ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ: ವೀರೇಶಾನಂದ ಸರಸ್ವತಿ

By Kannadaprabha News  |  First Published Jan 7, 2024, 12:28 PM IST

ರಾಜ್ಯದ ಆರು ಕೋಟಿ ಜನ ನಿಮ್ಮಲ್ಲಿ (ಬಿ.ವೈ.ವಿಜಯೇಂದ್ರ) ಮುಂದಿನ ಮುಖ್ಯಮಂತ್ರಿ ನೋಡುತ್ತಿದ್ದಾರೆ. ನಿಮ್ಮ ತಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಮ್ಮೆಲ್ಲ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. 


ಮೈಸೂರು (ಜ.07): ರಾಜ್ಯದ ಆರು ಕೋಟಿ ಜನ ನಿಮ್ಮಲ್ಲಿ (ಬಿ.ವೈ. ವಿಜಯೇಂದ್ರ) ಮುಂದಿನ ಮುಖ್ಯಮಂತ್ರಿ ನೋಡುತ್ತಿದ್ದಾರೆ. ನಿಮ್ಮ ತಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಮ್ಮೆಲ್ಲ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈಗ ಮೈಸೂರಿನಲ್ಲಿ ನಡೆದಿರುವ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ. ದೇವರು ಅವಕಾಶ ಕೊಟ್ಟರೆ ನೀವೇ ಉದ್ಘಾಟನೆಗೆ ಬರಬೇಕಾಗಬಹುದು ಎಂದು ತುಮಕೂರಿನ ರಾಮಕೃಷ್ಣ- ವಿವೇಕನಾಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ಚಿಕ್ಕ ವಯಸ್ಸಿನಲ್ಲೇ ಬಿಜೆಪಿ ಅಧ್ಯಕ್ಷ ಹುದ್ದೆಯಂತಹ ದೊಡ್ಡ ಜವಾಬ್ದಾರಿ ಒದಗಿ ಬಂದಿದೆ. ಯುಡಿಯೂರಪ್ಪ ಮಗ ಎಂದು ಹೋದಲ್ಲೆಲ್ಲ ಪ್ರೀತಿಯಿಂದ ಕಾಣುತ್ತಿದ್ದಾರೆ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮಠಮಾನ್ಯಗಳಿಗೆ ಶಕ್ತಿ ತುಂಬಿದ್ದಾರೆ. ಅವರ ಸೇವೆ ಮುಂದುವರಿಸುತ್ತೇನೆ ಎಂದರು.

Latest Videos

undefined

ತಮ್ಮ ಸರ್ಕಾರ ಇದ್ದಾಗ ಬೊಮ್ಮಾಯಿ, ಅಶೋಕ ಏನ್ಮಾಡ್ತಿದ್ರು?: ಸಚಿವ ಪ್ರಿಯಾಂಕ್‌ ಖರ್ಗೆ

ವಿವೇಕ ಸ್ಮಾರಕವು ಭಾರತದ ಹೆಮ್ಮೆಯಾಗಿ ಹೊರಹೊಮ್ಮಲಿದೆ: ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ಸ್ವಾಮಿ ವಿವೇಕಾನಂದರ ಸ್ಮಾರಕವು ಭಾರತದ ಹೆಮ್ಮೆಯ ಸ್ಮಾರಕವಾಗಿ ಹೊರಹೊಮ್ಮಲಿದೆ ಎಂದು ತುಮಕೂರಿನ ರಾಮಕೃಷ್ಣ- ವಿವೇಕನಾಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದರು. ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ರಾಮಕೃಷ್ಣ– ವಿವೇಕಾನಂದ ಭಾವಪ್ರಚಾರ ಪರಿಷತ್‌ 9ನೇ ವಾರ್ಷಿಕ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಿರ್ಮಾಣ ಆಗಲಿರುವ ಸ್ಮಾರಕಕ್ಕೆ ತಪ್ಪದೇ ಭೇಟಿ ನೀಡಬೇಕು. ಸ್ಮಾರಕ ನಿರ್ಮಾಣಕ್ಕೆ ಕೈಲಾದ ಸಹಾಯವನ್ನೂ ಮಾಡಬೇಕು ಎಂದು ಕೋರಿದರು.

