ಚುನಾವಣೆಗೆ ರಣಕಹಳೆ ಮೊಳಗಿಸಿದ ಬಿಜೆಪಿ, ಕರ್ನಾಟಕ ಪ್ರವಾಸಕ್ಕೆ 2 ತಂಡ ರಚನೆ

Published : Sep 06, 2022, 04:34 PM IST
ಚುನಾವಣೆಗೆ ರಣಕಹಳೆ ಮೊಳಗಿಸಿದ ಬಿಜೆಪಿ, ಕರ್ನಾಟಕ ಪ್ರವಾಸಕ್ಕೆ 2 ತಂಡ ರಚನೆ

ಸಾರಾಂಶ

ಪ್ರಧಾನಿ ಮೋದಿ ಬಂದುಹೋದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಹೊಸ ಉರುಪು ಬಂದಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಮೈಕೊಡವಿ ಎದ್ದಿದ್ದು, ನೇರವಾಗಿ ಫೀಲ್ಡ್‌ಗೆ ಇಳಿಯಲು ಮುಂದಾಗಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್.06): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು 7 ತಿಂಗಳು ಬಾಕಿ ಇದ್ದು, ಆಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾವಣೆ ಕಾರ್ಯ ಚುರುಕುಗೊಳಿಸಿವೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮೋದಿ ಸೇರಿದಂತೆ ಹೈಕಮಾಂಡ್ ನಾಯಕರು ಪಣ ತೊಟ್ಟಿದ್ದಾರೆ.

ಅದಕ್ಕಾಗಿ ಮೋದಿ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಕರ್ನಾಟಕಕ್ಕೆ ಬಂದು ಕಾರ್ಯಕರ್ತರಲ್ಲಿ ಚುನಾವಣೆ ಉತ್ಸಹ ತುಂಬುವ ಕೆಲಸಮಾಡುತ್ತಿದ್ದಾರೆ. ಇನ್ನು ಬಿಜೆಪಿ ನಾಯಕರಿಗೆ ಸಲಹೆ ಸೂಚನೆಗಳನ್ನ ಕೊಡುತ್ತಿದ್ದಾರೆ. ಮೊನ್ನೇ ಅಷ್ಟೇ ಮೋದಿ ಮಂಗಳೂರಿಗೆ ಬಂದು ಹೋದ ಬೆನ್ನಲ್ಲೇ  ಕೇಸರಿ ಪಾಳೆಯದಲ್ಲಿ  ಮಿಂಚಿನ ಸಂಚಲನ ಮೂಡಿಸಿದೆ. 

ಕೇಸರಿ ಪಾಳೆಯದಲ್ಲಿ ಮಿಂಚಿನ ಸಂಚಲನ, ಬಿಜೆಪಿಗೆ ಕರ್ನಾಟಕ ಗೆದ್ದು ಕೊಡಲಿದ್ಯಾ ಮೋದಿ ಬೂಸ್ಟರ್..?

ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸಿದ ಮೋದಿ, ಮುಂದಿನ ವಿಧಾನಸಭಾ ಚುನಾವಣೆಗೆ ರಣತಂತ್ರಗಳನ್ನು ಹೆಣೆದ್ರು. ರಾಜ್ಯ ಕೇಸರಿ ಕಲಿಗಳಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿ, ಚುನಾವಣೆಗೆ ಹೇಗೆ ಸಜ್ಜಾಗ್ಬೇಕು ಅನ್ನೋದ್ರ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಮೈಕೊಡವಿ ನಿಂತಿದೆ.

ಪ್ರವಾಸಕ್ಕೆ ತಂಡ ರಚನೆ
ಇದಕ್ಕೆ ಪೂಕರವೆಂಬಂತೆ ಕರ್ನಾಟಕ ಪ್ರವಾಸ ಮಾಡಲು ಬಿಜೆಪಿ ನಾಯಕ ತಂಡ ರಚನೆಯಾಗಿದೆ. ಎರಡು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ರೆಡಿ ತಂಡ ರೆಡಿಯಾಗಿದ್ದು, ಕ್ಷೇತ್ರದಲ್ಲಿ ನಾಯಕರ ಪ್ರವಾಸದ ಪಟ್ಟಿ ಪ್ರಕಟವಾಗಿದೆ. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಒಂದು ತಂಡ ರಚನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡ ಪ್ರವಾಸಕ್ಕೆ ತಯಾರಿ ನಡೆಸಿದೆ. ಈ ಎರಡು ತಂಡಗಳ ಕ್ಷೇತ್ರ ಪ್ರವಾಸದ ವಿವರ ಈ ಕೆಳಗಿನಂತಿದೆ ನೋಡಿ

