ದಳಪತಿಗಳು ಉಡೀಸ್: ಗೆದ್ದಿದ್ದ ಒಂದೇ ಒಂದು ಸ್ಥಾನದಿಂದ ಅಧಿಕಾರಕ್ಕೇರಿದ ಬಿಜೆಪಿ

By Suvarna News  |  First Published Oct 31, 2020, 7:25 PM IST

ಗೆಲುವಿನ ನಾಗಲೋಟ ಮುಂದುವರಿಸಲು ಸಚಿವ ನಾರಾಯಣ ಗೌಡ ಇದೀಗ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.
 


ಮಂಡ್ಯ, (ಅ.31): ಕಳೆದ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಭದ್ರ ಕೋಟೆಯನ್ನು ಛಿದ್ರ ಮಾಡಿದ್ದ ಸಚಿವ ನಾರಾಯಣ ಗೌಡ ಇದೀಗ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಕೇವಲ ಓರ್ವ ಸದಸ್ಯನ ಮೂಲಕ ಇಡೀ ಕೆಆರ್‌ಪೇಟೆ ಪುರಸಭೆಯಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಸಚಿವ ನಾರಾಯಣಗೌಡ ಸಕ್ಸಸ್ ಆಗಿದ್ದಾರೆ.

Tap to resize

Latest Videos

ಹೌದು...ಕೆಆರ್‌ಪೇಟೆ ಪುರಸಭೆಯಲ್ಲಿ ಬಿಜೆಪಿಯಿಂದ ಓರ್ವ ಅಭ್ಯರ್ಥಿ ಇದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ 14 ಮಂದಿಯನ್ನು ಸೆಳೆದುಕೊಂಡು ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಗೆಲ್ಲಿಸಕೊಳ್ಳುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್‍ಗೆ ಆಘಾತ ನೀಡಿದ್ದಾರೆ. 

ನಾಮಪತ್ರ ವಾಪಸ್ ಪಡೆದು ಚುನಾವಣಾ ಅಖಾಡದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಸದ್ಯ ಪುರಸಭೆಯ ಅಧ್ಯಕ್ಷೆಯಾಗಿರುವ ಮಾದೇವಿ ಜೆಡಿಎಸ್ ಪಕ್ಷದಿಂದ 15ನೇ ವಾರ್ಡ್‍ನಲ್ಲಿ ಗೆಲುವು ಸಾಧಿಸಿದ್ದರು. ಆದರೆ ಇವರು ನಾರಾಯಣ ಗೌಡ ಬೆಂಬಲಿಗರು ಆಗಿರುವ ಕಾರಣ ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಚುನಾವಣೆಯಲ್ಲಿ ಪುರಸಭೆಯ ಅಧ್ಯಕ್ಷ ಮೀಸಲಾತಿ ಎಸ್‍ಟಿ ಜನಾಂಗಕ್ಕೆ ಲಭಿಸಿತ್ತು. ಹೀಗಾಗಿ ಅನಿವಾರ್ಯವಾಗಿ ಜೆಡಿಎಸ್ ಪಕ್ಷದವರು ನಾರಾಯಣಗೌಡ ಪರ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಕೆಆರ್‌ಪೇಟೆ ಪುರಸಭೆ 23 ವಾರ್ಡ್ ಹೊಂದಿದ್ದು, ಈ ಪೈಕಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ 1 ಹಾಗೂ ಪಕ್ಷೇತರ 1 ಸದಸ್ಯರು ಗೆಲುವು ಸಾಧಿಸಿದ್ದರು.

ಹೀಗಿದ್ದರು ಸಹ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಪಡೆಯಲು ಸಾಧ್ಯವಾಗದೇ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾದೇವಿ ಅಧ್ಯಕ್ಷರಾಗಿದ್ದು, ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ. ಆದ್ರೆ, ಮೀಸಲಾತಿ ವಿಚಾರ ನ್ಯಾಯಲಯದಲ್ಲಿ ಇರುವ ಕಾರಣ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. 

click me!