ಬಿಕೆ ಹರಿಪ್ರಸಾದ್‌ರನ್ನ ಬಂಧಿಸಿ ಮಂಪರು ಪರೀಕ್ಷೆ ಮಾಡಿಸಬೇಕು: ಬಿವೈ ವಿಜಯೇಂದ್ರ ವಾಗ್ದಾಳಿ

By Kannadaprabha News  |  First Published Jan 7, 2024, 6:24 AM IST

ಬಿ.ಕೆ. ಹರಿಪ್ರಸಾದ್ ಅವರನ್ನ ಒಳಗಾಕಬೇಕು, ಮಂಪರು ಪರೀಕ್ಷೆ ಮಾಡಬೇಕು. ಈ ನಿರ್ಧಾರವನ್ನ ಮುಖ್ಯಮಂತ್ರಿಗಳು ತಕ್ಷಣ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.


ಮೈಸೂರು (ಜ.7) : ಬಿ.ಕೆ. ಹರಿಪ್ರಸಾದ್ ಅವರನ್ನ ಒಳಗಾಕಬೇಕು, ಮಂಪರು ಪರೀಕ್ಷೆ ಮಾಡಬೇಕು. ಈ ನಿರ್ಧಾರವನ್ನ ಮುಖ್ಯಮಂತ್ರಿಗಳು ತಕ್ಷಣ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸಚಿವರ, ಶಾಸಕರ ಹೇಳಿಕೆಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ ಎಂದು ಆರೋಪಿಸಿದರು.

Tap to resize

Latest Videos

ಕನ್ನಡಪರ ಹೋರಾಟಗಾರರಿಗೆ ಹಿಡನ್‌ ಅಜೆಂಡಾ ಇರುತ್ತೆ, ಅದು ಈಡೇರದಾಗ ಹೋರಾಟ ಮಾಡ್ತಾರೆ: ಸಚಿವ ರಾಜಣ್ಣ

ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ವಿಚಾರದಲ್ಲಿ ಹಿಂದೂ ಕಾರ್ಯಕರ್ತರನ್ನ ಬೆದರಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡ್ತಿದೆ. ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನ ಓಲೈಸುವ ಕೆಲಸ ಮಾಡ್ತಿದೆ. ಹಿಂದೂ ಕಾರ್ಯಕರ್ತರನ್ನ ಬಂಧಿಸೋದು. ಯಾರು ಪೊಲೀಸ್ ಸ್ಟೇಷನ್‌ ಗೆ ಬೆಂಕಿ ಇಟ್ಟವರನ್ನ ಅಮಾಯಕರು ಅನ್ನೋದು. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ. ಇದನ್ನ ನಾವು ಖಂಡಿಸುತ್ತೇವೆ ಎಂದು ಅವರು ಕಿಡಿಕಾರಿದರು. 

ಪಕ್ಷದ ಹಿರಿಯ ನಾಯಕರೇ ಪರೋಕ್ಷವಾಗಿ ಸ್ವಾರ್ಥಿಗಳು: ಬಿವೈ ವಿಜಯೇಂದ್ರ ಕಿಡಿ!

click me!