ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಯವರಿಗೆ ಆತಂಕವಿದೆ. ಆದರೆ ಸರ್ಕಾರ ಅದನ್ನು ಜಾರಿ ಮಾಡುತ್ತದೆ, ಯಾವುದೇ ಸಂದೇಹ ಬೇಡ ಎಂದು ಹಿಂದುಳಿದ ವರ್ಗ, ಪರಿಶಿಷ್ಟಪಂಗಡ ಅಭಿವೃದ್ಧಿ ಇಲಾಖೆ ಸಚಿವ ಸಚಿವ ಶಿವರಾಜ ತಂಗಡಗಿ ಹೇಳಿದರು.
ಗಂಗಾವತಿ (ಮೇ.30) ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಯವರಿಗೆ ಆತಂಕವಿದೆ. ಆದರೆ ಸರ್ಕಾರ ಅದನ್ನು ಜಾರಿ ಮಾಡುತ್ತದೆ, ಯಾವುದೇ ಸಂದೇಹ ಬೇಡ ಎಂದು ಹಿಂದುಳಿದ ವರ್ಗ, ಪರಿಶಿಷ್ಟಪಂಗಡ ಅಭಿವೃದ್ಧಿ ಇಲಾಖೆ ಸಚಿವ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಚಿವರಾದ ಮೇಲೆ ಪ್ರಥಮ ಬಾರಿಗೆ ಗಂಗಾವತಿ ನಗರಕ್ಕೆ ಆಗಮಿಸಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಸನ್ಮಾನಿತಗೊಂಡು ಮಾತನಾಡಿದರು. ಗ್ಯಾರಂಟಿ ಯೋಜನೆ ಜಾರಿಗೆ ಬಂದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಳ್ಳುತ್ತೇವೆ ಎನ್ನುವ ಭಯ ಬಿಜೆಪಿಯವರಿಗೆ ಇದೆ. ಜೆಡಿಎಸ್ ವಿಳಾಸ ಇಲ್ಲದಂತಾಗಿದೆ. ಈ ಕಾರಣಕ್ಕೆ ಬಿಜೆಪಿಯವರು ಗ್ಯಾರಂಟಿ ಯೋಜನೆ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದರು.
undefined
Bhavishyatku Guarantee: ಕರ್ನಾಟಕ ಕಾಂಗ್ರೆಸ್ ರೀತಿ ಟಿಡಿಪಿ ಗ್ಯಾರಂಟಿ ಘೋಷಣೆ ಮಾಡಿದ ಚಂದ್ರಬಾಬು ನಾಯ್ಡು!
ಎಲ್ಲರಿಗೂ ಉಚಿತವಾಗಿ ಯೋಜನೆ ನೀಡಿದರೆ ಸರ್ಕಾರಕ್ಕೆ ಹೊರೆ ಎನ್ನುವ ಬಿಜೆಪಿಯವರ ಅರೋಪದ ಕುರಿತು ಹೇಳಿದ ಪ್ರಶ್ನೆಗೆ ಉತ್ತರಿಸಿದ ತಂಗಡಗಿ, ಬಿಜೆಪಿಯವರು ವಿಜಯ ಮಲ್ಯ, ನೀರವ್ ಮೋದಿ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲಿಲ್ಲ. ಅದನ್ನು ಹೇಳುವುದು ಬಿಟ್ಟು ಉಚಿತ ಗ್ಯಾರಂಟಿ ಯೋಜನೆ ಬಗ್ಗೆ ಏನು ಪ್ರಶ್ನೆ ಮಾಡುತ್ತಾರೆ ಎಂದರು. ಬಿಜೆಪಿಯವರಿಗೆ ದೇಶದ ಕಾಳಜಿ ಇಲ್ಲ, ಹೋರಾಟಗಾರರು ಇಲ್ಲ. ಕಾಂಗ್ರೆಸ್ ದೇಶದ ರಕ್ಷಣೆ, ಬಡವರ ಕಾಳಜಿ ಇರುವ ಪಕ್ಷ ಎಂದರು.