* ಬೊಮ್ಮಾಯಿ-ಯಡಿಯೂರಪ್ಪ ನೇತೃತ್ವದ ತಂಡದ ಪ್ರವಾಸದ ವಿವರ
ರಾಯಚೂರು ನಗರ, ದೇವದುರ್ಗ , ಮಸ್ಕಿ, ಕುಷ್ಟಗಿ, ಹಗರಿಬೊಮ್ಮನಹಳ್ಳಿ, ಶಿರುಗಪ್ಪ, ಅರಸೀಕೆರೆ , ಸಕಲೇಶಪುರ, ಹುಣಸೂರು, ಮೈಸೂರು ನಗರ, ಮದ್ದೂರು, ಕೆಆರ್ ಪೇಟೆ, ಮಾಗಡಿ, ಕೊಳ್ಳೆಗಾಲ, ಚಾಮರಾಜನಗರ, ಹುಮ್ನಬಾದ್, ಔರದ್.

The Modi Effect: ಕರಾವಳಿಯಲ್ಲಿ ಬಿಜೆಪಿ ಸಂಘಟನೆ ಚುರುಕು

ಸುರಪುರ, ಸೇಡಂ, ಚಿತ್ತಾಪುರ, ಆಳಂದ, ನಿಪ್ಪಾಣಿ, ರಾಯಭಾಗ, ಬಾದಾಮಿ, ತೆರೇದಾಳ, ಶಿರಹಟ್ಟಿ, ಕುಂದಗೋಳ, ಹಾನಗಲ್, ಬ್ಯಾಡಗಿ, ಬೆಳಗಾವಿ ಉತ್ತರ, ಹಳಿಯಾಳ, ತರೀಕೆರೆ, ಸೊರಬ, ಬೈಂದೂರು, ಕಾಪು, ಶೃಂಗೇರಿ, ಪುತ್ತೂರು, ಜಗಳೂರು, ಹರಿಹರ, ಹೊಳಲ್ಕೆರೆ, ಶಿರಾ, ತುಮಕೂರು ನಗರ, ತುರುವೇಕೆರೆ, ಕೆಜೆಎಫ್, ಮಾಲೂರು, ಬ್ಯಾಟರಾಯನಪುರ, ಗೌರಿಬಿದನೂರು, ಗಾಂಧಿನಗರ, ಬೆಂ ದಕ್ಷಿಣ, ಆನೇಕಲ್, ಮುದ್ದೇಬಿಹಾಳ, ದೇವರಹಿಪ್ಪರಗಿ

* ನಳೀನ್ ಕುಮಾರ್ ಕಟೀಲ್  ನೇತೃತ್ವದ ತಂಡದ ಪ್ರವಾಸ
ಕೃಷ್ಣರಾಜ, ನಂಜನಗೂಡು, ಹನೂರು, ಗುಂಡ್ಲುಪೇಟೆ, ಮಂಡ್ಯ, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಮೂಡಿಗೆರೆ, ಶಿವಮೊಗ್ಗ ಗ್ರಾಮಾಂತರ, ಭಟ್ಕಳ, ಕಾರವಾರ, ಹು-ಧಾ ಪಶ್ಚಿಮ, ರಾಣಿಬೆನ್ನೂರು, ಕಲಘಟಗಿ, ನವಲಗುಂದ, ರೋಣ, ಸವದತ್ತಿ ಯಲ್ಲಮ್ಮ, ಗೋಕಾಕ, ರಾಮದುರ್ಗ. ಕಾಗವಾಡ

ಜಮಖಂಡಿ, ಹುನಗುಂದ, ಬಸವನಬಾಗೇವಾಡಿ. ನಾಗಠಾಣ, ಬಸವಕಲ್ಯಾಣ, ಭಾಲ್ಕಿ, ಅಫಜಲಪುರ, ಕಲಬುರಗಿ ಗ್ರಾಮಾಂತರ, ಯಾದಗಿರಿ, ಲಿಂಗಸಗೂರು, ಗಂಗಾವತಿ, ಕಂಪ್ಲಿ, ಹರಪ್ಪನಹಳ್ಳಿ, ಕೂಡ್ಲಿಗಿ , ದಾವಣಗೆರೆ ದಕ್ಷಿಣ. ಚೆನ್ನಗಿರಿ, ಹಿರಿಯೂರು, ತಿಪಟೂರು, ಮಧುಗಿರಿ

ದಾಸರಹಳ್ಳಿ, ಯಲಹಂಕ, ಕೆ ಆರ್ ಪುರಂ, ರಾಜಾಜಿನಗರ, ರಾಜ ರಾಜೇಶ್ವರಿ ನಗರ. ಗೋವಿಂದ ರಾಜ ನಗರ. ಬಸವನಗುಡಿ, ಜಯನಗರ, ಬೆಳ್ತಂಗಡಿ, ಮಂಗಳೂರು, ಸುಳ್ಯ, ಉಡುಪಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