ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಪ್ರಧಾನಿ ಮೋದಿ ಭೇಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದರು.
ಮೈಸೂರು (ಮೇ.01): ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಪ್ರಧಾನಿ ಮೋದಿ ಭೇಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಂತಹವರು, ಕುಮಾರಸ್ವಾಮಿ ಅಂತಹವರ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಇನ್ನೆಂದಿಗೂ ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲೇ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದರು. ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ಮೋದಿ ಅವರು ನಮ್ಮ ರಾಜ್ಯಕ್ಕೆ ನೀಡಿರುವ ಕೊಡುಗೆಯಾದರೂ ಏನು?, ಬೇರೆ ಬ್ಯಾಂಕುಗಳ ಜೊತೆ ವಿಲೀನಗೊಳಿಸಿರುವ ನಮ್ಮ ಬ್ಯಾಂಕುಗಳನ್ನು ವಾಪಸ್ ಕೊಡಿ. ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು.
ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರಬೇಡಿ ಎಂದು ಆಗ್ರಹಿಸಿದರು. ದಕ್ಷಿಣ ಭಾರತದ ಮೇಲೆ ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗುತ್ತಿದೆ. ಕರ್ನಾಟಕದ ಮೇಲೆ ಕೇಂದ್ರದ ಯಜಮಾನಿಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ವಿಚಾರಕ್ಕೂ ಜಿಎಸ್‌ಟಿ ಪಾವತಿ ಮಾಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು, ಹೆಣ್ಣು ಮಕ್ಕಳು ಶಾಪ ಹಾಕುತ್ತಿದ್ದಾರೆ. ರಾಜ್ಯದ ಜಿಎಸ್‌ಟಿ ಪಾಲು ಸರಿಯಾಗಿ ಸಿಗುತ್ತಿಲ್ಲ. ನಮ್ಮ ರಾಜ್ಯದ ಜಿಎಸ್‌ಟಿ ಪಾಲು ಉತ್ತರದ ರಾಜ್ಯಗಳತ್ತ ಹರಿದು ಹೋಗುತ್ತಿದೆ. ಉತ್ತರದವರ ಯಜಮಾನಿಕೆಯಿಂದ ದಕ್ಷಿಣದ ನಾವು ತತ್ತರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
undefined
ಬ್ರಿಟಿಷರಂತೆ ಕಾಂಗ್ರೆಸ್‌ನಿಂದ ಒಡೆದು ಆಳುವ ನೀತಿ: ಸಚಿವ ಸುಧಾಕರ್
ಆಡಳಿತಾರೂಢ ಬಿಜೆಪಿ ಯಾವ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂಬುದನ್ನು ತಿಳಿಸಿಲ್ಲ. ಅನ್ನ, ಅಕ್ಷರ, ಆರೋಗ್ಯದ ಬಗ್ಗೆ ಬಿಜೆಪಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸುತ್ತಿಲ್ಲ. ಈಗಲೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ ಬಿಜೆಪಿ ಸ್ವಚ್ಛಗೊಳಿಸಿ: ಕರ್ನಾಟಕ ಬಿಜೆಪಿ ಚಾರಿತ್ರಿಕ ಭ್ರಷ್ಟಾಚಾರ ಮಾಡಿದ್ದು, ಕಸದ ತೊಟ್ಟಿಆಗಿದೆ. ಇದನ್ನು ಮೊದಲು ಪ್ರಧಾನಿಯವರು ಸ್ವಚ್ಛಗೊಳಿಸಬೇಕು. ಲಜ್ಜೆಗೆಟ್ಟಿರುವ ಕರ್ನಾಟಕದ ಭ್ರಷ್ಟಬಿಜೆಪಿಯನ್ನು ಮೊದಲು ಸರಿಪಡಿಸಲಿ. ಮೀಸಲಾತಿ ಅರ್ಥವನ್ನು ಬಸವರಾಜ ಬೊಮ್ಮಾಯಿ ಹಾಳು ಮಾಡಿದ್ದಾರೆ. ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯಗಳು ಛೀಮಾರಿ ಹಾಕಿದೆ ಎಂದು ಅವರು ಟೀಕಿಸಿದರು. ನಮಗೆ ಮೋದಿ ಆಶೀರ್ವಾದ ಬೇಡ. ಬಸವಣ್ಣ, ಕನಕದಾಸರಂತಹ ಮಹಾ ಪುರುಷರ ಆಶೀರ್ವಾದಬೇಕು. ಪ್ರಧಾನಿಯವರು ನಮ್ಮಿಂತ ಕಿತ್ತುಕೊಂಡಿರುವುದನ್ನು ಮೊದಲು ಕೊಡಿ. ಅಲ್ಲದೆ, ಕರ್ನಾಟಕಕ್ಕೆ ಏನು ಕೊಡುತ್ತೀರ ಹೇಳಿ ಎಂದು ಅವರು ಒತ್ತಾಯಿಸಿದರು.
ಮೇ.2ರಂದು ಚಿತ್ರದುರ್ಗಕ್ಕೆ ಪ್ರಧಾನಿ ಮೋದಿ ಭೇಟಿ: ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ರಾಜಕೀಯ ನಾಯಕರು ಸಕಾರಾತ್ಮಕ ತಾತ್ವಿಕ ಟೀಕೆಗಳನ್ನು ಮಾಡಿ, ತೀರಾ ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ. ರಾಜ್ಯದ ಹಲವೆಡೆ ತ್ರಿಕೋನ ಸ್ಪರ್ಧೆ, ಮತ್ತೆ ಕೆಲವೆಡೆ ನೇರ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬಂದಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದರು. ಪ್ರತಾಪ್ ಸಿಂಹ ನಿನ್ನ ದರ್ಪ ತೋರಿಸಬೇಡ. ಮಾಧ್ಯಮದ ಮುಂದೆ ನಿನ್ನ ವರಸೆ ಸಲ್ಲದು. ನಿನ್ನ ಕರ್ಮಕಾಂಡ ನನ್ನ ಬಳಿಯಿದೆ. ಸೋಮಣ್ಣ, ಸಿದ್ದರಾಮಯ್ಯ ತಳಮಟ್ಟದಿಂದ ಮೇಲೆದ್ದು ಬಂದವರು. ಸಮಾಜದ ಕಷ್ಟಸುಖ ಅರಿತು ಬಂದವರು. ಇವರ ಮಧ್ಯೆ ನಿನ್ನದೇನು ಪ್ರತಾಪ್ ಸಿಂಹ ಎಂದು ಅವರು ಪ್ರಶ್ನಿಸಿದರು.