ಬಸನಗೌಡ ಪಾಟೀಲ ಯತ್ನಾಳ್‌-ಅರುಣ್‌ ಸಿಂಗ್‌ ರಹಸ್ಯ ಮಾತುಕತೆ

Published : Nov 09, 2022, 09:11 AM IST
ಬಸನಗೌಡ ಪಾಟೀಲ ಯತ್ನಾಳ್‌-ಅರುಣ್‌ ಸಿಂಗ್‌ ರಹಸ್ಯ ಮಾತುಕತೆ

ಸಾರಾಂಶ

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಧ್ಯೆ ಮಂಗಳವಾರ ಸಂಜೆ ವಿಜಯಪುರದಲ್ಲಿ ರಹಸ್ಯ ಮಾತುಕತೆ ನಡೆದಿದ್ದು, ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. 

ವಿಜಯಪುರ (ನ.09): ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಧ್ಯೆ ಮಂಗಳವಾರ ಸಂಜೆ ವಿಜಯಪುರದಲ್ಲಿ ರಹಸ್ಯ ಮಾತುಕತೆ ನಡೆದಿದ್ದು, ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸುಮಾರು 15 ನಿಮಿಷಗಳವರೆಗೆ ಅರುಣಸಿಂಗ್‌ ಮತ್ತು ಯತ್ನಾಳ ಅವರ ಮಧ್ಯೆ ರಾಜಕೀಯ ಬೆಳವಣಿಗೆ ಬಗ್ಗೆ ಮಾತುಕತೆ ನಡೆಯಿತು ಎಂದು ಹೇಳಲಾಗುತ್ತಿದೆ. ಆದರೆ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎಂಬುವುದು ನಿಗೂಢವಾಗಿದೆ.

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಯತ್ನಾಳ ಕೇವಲ ಒಬ್ಬ ಶಾಸಕ ಎಂದು ಅರುಣಸಿಂಗ್‌ ಅವರು ಹೇಳಿಕೆ ನೀಡಿದ್ದರು. ಮಂಗಳವಾರ ಇಂಡಿಗೆ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಅರುಣಸಿಂಗ್‌ ಅವರ ಜೊತೆಗೆ ಶಾಸಕ ಯತ್ನಾಳ ಅವರು ಸಮಾನ ದೂರ ಕಾಯ್ದುಕೊಂಡಿದ್ದರು. ಇಂಡಿಯಲ್ಲಿ ಯತ್ನಾಳ ಬಗ್ಗೆ ಪ್ರತಿಕ್ರಿಯೆ ನೀಡಲು ಅರುಣಸಿಂಗ್‌ ಅವರು ನಿರಾಕರಿಸಿದ್ದರು.

ಶೃಂಗೇರಿ ಮಸೀದಿ ಎದುರು ಬಾವುಟ ಕಟ್ಟುವಾಗ ಗಲಾಟೆ, ಹೊಡೆದಾಟ

ಆದರೆ ರಾತ್ರಿಯಾಗುತ್ತಿದ್ದಂತೆಯೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಮಾಲೀಕತ್ವದ ಹೈಪರ್‌ ಮಾರ್ಟ್‌ಗೆ ಅರುಣ ಸಿಂಗ್‌ ಅವರನ್ನು ಭೋಜನ ಕೂಟಕ್ಕೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಶಾಸಕ ಯತ್ನಾಳ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌ ಅವರನ್ನು ಭೋಜನಕ್ಕೆ ಆಮಂತ್ರಿಸಿದ್ದರು. ಭೋಜನ ಕೂಟದಲ್ಲಿ ಸಿಂದಗಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಅವರು ಭಾಗಿಯಾಗಿದ್ದರು.

ಇದೇ ಸಂದರ್ಭದಲ್ಲಿ ಮಹಾನಗರಪಾಲಿಕೆ ಬಿಜೆಪಿ 18 ಸದಸ್ಯರು ಅರುಣಸಿಂಗ್‌ ಅವರನ್ನು ಭೇಟಿಯಾದರು. ಆಗ ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯರನ್ನು ಅರುಣಸಿಂಗ್‌ ಅವರು ಅಭಿನಂದಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಆಪ್ತ ವಲಯದಲ್ಲಿ ಅರುಣಸಿಂಗ್‌ ಹಾಗೂ ಯತ್ನಾಳ ಅವರದ್ದು ಸೌಹಾರ್ದ ಭೇಟಿ ಎಂದು ಹೇಳಲಾಗುತ್ತದೆ. ಆದರೆ ಅರುಣಸಿಂಗ್‌ ಹಾಗೂ ಯತ್ನಾಳ ಅವರಿಬ್ಬರ ಮಧ್ಯೆ ಸಾಕಷ್ಟು ರಾಜಕೀಯ ವಿಚಾರಗಳು ಚರ್ಚೆಗೆ ಬಂದವು ಎಂದು ಹೇಳಲಾಗಿದೆ.

ನಾನು ಯಾರನ್ನೂ ಬಿಡಲ್ಲ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರನ್ನೂ ಬಿಡಲ್ಲ. ಅಬ್ಬರಿಸುತ್ತೇನೆ ಎಂದು ಕಿಡಿಕಾರಿದರು. ನಾನು ಈಗ ವಿಜಯಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದೇನೆ. ನನಗೆ ಸದ್ಯಕ್ಕೆ ಅಬ್ಬರಿಸಲು ಸಮಯ ಇಲ್ಲ. ನಾನು ಯಾರನ್ನೂ ಸಡಿಲ ಬಿಡಲ್ಲ. ನಾನು ಯಾರ ಮನೆಗೂ ಹೋಗಿ ನಿಂತಿಲ್ಲ. ಅಂತಹ ಗತಿ ನನಗೆ ಬಂದಿಲ್ಲ ಎಂದರು.

Belagavi: ಬಾಲಕಿ ಚುಡಾಯಿಸಿದ್ದನ್ನು ಪ್ರಶ್ನಿಸಿದ ನಾಲ್ವರಿಗೆ ಚಾಕು ಇರಿತ

ನಟ ಚೇತನ ಮುಸ್ಲಿಂ ಏಜೆಂಟ್‌: ಇದೇ ಸಂದರ್ಭದಲ್ಲಿ ಕಾಂತಾರ ಸಿನಿಮಾ ಕುರಿತು ಚೇತನ್‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್‌, ನಟ ಚೇತನ್‌ ಮುಸ್ಲಿಂ ಏಜೆಂಟ್‌ ಎಂದು ಜರಿದರು. ನಟ ಚೇತನ್‌ ವಿಜಯಪುರಕ್ಕೂ ನಟನೆ ಮಾಡಲು ಬಂದಿದ್ದ. ಹಿಂದುತ್ವದ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ. ಮುಸ್ಲಿಮರು ರೊಕ್ಕಾ ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ. ಹಿಂದೂ ವಿರೋಧಿ ಮಾತನಾಡಿದರೆ ಶಹಬ್ಬಾಷಗಿರಿ ಸಿಗುತ್ತದೆ ಎಂದು ನಟ ಚೇತನ ಮಾತನಾಡುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