Karnataka election 2023: ಕಾಂಗ್ರೆಸ್‌ ಮುಕ್ತ ಭಾರತ ಮಾಡುವ ಬದ್ಧರಾಗಬೇಕು: ಬಿಎಸ್‌ವೈ

By Kannadaprabha News  |  First Published Apr 28, 2023, 10:52 AM IST

ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣೆಯಾಗಿದ್ದ ದಿ.ಆನಂದ ಮಾಮನಿಯವರ ಕಾರ್ಯಗಳನ್ನು ನಾವು ಮೆಚ್ಚಬೇಕಿದ್ದು, ಅವರ ಸ್ಥಾನದಲ್ಲಿ ರತ್ನಾ ಮಾಮನಿಯವರನ್ನು ಪಕ್ಷವು ಅಭ್ಯರ್ಥಿಯನ್ನಾಗಿಸಿರುವುದರಿಂದ ಅವರಿಗೆ ತಮ್ಮ ಮತ ನೀಡುವ ಮೂಲಕ ಭಾರಿ ಅಂತರದಿಂದ ಆರಿಸಿ ತರಬೇಕು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.


ಸವದತ್ತಿ (ಏ.28) : ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣೆಯಾಗಿದ್ದ ದಿ.ಆನಂದ ಮಾಮನಿಯವರ ಕಾರ್ಯಗಳನ್ನು ನಾವು ಮೆಚ್ಚಬೇಕಿದ್ದು, ಅವರ ಸ್ಥಾನದಲ್ಲಿ ರತ್ನಾ ಮಾಮನಿಯವರನ್ನು ಪಕ್ಷವು ಅಭ್ಯರ್ಥಿಯನ್ನಾಗಿಸಿರುವುದರಿಂದ ಅವರಿಗೆ ತಮ್ಮ ಮತ ನೀಡುವ ಮೂಲಕ ಭಾರಿ ಅಂತರದಿಂದ ಆರಿಸಿ ತರಬೇಕು ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಬಿಜೆಪಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ (BJP)ಪಕ್ಷದ ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಕಾಂಗ್ರೆಸ್‌ ಮುಕ್ತ ಭಾರತ(Congress free india)ವನ್ನು ಮಾಡುವ ನಿಟ್ಟಿನಲ್ಲಿ ನಾವೆಲ್ಲ ಬದ್ಧರಾಗಬೇಕು ಎಂದರು.

Tap to resize

Latest Videos

Karnataka election 2023: ಯುವಕರ ಮುಂದಿನ ಭವಿಷ್ಯಕ್ಕಾಗಿ ಬಿಜೆಪಿ ಗೆಲ್ಲಿಸಿ: ಬಿಎಸ್‌ವೈ ಮನವಿ

ರಾಜ್ಯದಲ್ಲಿ 135 ಸೀಟುಗಳು ಬಿಜೆಪಿ ಪಕ್ಷದಿಂದ ಬರಲಿದ್ದು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಇದನ್ನು ರಕ್ತದಲ್ಲಿ ಬೇಕಾದರೇ ಬರೆದುಕೊಡುವೆ. ಇಡೀ ವಿಶ್ವವನ್ನೇ ಮೆಚ್ಚಿದ ನರೇಂದ್ರ ಮೋದಿಯವರನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುವಲ್ಲಿ ದೇಶದ ಅನೇಕ ರಾಜ್ಯಗಳಿಂದ ಪ್ರಮುಖರು ಬರುತ್ತಿದ್ದು, ಯಾವುದೇ ಅನುಮಾನ ಬೇಡ. ಬಿಜೆಪಿ ಸರ್ಕಾರ ನಿಶ್ಚಿತ ಎಂದರು.

ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 5 ವರ್ಷದ ಅವ​ಧಿಯಲ್ಲಿ ಸುರೇಶ ಅಂಗಡಿ, ಉಮೇಶ ಕತ್ತಿ ಹಾಗೂ ಆನಂದ ಮಾಮನಿಯಂತ ಪ್ರಮುಖ ಮೂವರನ್ನು ನಾವು ಕಳೆದುಕೊಂಡಿರುವುದು ದೊಡ್ಡ ದುರಂತ ಎಂದರು.

