ಕಾಂಗ್ರೆಸ್ಸಿಗರ ಬಾಯಲ್ಲಿ ಪದೇ ಪದೇ ಯಡಿಯೂರಪ್ಪ ಅವರ ಹೆಸರು ಏಕೆ ಬರುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತದಾರರಿಗಿದೆ. ಕಾಂಗ್ರೆಸ್ ಏನೇ ಮಂತ್ರ ಪ್ರಯೋಗ ಮಾಡಿದರೂ ಅದಕ್ಕೆ ತಿರುಮಂತ್ರ ಹಾಕಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ,ವಿಜಯೇಂದ್ರ ತಿಳಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.04): ಕಾಂಗ್ರೆಸ್ಸಿಗರ ಬಾಯಲ್ಲಿ ಪದೇ ಪದೇ ಯಡಿಯೂರಪ್ಪ ಅವರ ಹೆಸರು ಏಕೆ ಬರುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತದಾರರಿಗಿದೆ. ಕಾಂಗ್ರೆಸ್ ಏನೇ ಮಂತ್ರ ಪ್ರಯೋಗ ಮಾಡಿದರೂ ಅದಕ್ಕೆ ತಿರುಮಂತ್ರ ಹಾಕಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ,ವಿಜಯೇಂದ್ರ ತಿಳಿಸಿದ್ದಾರೆ. ಚಿಕ್ಕಮಗಳೂರು ನಗರದ ಎಐಟಿ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಜನರ ಮುಂದೆ ಹೋಗಿ ವಿಶ್ವಾಸ ಗೆಲ್ಲುವ ಯಾವುದೇ ಕಾರ್ಯಕ್ರಮ ಇಲ್ಲ.
ಅಚಾನಕ್ಕಾಗಿ ರೈತನಾಯಕ ಯಡಿಯೂರಪ್ಪ ಅವ ಬಗ್ಗೆ ಅನುಕಂಪ ಆರಂಭವಾಗಿದೆ. ಆದರೆ ರಾಜ್ಯದ ಜನರು ಮೂರ್ಖರಲ್ಲ. ಮತದಾರರು ಪ್ರಜ್ಞಾವಂತರಿದ್ದಾರೆ ಅವರ ಕಾರ್ಯತಂತ್ರಗಳಾವುದು ಸಫಲವಾಗುವುದಿಲ್ಲ ಎಂದರು. ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ವಿಚಾರವು ಕೇಂದ್ರ ಮತ್ತು ರಾಜ್ಯ ಮುಖಂಡರ ಮುಂದಿದೆ. ಅವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಿರು ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಘಟನೆ ನಡೆಯಬಾರದಿತ್ತು. ಈ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿಗಳು ಯಾರನ್ನೂ ಕೂಡ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದೇ ವಿಚಾರ ಮುಂದಿಟ್ಟು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ರಾಷ್ಟ್ರ, ರಾಜ್ಯದಲ್ಲಿ ಭ್ರಷ್ಟಾಚಾರದ ಪಾಪದ ಕೂಸನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ.
ಇದನ್ನು ರಾಜಕೀಯವಾಗಿ ಬಳಿಸಿಕೊಳ್ಳುವ ಕಾಂಗ್ರೆಸ್, ಜೆಡಿಎಸ್ ಯತ್ನ ಸಫಲವಾಗುವುದಿಲ್ಲ ಎಂದರು.ಪ್ರಧಾನಿ ಮೋದಿ ಅವರನ್ನು ಸುಳ್ಳಿನ ಮಂತ್ರಿ ಎಂದು ಕರೆದಿರುವ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ಮಾತನಾಡಿದರೆ ಅವರ ಘನತೆ ಕಡಿಮೆ ಆಗುವುದಿಲ್ಲ. ಭಾರತವಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿ ಮೋದಿ ನಾಯಕತ್ವವನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.ಬೆಲೆ ಏರಿಕೆ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡಿದರೂ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವ ರೀತಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದನ್ನು ಜನತೆ ಮುಂದೆ ಇಡುತ್ತೇವೆ ಎಂದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 40 ಕೋಟಿ ರು. ಭ್ರಷ್ಟಾಚಾರ ಆರೋಪ: ತನಿಖೆಗೆ ಪಿಸಿಸಿಎಫ್ ಆದೇಶ
50 ವರ್ಷಗಳ ಬಳಿಕ ಭಾರತ ಹೇಗಿರಬೇಕೆಂದು ಮೋದಿ ಯೋಚಿಸ್ತಾರೆ: ಪ್ರಧಾನಿ ನರೇಂದ್ರ ಮೋದಿ ಚುನಾವಣೆಗಳನ್ನ ಹೇಗೆ ಗೆಲ್ಲಬೇಕು ಎಂದು ಯೋಚಿಸಲ್ಲ. ಚುನಾವಣೆಗಾಗಿ ಬಜೆಟ್ಗಳನ್ನ ಹೇಗೆ ಮಂಡಿಸಬೇಕು ಎಂದು ಯೋಚಿಸಲ್ಲ. ಅವರು ಮುಂದಿನ 50 ವರ್ಷಗಳಲ್ಲಿ ಭಾರತ ಹೇಗೆ ಇರಬೇಕು ಎಂದು ಯೋಚಿಸುತ್ತಾರೆ ಎಂದರು. ಕಾಂಗ್ರೆಸ್ಸಿನ ಮಹಾನಾಯಕ ರಾಹುಲ್ ಗಾಂಧಿ ಮುಂದೆ ದೇಶದ ದೇಶದ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಸೋತು ಕೇರಳದ ವಯನಾಡಿಗೆ ಬಂದಿದ್ದಾರೆ. ಏಕೆ ಬಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ವಯನಾಡಲ್ಲಿ 50% ಮುಸ್ಲಿಂ, 20% ಕ್ರಿಶ್ಚಿಯನ್ ಇದ್ದಾರೆ. ಅದಕ್ಕೆ ಆಯ್ಕೆ ಮಾಡಿಕೊಂಡು ಅಲ್ಲಿಂದ ಅಲ್ಲಿಂದ ಲೋಕಸಭೆಗೆ ಬರುತ್ತಿದ್ದಾರೆ. ಇಂದು ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅಂದರೆ, ದೇಶದಲ್ಲಿ ಕಾಂಗ್ರೆಸ್ಗೆ ವಿಳಾಸವೇ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.