150 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಕಟೀಲ್‌

By Kannadaprabha News  |  First Published Oct 29, 2022, 1:30 PM IST

ಹನೂರಿನಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ, ಸರ್ಕಾರದ ವತಿಯಿಂದ ಸಾಕಷ್ಟು ಅನುದಾನ ನೀಡುವ ಮೂಲಕ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಗುವುದು: ಕಟೀಲ್‌ 


ಹನೂರು(ಅ.29):  ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು. ಗೌರಿಶಂಕರ ಕಲ್ಯಾಣ ಮಂಟಪದ ಬಳಿ ಏರ್ಪಡಿಸಿದ್ದ ಕಾರ್ಯಕರ್ತರ ಸಂಕಲ್ಪ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಹನೂರಿನಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ, ಸರ್ಕಾರದ ವತಿಯಿಂದ ಸಾಕಷ್ಟು ಅನುದಾನ ನೀಡುವ ಮೂಲಕ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಗುವುದು. ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದು, ಜಗತ್ತಿನ ರಾಷ್ಟ್ರಗಳು ಭಾರತ ದೇಶದತ್ತ ತಿರುಗಿ ನೋಡುವಂತಾಗಿದೆ. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. ಆರವತ್ತು ವರ್ಷಗಳ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಭ್ರಷ್ಟಚಾರ, ಭಯೋತ್ಪಾದಕವಾದ ವಿಭಜನೆವಾದ, ಪರಿವಾರವಾದ ಮಾಡಿದೆ. ಗರೀಬ್‌ ಹಠಾವೋ ಹೆಸರಿನಲ್ಲಿ ಗಾಂಧಿ , ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಕುಟುಂಬದ ಬಡತನ ಹೋಗಿದೆ. ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲಲು ಕ್ಷೇತ್ರವೇ ಇಲ್ಲ. ಅರ್ಕಾವತಿ ಹಗರಣ ಹೊರ ಬಂದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಡಿ.ಕೆ. ಶಿವಕುಮಾರ್‌ ತಿಹಾರ್‌ ಜೈಲಿಗೆ ಯಾಕೆ ಹೋಗಿ ಬಂದರು ಎಂದು ವ್ಯಂಗ್ಯವಾಡಿದರು.

Tap to resize

Latest Videos

undefined

ಬಳ್ಳಾರಿ ಎಸ್ಟಿ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ: ಸಚಿವ ಶ್ರೀರಾಮುಲು

ಸಿದ್ದರಾಮಯ್ಯ ಟಿಪುತ್ರ್ಪ ಜಯಂತಿ ತಂದು ಕೋಮುವಾದ ಸೃಷ್ಟಿಸಿದರು, ಲಿಂಗಾಯತ ಧರ್ಮವನ್ನು ಒಡೆಯುವ ಮೂಲಕ ಧರ್ಮ ದ್ರೋಹಿಯಾದರು. ಭಾರತ್‌ ಜೋಡೋ ಯಾತ್ರೆಯಿಂದ ಏನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಿಜೆಪಿಯಿಂದ ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ತೆಂಗಿನಕಾಯಿ, ರಾಜ್ಯ ಕಾರ್ಯದರ್ಶಿ ಸಿದ್ದರಾಜು, ವೈ.ವಿ.ರವಿಶಂಕರ್‌, ಎಂಎಲ್‌ಸಿ ಮುನಿರಾಜು, ರಾಷ್ಟ್ರೀಯ ಪರಿಷತ್‌ ಸದಸ್ಯ ಬೂದುಬಾಳು ವೆಂಕಟಸ್ವಾಮಿ, ಕಾಡ ಅಧ್ಯಕ್ಷ ನಿಜಗುಣ ರಾಜು, ಜಿಲ್ಲಾಧ್ಯಕ್ಷ ಸುಂದರ್‌, ಜಿ.ಪ್ರ ಮಂಗಲ ಶಿವಕುಮಾರ್‌, ಮಾಜಿ ಶಾಸಕಿ ಪರಿಮಳ ನಾಗಪ್ಪ, ನಂಜುಂಡಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ದತ್ತೇಶ್‌ ಕುಮಾರ್‌, ಪ್ರೀತನ್‌ ನಾಗಪ್ಪ, ಜಿಲ್ಲಾ ಒಬಿಸಿ ಮೋರ್ಚಾದ ಸಂಚಾಲಕ ಬಿ. ವೆಂಕಟೇಶ್‌, ಬೆಟ್ಟಮಂಡಲದ ಅಧ್ಯಕ್ಷ ವೀರಭದ್ರ ಪ.ಪಂ.ಅಧ್ಯಕ್ಷ ಚಂದ್ರಮ್ಮ,, ಪುಟ್ಟರಾಜು, ಎಸ್ಟಿಮೋರ್ಚಾದ ಅಧ್ಯಕ್ಷ ಜಯಸುಂದರ್‌, ರಮೇಶ್‌ ನಾಯ್ದು ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.
 

click me!