ಎಲ್ಲಿ ಶ್ರೇಷ್ಠ ವಾದ ತ್ಯಾಗ ಇದೆಯೋ ಅಲ್ಲಿ ಶ್ರೇಷ್ಠವಾದ ಜ್ಞಾನಿಗಳು ಹೊರಹೊಮ್ಮುತ್ತಾರೆ. ಮೈಸೂರು ಅಂತಹ ಜ್ಞಾನಿಗಳನ್ನು ಕೊಟ್ಟಿದೆ. ಮೈಸೂರು ಅರಸರ ಮೇಲೆ ವಿವೇಕಾನಂದರ ಪ್ರಭಾವ ಹೆಚ್ಚಿತ್ತು. ಹೀಗಾಗಿಯೇ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು ಎಂದರು. ಜಗತ್ತಿನಿಂದ ಏನನ್ನೂ ನಿರೀಕ್ಷಿಸದೇ ಜಗತ್ತಿಗೆ ಕೊಡಬಲ್ಲ ಸೇವೆ, ಚಿಂತನೆಗಳ ಮೂಲಕ ವಿವೇಕಾನಂದರು ನಮಗೆ ಆದರ್ಶ ಆಗಿದ್ದಾರೆ. ಮನುಷ್ಯ ಸ್ವಾಭಿಮಾನಿ ಆಗಿ ನಡೆದುಕೊಂಡಾಗ ಆತನಿಂದ ಲೋಪ ಆಗುವುದಿಲ್ಲ. ಸಾಮಾನ್ಯರನ್ನು ಮೇಲೆ ಎತ್ತುವ ಯೋಜನೆಗಳ ಕೊರತೆ ಇಂದಿನ ಆಡಳಿತದಲ್ಲಿ ಇದೆ. ಸರ್ಕಾರಗಳು ಜನರಿಗೆ ಸ್ವಾವಲಂಬನೆಯ ಪಾಠ ಹೇಳಿಕೊಡುವ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ಹೇಮಾವತಿ ಲಿಂಕ್ ಚಾನೆಲ್ ಯೋಜನೆಗೆ ಅನುಮೋದನೆ: ರೈತರ ಬಹುವರ್ಷಗಳ ಬೇಡಿಕೆಗೆ ಮನ್ನಣೆ

ವಿವೇಕಾನಂದರ ಪ್ರೇರಣೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸರಳ ದಾರಿಯಲ್ಲಿ ನಡೆದರೆ ಭಗವಂತನ ಅನುಗ್ರಹ ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದರ ನಂಬಿಕೆ ಆಗಿತ್ತು. ಎಲ್ಲಿ ಸ್ವಾಭಿಮಾನ, ಆತ್ಮಶುದ್ಧಿ, ದೇಶಭಕ್ತಿ ಇದೆಯೋ ಅಲ್ಲಿ ವಿವೇಕಾನಂದರು ನೆಲೆಸಿದ್ದಾರೆ ಎಂದರು. ಪ್ರಧಾನಿ ಮೋದಿ ಅವರು ಕಳೆದ 9 ವರ್ಷದಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆಯೇ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅದಕ್ಕೆ ಪರಮಾನಂದರು- ವಿವೇಕಾನಂದರ ಪ್ರೇರಣೆ ಇದೆ ಎಂದು ಅವರು ಹೇಳಿದರು. ಹಲಸೂರು ರಾಮಕೃಷ್ಣ ಮಠದ ಸ್ವಾಮಿ ಬೋಧಸ್ವರೂಪಾನಂದ, ನಿವೃತ್ತ ಪ್ರಾಧ್ಯಾಪಕ ಎಚ್‌.ಎನ್. ಮುರಳೀಧರ್ ಉಪನ್ಯಾಸ ನೀಡಿದರು.

click me!