ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ ಟ್ವಿಸ್ಟ್‌: ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರೇಳಿದ ಆರೋಪಿ

By Sathish Kumar KH  |  First Published Oct 24, 2023, 3:33 PM IST

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹಣ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರು ಕೇಳಿಬಂದಿದೆ.


ವಿಜಯನಗರ (ಅ.24): ವಿಜಯಜನರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹಣ ವಂಚಿಸಿದ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಬಿಜೆಪಿಯಲ್ಲಿ ತಾನು ಪ್ರಭಲನಾಗಿದ್ದು, ಮಾಜಿ ಮುಖ್ಯಮಂತ್ರಿಗೂ ನಾನೇ ಟಿಕೆಟ್‌ ಕೊಡಿಸಿದ್ದು ಎಂದು ಆರೋಪಿ ರೇವಣಸಿದ್ದಪ್ಪ ಹೇಳಿಕೊಂಡಿದ್ದಾನೆ. ಟಿಕೆಟ್ ವಂಚನೆ ಕೇಸಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಹೆಸರನ್ನೂ ಬಾಯಿಬಿಟ್ಟಿದ್ದಾನೆ.

ರಾಜ್ಯದಲ್ಲಿ ಈಗಾಗಲೇ ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಚೈತ್ರಾ ಕುಂದಾಪುರ ಮತ್ತು ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ತಂಡದ ಬಂಧನವಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಖಾಕಿ ಬಿಟ್ಟು ಮಹಾರಾಣಿಯಂತೆ ಕಂಗೊಳಿಸಿದ ರೂಪಾ ಮೌದ್ಗಿಲ್‌: ಕಿತ್ತೂರು ರಾಣಿ ಚೆನ್ನಮ್ಮನ ಪ್ರತೀಕವೆಂದ ನೆಟ್ಟಿಗರು

Latest Videos

undefined

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪಿ ರೇವಣಸಿದ್ದಪ್ಪ ತಾನು ಈ ಹಿಂದೆ ಹಲವು ಗಣ್ಯರಿಗೆ ಬಿಜೆಪಿ ಟಿಕೆಟ್‌ ಕೊಡಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ವಂಚಕನ ಮಾತು ಕೇಳಿದ್ರೆ ಯಾರಾದರೂ ಇವರಿಗೆ ಹಣ ಕೊಟ್ಟುಬಿಡುವಷ್ಟರ ಮಟ್ಟಿಗೆ ನಂಬಿಸಿದ್ದಾನೆ. ರಾಜ್ಯದಲ್ಲಿ 2013 ಹಾಗೂ 2018ರ ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲುಗೆ ತಾನೇ ಟಿಕೆಟ್‌ ಕೊಡಿಸಿದ್ದಾಗಿ ಹೇಳಿಕೊಂಡಿದ್ದಾನೆ. ಇದನ್ನು ನಂಬಿದ ನಿವೃತ್ತ ಇಂಜಿನಿಯರ್‌ ಶಿವಮೂರ್ತಿ ಕೂಡ ಕೋಟ್ಯಂತರ ಹಣ ಕೊಟ್ಟು ಟಿಕೆಟ್‌ ಸಿಗದೇ ವಂಚನೆಗೊಳಗಾಗಿದ್ದಾರೆ.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ವಂಚನೆಗೊಳದಾಗ ಶಿವಮೂರ್ತಿ ಮಾತನಾಡಿ, ಬಳ್ಳಾರಿಯ ಶ್ರೀರಾಮುಲು ಬಿಜೆಪಿಗೆ ವಾಪಸ್ ಬಂದಾಗ ಮತ್ತು ಈ ಹಿಂದೆ ಬಸವರಾಜ್ ಬೊಮ್ಮಾಯಿಗೆ ನಾನೇ ಟಿಕೆಟ್ ಕೊಡಿಸಿರೋದು. ನಾವು ಇಲ್ಲಾಂದ್ರೇ ಶ್ರೀ ರಾಮುಲು ಎಲ್ಲಿ ಬೆಳೆಯುತ್ತಿದ್ದ ಎಂದು ವಂಚನೆ ಮಾಡಿದ ರೇವಣಸಿದ್ದಪ್ಪ ಹೇಳಿದ್ದಾರೆ. ಹೀಗಾಗಿ ಇನ್ನು ನಂಬಿಕೊಂಡೇ ನಾನು ರೇವಣಸಿದ್ದಪ್ಪಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಎರಡು ಕಾಲಿನ ಕರು ಜನನ: ಪರಶಿವನ ಪುನರ್ಜನ್ಮವೆಂದು ಪೂಜಿಸಿದ ಜನ

ರಾಜ್ಯದಲ್ಲಿ ದೊಡ್ಡ ದೊಡ್ಡವರಿಗೆಲ್ಲ ನಾನು ಬಿಜೆಪಿ ಟಿಕೆಟ್ ಕೊಡಿಸಿದ್ದೇನೆ ಎಂದಾಗ ನಾನು ಕೂಡ ನಂಬಬೇಕಾಯ್ತು. ನನಗೆ ಬಿಜೆಪಿ ಟಿಕೇಟ್ ಕೊಡಿಸ್ತಿನಿ ಅಂತ ಮೋಸ ಮಾಡಿದ್ದಾರೆ. ನಾನು ಹಣ ಕೊಟ್ಟೆ, ನನಗೆ ಬಿಜೆಪಿ ಟಿಕೆಟ್‌ ಮಿಸ್ ಆದಾಗ, ನಾನು ಹಣ ವಾಪಸು ಕೇಳಿದೆನು. ಆಗ ನನಗೆ ಜೀವ ಬೆದರಿಕೆ ಹಾಕಿದರು. ಜೊತೆಗೆ, ನಾನು ಕೂಡ ಅವರಿವರ ಕಡೆಯಿಂದ ಹೆಚ್ಚು ಒತ್ತಡ ಹಾಕಿದಾಗ ಚೆಕ್ ಕೊಟ್ಟಿದ್ದಾರೆ. ಆದರೆ, ಅವರು ಕೊಟ್ಟ ಎಲ್ಲ ಬ್ಯಾಂಕ್‌ಗಳ ಚೆಕ್‌ಗಳು ಕೂಡ ಬೌನ್ಸ್ ಆಗಿವೆ ಎಂದು ವಂಚನೆಗೊಳಗಾದ ಶಿವಮೂರ್ತಿ ಅಳಲು ತೋಡಿಕೊಂಡಿದ್ದಾರೆ.

click me!