Bengaluru Rain ಬೆಂಗಳೂರಿನ ಪ್ರವಾಹದಲ್ಲೂ ಕಾಂಗ್ರೆಸ್-ಬಿಜೆಪಿ ರಾಜಕಾರಣ ಜೋರು!

Published : Sep 06, 2022, 02:41 PM ISTUpdated : Sep 06, 2022, 02:43 PM IST
Bengaluru Rain ಬೆಂಗಳೂರಿನ ಪ್ರವಾಹದಲ್ಲೂ ಕಾಂಗ್ರೆಸ್-ಬಿಜೆಪಿ ರಾಜಕಾರಣ ಜೋರು!

ಸಾರಾಂಶ

ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಅಕ್ಷರಶಃ ಮುಳುಗಿದೆ. ಇದರಿಂದ ಜನರು ತತ್ತರಿಸಿಹೋಗಿದ್ದಾರೆ. ಮತ್ತೊಂದೆಡೆ ಮಳೆ‌ ಹಾನಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆದಿದೆ.

ಬೆಂಗಳೂರು, (ಸೆಪ್ಟೆಂಬರ್.06): ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಬೆಂಗಳೂರಿನ ಜನವಸತಿ ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ರಸ್ತೆಗಳೆಲ್ಲ ನದಿಗಳಂತಾಗಿವೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಜಲಪ್ರಳಯದಲ್ಲಿ ಸಿಕ್ಕಿಕೊಂಡಿದ್ದ ಜನರನ್ನು ಬೋಟ್‌ಗಳಲ್ಲಿ ಕರೆತರುವ ಪರಿಸ್ಥಿತಿ ನಿರ್ವಣವಾಗಿದೆ. ಇದರಿಂದ ಬೆಂಗಳೂರಿನ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಮತ್ತೊಂದೆಡೆ ಬೆಂಗಳೂರಿನ ಪ್ರವಾಹದಲ್ಲೂ ರಾಜಕೀಯ ಶುರುವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.ಜನರ ನೆರವಿಗೆ ಧಾವಿಸುವುದು ಬಿಟ್ಟು ಮಳೆ‌ ಹಾನಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಾಟ ನಡೆಸಿವೆ.

ಹೌದು...ಒಂದೆಡೆ ಕಾಂಗ್ರೆಸ್ ಗೆ ಭಾರತ್ ಜೋಡೋ ಯಾತ್ರ ಮುಖ್ಯವಾಗಿದ್ರೆ, ಮತ್ತೊಂದೆಡೆ ಬಿಜೆಪಿಗೆ ಜನೋತ್ಸವ ಸಮಾವೇಶ ಮಹತ್ವದ್ದಾಗಿದೆ. ಇದರ ನಡುವೆ ಈ ಸಮಸ್ಯೆಗೆ ಹಿಂದಿನ ಸರ್ಕಾರ ಕಾರಣ ಎಂದು ಬಿಜೆಪಿ ನಾಯಕರು ಸರಣಿ ಟ್ವೀಟ್ ಮಾಡುತ್ತಿದ್ದಾರೆ.

Heavy Rain : ಅರ್ಧ ಶತಮಾನದ ದಾಖಲೆ ಮಳೆಗೆ ಕಂಗೆಟ್ಟ ಬೆಂಗಳೂರು

ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ಗೊತ್ತಿಲ್ಲ. ಬಿಜೆಪಿಯವರು ಬ್ರ್ಯಾಂಡ್ ಬೆಂಗಳೂರನ್ನು ಹಾಳು ಮಾಡಿದ್ದಾರೆ. ಮಳೆಯಿಂದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರೂ ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿ ಬೆಂಗಳೂರಿನ ಗೌರವ ಉಳಿಸುವ ಕೆಲಸ ಮಾಡಬೇಕಿತ್ತು. ಈ ಅವಾಂತರಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರವೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಇದಕ್ಕೆ ಕರ್ನಾಟಕ ಬಿಜೆಪಿ ಸಹ ಸರಣಿ ಟ್ವೀಟ್ ಮಾಡಿ ಈ ಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ತಿರುಗೇಟು ನೀಡಿದೆ.

