ಬಿಎಸ್‌ವೈ ನನಗೆ ಒಂದು ಮಾತು ಹೇಳಿದ್ದಾರೆ: ವಿಜಯೇಂದ್ರ ಹೇಳಿದ್ದೇನು?

By Kannadaprabha NewsFirst Published Jan 7, 2024, 12:40 PM IST
Highlights

ರಾಜ್ಯ ಬಿಜೆಪಿ ಅಧ್ಯಕ್ಷನಾದ ಬಳಿಕ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಬಿಎಸ್‌ವೈ ನನಗೆ ಒಂದು ಮಾತು ಹೇಳಿದ್ದಾರೆ, ರಾಜ್ಯದಲ್ಲಿ ಅನೇಕ ಹಿರಿಯ ನಾಯಕರು ಇದ್ದರೂ ಪಕ್ಷ ನಿನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ, ಒಂದು ದಿನ ನೀನು ಮನೆಯಲ್ಲಿ ಕೂರಬಾರದು. 

ಚಾಮರಾಜನಗರ (ಜ.07): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಹಿರಿಯ ನಾಯಕರು ನಾನು, ನಾನು ಎಂದದ್ದೇ ಕಾರಣವಾಯಿತು ಸ್ವ ಪಕ್ಷದ ಹಿರಿಯ ನಾಯಕರೇ ಪರೋಕ್ಷವಾಗಿ ಸ್ವಾರ್ಥಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಹಿರಿಯ ನಾಯಕರು ಚುನಾವಣೆಗೆ ಮುನ್ನ ನಾವು ಎನ್ನುತ್ತಾರೆ, ಚುನಾವಣೆ ಗೆದ್ದ ಬಳಿಕ ನಾನು, ನಾನು ಎನ್ನುತ್ತಾರೆ. ಅದನ್ನು ಬಿಟ್ಟು, ನಾವೆಲ್ಲರೂ ಒಂದೇ ಎಂದು ತಿಳಿದುಕೊಂಡಿದ್ದರೇ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ, ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಬಿಜೆಪಿ ಕಾರಣವಲ್ಲ, ಕಾರ್ಯಕರ್ತರು ಕಾರಣವಲ್ಲ, ನಾಯಕರು ಕಾರಣ ಎಂದು ಗುಡುಗಿದರು.

ರಾಜ್ಯ ಬಿಜೆಪಿ ಅಧ್ಯಕ್ಷನಾದ ಬಳಿಕ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಬಿಎಸ್‌ವೈ ನನಗೆ ಒಂದು ಮಾತು ಹೇಳಿದ್ದಾರೆ, ರಾಜ್ಯದಲ್ಲಿ ಅನೇಕ ಹಿರಿಯ ನಾಯಕರು ಇದ್ದರೂ ಪಕ್ಷ ನಿನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ, ಒಂದು ದಿನ ನೀನು ಮನೆಯಲ್ಲಿ ಕೂರಬಾರದು. ಲೋಕಭೆಯಲ್ಲಿ 28 ಕ್ಷೇತ್ರವನ್ನೂ ಗೆಲ್ಲಬೇಕು ಎಂದಿದ್ದಾರೆ, ಅವರೂ ಕೂಡ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಮನಮೋಹನ್ ಸಿಂಗ್ ಆಡಳಿತ ಇದ್ದಾಗ ಭ್ರಷ್ಟಾಚಾರ ನಡೆಯುತ್ತಿತ್ತು. ಇದೀಗ ದೇಶದ ಆಡಳಿತದಲ್ಲಿ ಇಂದು ಭ್ರಷ್ಟಾಚಾರ ಒಂದೂ ಆರೋಪ ಇಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿ ಆಗುವುದನ್ನು ಯಾವ ದುಷ್ಟ ಶಕ್ತಿಯು ತಡೆಯುದಕ್ಕೆ ಆಗಲ್ಲ, ಕಾಂಗ್ರೆಸ್ ಗೂ ಇದು ಮನದಟ್ಟಾಗಿದ್ದು ಹತಾಶೆ ಹೇಳಿಕೆ ಕೊಡುತ್ತಿದ್ದಾರೆ ಎಂದರು.

Latest Videos

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ: ವೀರೇಶಾನಂದ ಸರಸ್ವತಿ

ಚುನಾವಣೆ ಬಂದ್ರೆ ಕಾಂಗ್ರೆಸ್ ನವರು ಅಂಬೇಡ್ಕರ್ ಹೆಸರು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಆದ್ರೆ ಚುನಾವಣೆ ವೇಳೆ ಅಂಬೇಡ್ಕರ್ ಹೆಸರು ಬೇಕು, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದಾಗ ಕಲಾಪ ನಡೆಯುತ್ತಿತ್ತು, ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಇದ್ದರೂ ಮಹಿಳೆ ಭೇಟಿ ಮಾಡಲಿಲ್ಲ, ಅದೇ ಯಡಿಯೂರಪ್ಪ ಸಿಎಂ ಆಗಿದ್ದರೇ ಕೂಡಲೇ ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದರು ಎಂದು ಹೇಳಿದರು. ಯಡಿಯೂರಪ್ಪ ಮಗ ವಿಜಯೇಂದ್ರ ಅಧ್ಯಕ್ಷನಾದ ಬಳಿಕ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ, 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲ್ಲಿದ್ದು ಮುಂಬುರುವ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!