ತಮಗೆ ವಹಿಸಿದ ಖಾತೆ ಬಗ್ಗೆ ತೃಪ್ತಿ ಇದೆಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಹಿಸಿದ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುವುದಾಗಿ ಹೇಳಿದರು. ಆನೆಗೊಂದಿ, ಕನಕಗಿರಿ, ಹಂಪಿ ಉತ್ಸವ ಮಾಡಲಾಗುವುದು ಎಂದರು. ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಸಮಾನಂತರ ಜಲಾಶಯದ ನಿರ್ಮಾಣದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಜಲಾಶಯ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಉದ್ದೇಶ. ಈಗಲೂ ಸಮಾನಂತರ ಜಲಾಶಯದ ಬಗ್ಗೆ ನನ್ನ ವಿರೋಧ ಇದೆ ಎಂದರು. ಅಂಜನಾದ್ರಿ ಬೆಟ್ಟಕ್ಕೆ .120 ಕೋಟಿ ಕೇವಲ ಬಜೆಟ್‌ನಲ್ಲಿ ಘೋಷಣೆಯಾಗಿದೆಯೇ ಹೊರತು ಕಾಮಗಾರಿ ಏಕೆ ಪ್ರಾರಂಭವಾಗಿಲ್ಲ? ಬಿಜೆಪಿಯವರು ಪ್ರಚಾರಕ್ಕಾಗಿ ಘೋಷಣೆ ಮಾಡಿದ್ದಾರೆಯೆ ಹೊರತು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ನನ್ನ ಹಿರಿಯ ಅಣ್ಣ ಇದ್ದಂತೆ. ಅವರು ಸಹ ಈ ಬಾರಿ ಗೆಲವು ಸಾಧಿಸಬಹುದಾಗಿತ್ತು. ಕೆಲವೊಂದು ಅಡ್ಡಿ-ಆತಂಕಗಳು ಸೋಲಿಗೆ ಕಾರಣವಾಯಿತು ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ರೆಡ್ಡಿ ಶ್ರೀನಿವಾಸ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ, ನಗರಸಭಾ ಸದಸ್ಯ ಮನೋಹರಸ್ವಾಮಿ, ಎಫ್. ರಾಘವೇಂದ್ರ, ವಿಠಾಲಾಪುರ ಯಮನಪ್ಪ, ಜೋಗದ ಲಿಂಗಪ್ಪ, ಬಳ್ಳಾರಿ ರಾಮಣ್ಣನಾಯಕ ಇದ್ದರು. ಇದೇ ಸಂದರ್ಭದಲ್ಲಿ ನಗರದ ಶ್ರೀ ಚೆನ್ನಬಸವಸ್ವಾಮಿ ಮಠ ಮತ್ತು ದುರ್ಗಾದೇವಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಶಿಸ್ತುಕ್ರಮಕ್ಕೆ ಶಿಫಾರಸು
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಮುಖಂಡರ ಮೇಲೆ ಶಿಸ್ತುಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗುತ್ತದೆ ಎಂದು ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರ ಸೋಲಿಗೆ ಯಾರು ಕಾರಣರು ಎನ್ನುವುದರ ಬಗ್ಗೆ ಕೆಪಿಸಿಸಿ ಸಮಿತಿ ಮಾಹಿತಿ ಪಡೆದಿದೆ. ದಾಖಲಾತಿಗಳನ್ನು ಕೊಡಲಾಗಿದೆ. ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ಸೇರಿದಂತೆ ಅನ್ಯ ಪಕ್ಷದವರೊಂದಿಗೆ ಕೈ ಜೋಡಿಸಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶಿಸ್ತುಕ್ರಮಕ್ಕೆ ನಿರ್ದಾಕ್ಷಿಣ್ಯ ವರದಿ ಸಲ್ಲಿಸಲಾಗುತ್ತದೆ ಎಂದರು.
ಚುನಾವಣೆ ಜಯಿಸಲು ಹನುಮಮಾಲೆ ಧರಿಸಿದ ಕೈ ಕಾರ್ಯಕರ್ತರು!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಕ್ಬಾಲ್ ಅನ್ಸಾರಿ ಅವರಿಗೆ ಸರ್ಕಾರದಲ್ಲಿ ಸ್ಥಾನಮಾನ ನೀಡಲಾಗುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ಇದೆ ಎಂದರು.