ಮೋಹನ್ ದಾಸ್ ಪೈ ವಿರುದ್ದ ಸುಧಾಕರ್ ಅಸಮಾಧಾನ
ಮಳೆ ಹಾನಿ ವಿಚಾರದ ಬಗ್ಗೆ ಸಚಿವ ಸುಧಾಕರ್ ಸರಣಿ ಟ್ವೀಟ್ ಮಾಡಿದ್ದು, ಮೋಹನ್ ದಾಸ್ ಪೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕವಾಗಿ ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು? ಇನ್ನು ಮೋಹನದಾಸ್ ಪೈ ಯವರೇ ಈ ಪರಿಯ ಮಳೆ ನ್ಯೂಯೋರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ . ದೂರುವುದು ಸುಲಭ ಪರಿಹರಿಸುವುದು ದೂರದ ಮಾತು. ಇವು  ಜಾಗತಿಕ ತಾಪಮಾನ ವ್ಯಪರೀತ್ಯದ ಕೆಲವು ಕೊಡುಗೆಗಳು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಉತ್ತಮ ಹಾಗು ನಿರ್ಮಲವಾದ ಪರಿಸರಪೂರಕ ನಗರಾಭಿವೃದ್ದಿಗೆ ನಾಂದಿಹಾಡೋಣ. ಪ್ರಕೃತಿ ನಮ್ಮ ಅಗತ್ಯಗಳಿಗೆ ಎಲ್ಲವು ಕೊಡುತ್ತೆ. ಆದರೆ ನಮ್ಮ ದುರಾಸೆಗೆ ಅದರ ವಿಕೃತಿಯ ದರ್ಶನವಾಗುತ್ತೆ. ಎಚ್ಚರ...ಎಚ್ಚರ.. ಎಂದು ಟ್ವೀಟ್ ಮಾಡಿದ್ದಾರೆ.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆಯಿಂದ  ಬೆಂಗಳೂರು ಅಸ್ಥವ್ಯಸ್ತವಾಗಿರುವಿದು ಸತ್ಯ. ಈ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ. ಈ ರೀತಿಯ ಮಳೆ ಪ್ರಪಂಚದ ಯಾವುದೇ ನಗರದ್ಲಲಿ ಬಿದ್ದಿದ್ದೇ ಆದಲ್ಲಿ ಪರಿಸ್ಥಿತಿ ಇದಕ್ಕಿನ್ನ ಭಿನ್ನವಾಗಿರುವುದಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿಯವರು ಹಾಗು ಬೆಂಗಳೂರಿನ ಸಚಿವರುಗಳು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳು ಸಕ್ರಿಯವಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ನಮ್ಮ ಕೆಂಪೇಗೌಡರು ಕಟ್ಟಿದ ಸುಂದರ ಹಾಗು ಎಲ್ಲರನ್ನೊಳಗಂಡ ಚಿಕ್ಕದಾದ ಹಾಗು ಚೊಕ್ಕದಾದ ಬೆಂಗಳೂರು .ಇವತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಮಹಾನಗರ ಆಗಿದೆ. ಆಗ ನಿರ್ಮಿಸಿದ ಕೆರೆಗಳು ಇಂದು ಒತ್ತುವರಿಯಾಗಿ ಮಾಯವಾಗಿದೆ. ರಾಜಕಾಲುವೆಗಳ ಮೇಲೆ ಮನೆಗಳು ಮಳಿಗೆಗಳು ನಿರ್ಮಾಣವಾಗಿದೆ. ಕೆಲವು ಕೆರೆಗಳ ಅಂಗಳದಲ್ಲಿ, ತಗ್ಗು ಪ್ರದೇಶದಲ್ಲಿ ಮನೆಗಳ  ಲೇಔಟ್ ನಿರ್ಮಾಣಮಾಡಿಕೊಡಿದ್ದಾರೆ. ಇಂತ ಬಳುವಳಿಯನ್ನ ನಮ್ಮ ಸರ್ಕಾರ ಪಡೆದಿದೆ. ಆದರೂ ನಮ್ಮ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಶೀಘ್ರ ಶಾಶ್ವತ ಪರಿಹಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