ನನ್ನ ಮೇಲೆ ಯಾರಾದರೂ ದೂರು ಕೊಡಲಿ: ಸಿದ್ದು ಹೆಸರೇಳದೇ ಅರ್ಕಾವತಿ ಹಗರಣ ಪ್ರಸ್ತಾಪಿಸಿದ ಹರಿಪ್ರಸಾದ್

By Kannadaprabha News  |  First Published Sep 12, 2023, 4:45 AM IST

ನನ್ನ ಮೇಲೆ ಯಾರಾದರೂ ಯಾರಿಗೆ ಬೇಕಾದರೂ ದೂರು ಕೊಡಲಿ. ಅದಕ್ಕೂ ಮೊದಲು ತಾವೇನು ಅಂತ ತಿಳಿದುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ತಾಲೂಕಿನ ತಳಬಾಳದಲ್ಲಿ ಜರುಗಿದ ಶ್ರೀಶರಣಬಸವೇಶ್ವರ ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿದ್ದರು. 


ಕುಕನೂರು (ಸೆ.12): ನನ್ನ ಮೇಲೆ ಯಾರಾದರೂ ಯಾರಿಗೆ ಬೇಕಾದರೂ ದೂರು ಕೊಡಲಿ. ಅದಕ್ಕೂ ಮೊದಲು ತಾವೇನು ಅಂತ ತಿಳಿದುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ತಾಲೂಕಿನ ತಳಬಾಳದಲ್ಲಿ ಜರುಗಿದ ಶ್ರೀಶರಣಬಸವೇಶ್ವರ ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿದ್ದರು. 

ಈ ವೇಳೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರಿಗೆ ಸಿಎಂ ಸಿದ್ದರಾಮಯ್ಯ ದೂರು ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಎಲ್ಲರೂ ದೂರು ನೀಡಲಿ. ಅದು ನನಗೆ ಸಂತೋಷ. ಅದುವೇ ಪ್ರಜಾಪ್ರಭುತ್ವ. ಆದರೆ, ದೂರು ನೀಡುವವರು ತಾವೇನು ಅಂತ ತಿಳಿದುಕೊಳ್ಳಲಿ ಎಂದು ಅವರು ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು. ಬಿ.ಕೆ.ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿರುವ ಕಾಂಗ್ರೆಸ್ ಶಾಸಕ ನಂಜೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತುಂಬ ಸಂತೋಷ. ಅವರಿಗೆ ಒಳ್ಳೆಯದಾಗಲಿ. ನನ್ನ ಬಗ್ಗೆ ಮಾತನಾಡಿದವರ ಮೇಲೆ ಸಾಕಷ್ಟು ಹಗರಣಗಳ ಆರೋಪ ಇದೆ. 

Tap to resize

Latest Videos

undefined

ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!

ಅವರು ಈ ಎಲ್ಲ ಹಗರಣದಿಂದ ಪಾರಾಗಲು ಹೀಗೆಲ್ಲ ಹೇಳುತ್ತಿರಬಹುದು. ಅದರಿಂದ ಅವರು ಪಾರಾಗ್ತಾರಾ? ಎಂದು ಪ್ರಶ್ನಿಸಿದ ಹರಿಪ್ರಸಾದ್, ಆ ಧೈರ್ಯ ಇದ್ದರೆ ಅವರು ಮಾತನಾಡಲಿ ಎನ್ನುವ ಮೂಲಕ ಪರೋಕ್ಷವಾಗಿ ಅರ್ಕಾವತಿ ಹಗರಣ ಪ್ರಸ್ತಾಪಿಸಿ, ಸ್ವ ಪಕ್ಷದ ಶಾಸಕರಿಗೆ ಟಾಂಗ್ ನೀಡಿದರು. ಎಚ್. ವಿಶ್ವನಾಥ ಟೀಕೆ ವಿಚಾರವಾಗಿ ಮಾತನಾಡಿ, ವಿಶ್ವನಾಥ ಯಾವ ಪಕ್ಷದಲ್ಲಿದ್ದಾರೆ? ನಮ್ಮ ಪಕ್ಷದಲ್ಲಿ ಇದ್ದಾರಾ ಈಗ? ಎಂದು ಪ್ರಶ್ನಿಸಿದರು. ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸರ್ಕಾರ ಇನ್ನೂ ಮೂರು ತಿಂಗಳು ಮಾತ್ರ ಇರೋದು ಎಂದಿರುವುದಕ್ಕೆ ಉತ್ತರಿಸಿದ ಅವರು, ಸರ್ಕಾರ ಪತನ ಆಗುತ್ತದೆ ಎಂದು ಬಿಜೆಪಿಗರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಕಿತ್ತಾಟವಿಲ್ಲ. 

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಬದಲಾಗಿ ಪ್ರಜಾಪ್ರಭುತ್ವ ಇದೆ. ಇದರಿಂದ ನಮಗೆ ಅನ್ನಿಸಿದ್ದನ್ನು ನಾವು ಹೇಳುತ್ತೇವೆ. ಬಿಜೆಪಿಯವರ ರೀತಿಯಲ್ಲಿ ನಾಗ್ಪುರದಿಂದ ನಿರ್ದೇಶನ ಪಡೆದು ಮಾತನಾಡಲ್ಲ ಎಂದರು. ತಳಬಾಳ ಗ್ರಾಮದ ಭೀಮಲಿಂಗೇಶ್ವರ ದೇವಸ್ಥಾನದಲ್ಲಿ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯರಾದ ತಿಮ್ಮಣ್ಣ ಚೌಡಿ, ದೇವೇಂದ್ರಪ್ಪ ಕಮ್ಮಾರ, ಪ್ರಮುಖರಾದ ಜಾಕಿರ್ ಹುಸೇನ್ ಕೊಪ್ಪಳ, ಮಲ್ಲಿಕ್‌ಸಾಬ್ ನೂರಬಾಸ್, ಶಂಕರಗೌಡ ಪೊಲೀಸ್ ಪಾಟೀಲ್ ಇತರರಿದ್ದರು.

click me!