ನಿಪ್ಪಾಣಿಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಗೆಲುವು: ಶಶಿಕಲಾ ಜೊಲ್ಲೆ

Published : May 08, 2023, 01:00 AM IST
ನಿಪ್ಪಾಣಿಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಗೆಲುವು: ಶಶಿಕಲಾ ಜೊಲ್ಲೆ

ಸಾರಾಂಶ

ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಹೆಚ್ಚಿನ ಮತದೊಂದಿಗೆ ಗೆಲ್ಲಿಸಿದ್ದೀರಿ. ಅದೇ ರೀತಿ ಈ ಸಲವು ಹೆಚ್ಚಿನ ಮತದೊಂದಿಗೆ ಬೆಂಬಲ ನೀಡಿ ಎಂದ ಶಶಿಕಲಾ ಜೊಲ್ಲೆ 

ಚಿಕ್ಕೋಡಿ(ಮೇ.08): ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಜನರೊಂದಿಗೆ ಅವರ ಸುಖ ದುಖಃದಲ್ಲಿ ಭಾಗಿಯಾಗಿ ಅವರ ಮನೆ ಮಗಳಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದು, ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಹೆಚ್ಚಿನ ಮತದೊಂದಿಗೆ ಗೆಲ್ಲಿಸಿದ್ದೀರಿ. ಅದೇ ರೀತಿ ಈ ಸಲವು ಹೆಚ್ಚಿನ ಮತದೊಂದಿಗೆ ಬೆಂಬಲ ನೀಡಿ ಎಂದು ಬಿಜೆಪಿ ಅಭ್ಯರ್ಥಿ, ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಿಪ್ಪಾಣಿ ನಗರದ ಸಾಖರವಾಡಿ, ಜತ್ರಾಟವೇಸ್‌, ಜಿಜಾಮಾತಾ ಚೌಕ್‌ನಲ್ಲಿ ಕಾರ್ನರ್‌ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ 10 ವರ್ಷದಲ್ಲಿ ನಿಪ್ಪಾಣಿ ನಗರದಲ್ಲಿ 450 ಕೋಟಿ ಅಧಿಕ ಅಭಿವೃದ್ಧಿಯ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ನಗರದಲ್ಲಿ ರಸ್ತೆ, ಚರಂಡಿ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ, ದೇವಸ್ಥಾನ ಜೀರ್ಣೋದ್ಧಾರ, ಸಾಂಸ್ಕೃತಿಕ ಭವನ, ಪ್ರವಾಸಿ ಮಂದಿರ, ಪೊಲೀಸ್‌ ಠಾಣೆ, ಪೊಲೀಸ್‌ ವಸತಿ ಗೃಹ, ಮಾದರಿ ಜಿ+2 ಯೋಜನೆಯಡಿ 2052 ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡ, ಬಸ್‌ ನಿಲ್ದಾಣ .5.60 ಕೋಟಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ .8 ಕೋಟಿ ವೆಚ್ಚದಲ್ಲಿ ನಿರ್ಮಾಣ ಹೀಗೆ ಹಲವಾರು ಕಾಮಗಾರಿ ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸದಾವಕಾಶ ನೀಡಿದ್ದೀರಿ. ಕ್ಷೇತ್ರದ ಮತ್ತಷ್ಟುಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ರಾಜ ವ್ಯಾಪಾರಿಯಾದರೇ ಪ್ರಜೆಗಳು ಭಿಕ್ಷುಕರು: ಬಿಜೆಪಿ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ

ಕ್ಷೇತ್ರದ ಬಿಜೆಪಿ ಪ್ರಮುಖರು ಮತ್ತು ನೂರಾರು ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಅವರಿಗೆ ಸಾಥ್‌ ನೀಡಿದರು.

ಫುಲೆ ಶಾಹು ಅಂಬೇಡ್ಕರ್‌ ಸಾಮಾಜಿಕ-ಸಾಂಸ್ಕತಿಕ ಸಂಘದ ಅಮಿತ್‌ ಕಾಂಬಳೆ, ವಿಕ್ಕಿ ಕಾಂಬಳೆ, ಸೂರಜ ಕಾಂಬಳೆ, ಶಿವರಾಜ್‌ ಕಾಂಬಳೆ, ಚೇತನ ಶಿಂಧೆ, ರೋಹಿತ ಮಡ್ಡೆ, ಅಕ್ಷಯ ಗಸ್ತೆ, ಮನೋಜ್‌ ಸಾವಂತ, ರಮೇಶ ವಾಳಕೆ, ಅದೀಪ ಕಾಂಬಳೆ, ನಿತಿನ ಕಾಂಬಳೆ, ಉತ್ತಮ ವಾಳಕೆ, ವಿನೋದ ಸೆಟ್ಟನ್ನವರ, ಸಾಗರ ಜಾಧವ, ಮೇಘಾ ಕಾಂಬಳೆ, ಮಿಲನ ಕಾಂಬಳೆ, ಸ್ವಾತಿ ಕಾಂಬಳೆ, ಮನಿಷಾ ಭೋಸಲೆ, ಬಬಿತಾ ವಾಳಕೆ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ತೊರೆದು ನಮ್ಮ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಆತ್ಮೀಯವಾಗಿ ಸಚಿವೆ ಶಶಿಕಲಾ ಜೊಲ್ಲೆ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

ಕೊಲ್ಲಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಮರಜೀತಸಿಂಹ ಘಾಟಗೆ, ಹಾಗಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಬಿಜೆಪಿ ನಗರ ಅಧ್ಯಕ್ಷ ಪ್ರಣವ ಮಾನವಿ, ಪ್ರಭಾವತಿ ಸೂರ್ಯವಂಶಿ, ಮಹೇಶ ಸೂರ್ಯವಂಶಿ, ವಿನಾಯಕ ಸುಳಕುಡೆ, ಅವಿನಾಶ ಮಾನೆ,ದೀಪಕ ಮಾನೆ, ಸುಜಾತಾ ಮಾನೆ, ಸಂದೀಪ ಮಾನೆ, ಸಂತೋಷ ತಿಗಡೆ ಸದಸ್ಯರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!