ಕೊರೋನಾ ಸಂದರ್ಭದಲ್ಲಿ ಜಗತ್ತಿಗೆ ಲಸಿಕೆ ನೀಡಿದ ದೇಶ ನಮ್ಮದಾಗಿದ್ದು, ಅದಕ್ಕೆ ನರೇಂದ್ರ ಮೋದಿ(Narendra Modi)ಯಂತ ಪ್ರಧಾನಿಯವರು ಕಾರಣ. 9 ವರ್ಷದಲ್ಲಿ ಭಾರತದ ಇತಿಹಾಸವನ್ನು ಜಗತ್ತಿಗೆ ಪ್ರಸಿದ್ಧ ಮಾಡಿ ಪಕ್ಷ ಬಿಜೆಪಿ ಪಕ್ಷವಾಗಿದೆ. ಹಿಂದುಗಳನ್ನು ತುಳಿಯುವಂತ ಕೆಲಸ ದೇಶದಲ್ಲಿ ನಡೆಯುತ್ತಿದ್ದು, ದೇಶವನ್ನು ಕಟ್ಟುವಲ್ಲಿ ಬಿಜೆಪಿ ಬದ್ಧವಾಗಿದೆ. ಮೀಸಲಾತಿ ಕೇವಲ ಪಂಚಮಸಾಲಿಗಳಿಗೆ ಮಾತ್ರ ಸಿಕ್ಕಿಲ್ಲ, ಎಲ್ಲ ಸಮುದಾಯಗಳಿಗೆ ದೊರಕಿದ್ದು, ಇದನ್ನು ಮಾಡಿದ್ದು ಬಿಜೆಪಿ ಪಕ್ಷ. ಜನಪರವಾಗಿರುವಂತ ಬಿಜೆಪಿಗೆ ಮತ ನೀಡುವ ಮೂಲಕ ರತ್ನಾ ಆನಂದ ಮಾಮನಿಯವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಮಾತನಾಡಿ, ಮತಕ್ಷೇತ್ರದಲ್ಲಿ ನಮ್ಮ ಯಜಮಾನರು ಮಾಡಿದಂತ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನಗೆ ಮತ ನೀಡುವ ಮೂಲಕ ಅವರ ಆಸೆಗಳನ್ನು ಈಡೇರಿಸಲು ಸಹಕಾರ ನೀಡಬೇಕು ಎಂದರು.

ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್‌, ಸವದಿ: ಯಡಿಯೂರಪ್ಪ

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಸಂಸದೆ ಮಂಗಲ ಅಂಗಡಿ, ವಿರೂಪಾಕ್ಷ ಮಾಮನಿ, ಬಿ.ವಿ.ಮಲಗೌಡರ ಮಾತನಾಡಿದರು. ಬಸಯ್ಯ ಹಿರೇಮಠ, ಶಿವಾನಂದ ಹೂಗಾರ, ಜಗದೀಶ ಶಿಂತ್ರಿ, ಅಜೀತ ದೇಸಾಯಿ, ಬಸವರಾಜ ಪಟ್ಟಣಶೆಟ್ಟಿ, ಸಂಜೀವ ನವಲಗುಂದ, ನಯನಾ ಬಸ್ಮೆ, ಎಫ್‌.ಎಸ್‌.ಸಿದ್ದನಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪಕ್ಷವನ್ನು ಅಧಿ​ಕಾರಕ್ಕೆ ತರುವುದಕ್ಕೋಸ್ಕರ ನಾನು ನಿರಂತರವಾಗಿ ಶ್ರಮಿಸುತ್ತಿದ್ದು, ಇಂತಹ ಇಳಿ ವಯಸ್ಸಿನಲ್ಲಿಯೂ ರಾಜ್ಯದ ತುಂಬ ಸಂಚರಿಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಸ್ಪ​ರ್ಧಿಸಿರುವ ಮಹಿಳೆ ರತ್ನಾ ಮಾಮನಿಯವರನ್ನು ತಾವು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು.

ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ.

click me!