ ಓದುವ ಹವ್ಯಾಸವಿಲ್ಲ ಎಂದು ಟೀಕಿಸಿದ ಅವರು, ಪ್ರಧಾನಿ ಮೋದಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು(ನ.20): ಸೋನಿಯಾ ಗಾಂಧಿ(Sonia Gandhi) ಅವರ ಪುಸ್ತಕ Belonging: A Journey Of Love ಓದುವುದಿಲ್ಲ ಎಂದು ಹೇಳಿರುವ ಮೈಸೂರು ಸಂಸದ ಯದುವೀರ್ ಒಡೆಯರ್(Mysuru MP Yaduveer Wodeyar) ಅವರಿಗೆ ಪುಸ್ತಕ ಓದುವಂತೆ ಹೇಳುತ್ತಿರುವವರು ಯಾರು? ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

-ಬಿಜೆಪಿ, ಆರೆಸ್ಸೆಸ್‌ಗೆ ಪುಸ್ತಕ ಓದುವ ಹವ್ಯಾಸ ಇಲ್ಲ

ಮೈಸೂರು ಸಂಸದ ಹೇಳಿಕೆ ಕುರಿತಂತೆ ಗುರುವಾರ ಇಂದಿರಾಗಾಂಧಿ ಅವರ 110ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಪುಸ್ತಕ ಓದುವ ಹವ್ಯಾಸವಿದ್ದಿದ್ದರೆ ದೇಶಕ್ಕೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸೋನಿಯಾರನ್ನು ಕಾಂಗ್ರೆಸ್‌ನವರು ತಮಗೆ ಬೇಕಾದಂತೆ ನಿರೂಪಿಸಿಕೊಂಡಿದ್ದಾರೆ ಎಂಬ ಯದುವೀರ್ ಹೇಳಿಕೆಗೆ ಪ್ರತಿಕ್ರಿಯಿಸಿರು. ಯಾರು ಪುಸ್ತಕ ಓದಬೇಕೋ ಅವರು ಓದುತ್ತಾರೆ. ಓದದಿದ್ದರೆ ಅದರಿಂದ ಬೇರೆಯವರಿಗೆ ತೊಂದರೆಯಿಲ್ಲ. ಆದರೆ, ಪುಸ್ತಕ ಓದುವ ಬಗ್ಗೆ ಮಾತನಾಡುವವರು ಮೊದಲು ತಮ್ಮ ಓದುವ ಹವ್ಯಾಸದ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಲಿ ಎಂದರು.

ಪ್ರಧಾನಿ ಮೋದಿ ವಿರುದ್ಧವೂ ಬಿಕೆ ಟೀಕೆ!

ಪುಸ್ತಕ ಓದುವ ಸಂಸ್ಕೃತಿ ಬಿಜೆಪಿಯವರಲ್ಲಿ ಮತ್ತು ಆರ್‌ಎಸ್‌ಎಸ್‌ನವರಲ್ಲಿ ಇದ್ದಿದ್ದರೆ ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಪದವಿ ಪ್ರಮಾಣಪತ್ರದ ಬಗ್ಗೆಯೇ ವಿವಾದಗಳಿರುವ ಪ್ರಧಾನಿಯನ್ನು ಹೊಂದಿರುವವರು ಇತರರಿಗೆ ಪುಸ್ತಕ ಓದುವ ಬಗ್ಗೆ ಉಪದೇಶ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ಸೋನಿಯಾ ಗಾಂಧಿ ಅವರ ತ್ಯಾಗ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅವರೊಂದಿಗೆ 18 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರ ವ್ಯಕ್ತಿತ್ವ ಮತ್ತು ತ್ಯಾಗದ ಬಗ್ಗೆ ನನಗೆ ಅರಿವಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಆ ಸ್ಥಾನ ಕೇಳಿಯೂ ಇಲ್ಲ, ಲಾಭಿಯೂ ಮಾಡ್ತಿಲ್ಲ: ಮಾಜಿ ಸಚಿವ ಮುರುಗೇಶ್ ನಿರಾಣಿ!
ಉತ್ತರ ಕರ್ನಾಟಕದ ಸಮಸ್ಯೆಗಳನ್ನ ಬಗೆಹರಿಸದ್ದಕ್ಕೆ ವಸತಿ, ಊಟ ಸೇರಿ ಸರ್ಕಾರಿ ಸೌಲಭ್ಯಗಳನ್ನೇ ತಿರಸ್ಕರಿಸಿದ ಜೆಡಿಎಸ್ ಶಾಸಕ ಕಂದಕೂರು