ಶ್ರೀರಾಮುಲರನ್ನ ಪೆದ್ದ ಎಂದ ಸಿದ್ದರಾಮಯ್ಯಗೆ ದುರಂಹಕಾರ: ರವಿಕುಮಾರ್‌

By Kannadaprabha NewsFirst Published Oct 18, 2022, 9:30 PM IST
Highlights

ಸಿದ್ದರಾಮಯ್ಯ ಒಬ್ರೆ ಜಾಣರಾ? ಅವರಿಗಷ್ಟೇ ಸಂವಿಧಾನ ಗೊತ್ತಾ? ಬೇರೆಯವರಿಗೆ ಗೊತ್ತಿಲ್ಲವಾ? ಪ್ರಬುದ್ಧತೆ, ಜಾಣತನ ಅದೇನ್‌ ಸಿದ್ದರಾಮಯ್ಯನವರೊಬ್ಬರೇ ಗುತ್ತಿಗೆ ಪಡೆದಿದ್ದಾರಾ? ಎಂದು ಮಾತಿನಲ್ಲೇ ಛೇಡಿಸಿದ ರವಿ ಕುಮಾರ್‌ 

ಕಲಬುರಗಿ(ಅ.18):  ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದಿರುವ ಸಿದ್ದರಾಮಯ್ಯ ತಾವೊಬ್ಬರೇ ಪ್ರಬ್ಧುರು, ಜಾಣರು ಅನ್ಕೊಂಡಿದ್ದಾರೆ. ಅವರಿಗೆ ದುರಹಂಕಾರ ಜಾಸ್ತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಒಬ್ರೆ ಜಾಣರಾ? ಅವರಿಗಷ್ಟೇ ಸಂವಿಧಾನ ಗೊತ್ತಾ? ಬೇರೆಯವರಿಗೆ ಗೊತ್ತಿಲ್ಲವಾ? ಪ್ರಬುದ್ಧತೆ, ಜಾಣತನ ಅದೇನ್‌ ಸಿದ್ದರಾಮಯ್ಯನವರೊಬ್ಬರೇ ಗುತ್ತಿಗೆ ಪಡೆದಿದ್ದಾರಾ? ಎಂದು ಮಾತಿನಲ್ಲೇ ಛೇಡಿಸಿರುವ ರವಿ ಕುಮಾರ್‌ ಪೆದ್ದ ಎಂದು ಕರೆದಿರೋ ಶ್ರೀರಾಮುಲು ಮುಂದೆಯೇ ಗೆಲ್ಲಲು ನೀವು ತಿಣುಕಾಡಬೇಕಾಯ್ತು, ಅದನ್ನು ಮೊದಲು ತಿಳಿದುಕೊಳ್ಳಿರಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.

ಅ.18, 19ರಂದು ಬೀದರ್‌, ಕಲಬುರಗಿ, ಯಾದಗಿರಿಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಪೂರ್ವಸಿದ್ಧತೆಗಾಗಿ ಆಗಮಿಸಿರುವ ರವಿಕುಮಾರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ಜರಿದರು.

ಬೆಂದ ಬದುಕಿನಲ್ಲಿ ಎದ್ದು ನಿಂತ ಖರ್ಗೆ: ಇದು ಕಾಂಗ್ರೆಸ್ ಶಿಸ್ತಿನ ಸಿಪಾಯಿಯ ಕತೆ

ಮೈಸೂರಿನ ಚಾಮುಂಡೇಶ್ವರಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದಾಗ ಬಾದಾಮಿಗೆ ಬಂದು ಅಲ್ಲಿ ತಿಣುಕಾಡುತ್ತ 1 ಸಾವಿರ ಮತಗಳ ಅಂತರದಲ್ಲಿ ಗೆದ್ದವರು ನೀವು, ಅಹಂಕಾರದ ಮಾತುಗಳು ಶೋಭೆ ತರೋದಿಲ್ಲ. ರಾಮುಲು ಅವರನ್ನು ಪೆದ್ದ ಂದು ಹೇಳಿದ್ದಕ್ಕೆ ಸಿದ್ದರಾಮಯ್ಯ ಆಗಿರುವ ಪ್ರಮಾದ ಅರಿತು ಕ್ಷಮೆ ಯಾಚಿಸಬೇಕು ಎಂದು ರವಿಕುಮಾರ್‌ ಆಗ್ರಹಿಸಿದರು.

ರಾಹುಲ್‌ದು ಕಾಂಗ್ರೆಸ್‌ ತೊಡೋ ಯಾತ್ರೆ:

ಭಾರತ್‌ ಜೋಡೋ ಎಂದು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಯಾತ್ರೆ ಕಾಂಗ್ರೆಸ್‌ ತೊಡೋ ಯಾತ್ರೆಯಾಗಿ ಪರಿವರ್ತಿತವಾಗುತ್ತಿದೆ. ರಾಹುಲ್‌ ಈ ಯಾತ್ರೆ ಶುರು ಮಾಡಿದ ದಿನದಿಂದಲೇ ಜಮ್ಮು ಕಾಶ್ಮೀರದಲ್ಲಿ ಅಜಾದ್‌ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಗೋವಾದಲ್ಲಿ 8 ಜನ ಕಾಂಗ್ರೆಸ್ಸಿಗರು ಬಿಜೆಪಿ ಸರಿದ್ದಾರೆ. ಹೀಗೆ ಭಾರತದಾದ್ಯಂತ ಕಾಂಗ್ರೆಸ್‌ ಪಕ್ಷ ಚಿದ್ರಗೊಳ್ಳುತ್ತಿದೆ. ಭಾರತ ಜೋಡೋ ಭರದಲ್ಲಿ ಕಾಂಗ್ರೆಸ್‌ ತೋಡೋ ಸಾಗಿದೆ ಎಂದರು.

ರಾಜಕೀಯವಾಗಿ ಬಲಿ ಕೊಡಲು ಖರ್ಗೆಗೆ ಎಐಸಿಸಿ ಪಟ್ಟ: ಈಶ್ವರಪ್ಪ

ಕುರುಬರು ಹೆಚ್ಚಾಗಿರೋದು ಬಿಜೆಪಿಯಲ್ಲೇ:

ಸಿದ್ದರಾಮಯ್ಯ ತಮ್ಮದೇ ಸಮುದಾಯದ ನಾಯಕರನ್ನು ಬೇಳೆಸಲಿಲ್ಲ. ಹಿಂದುಳಿದವರಿಗೂ ಬೆಳೆಸಲಿಲ್ಲ. ಅಹಿಂದ ಬಗ್ಗೆ ಮಾತನ್ನಾಡುತ್ತಾರೆ, ಆದರೆ ಅಲ್ಪಸಂಖಾತರ ಓಲೈಕೆ ಮಾಡತ್ತ ಹಿಂದುಳಿದವರನ್ನು ತುಳಿಯುತ್ತಾರೆ. ಬಿಜೆಪಿಯಲ್ಲಿ ಕೇಂದ್ರದಲ್ಲಿ 52 ಜನ ಓಬಿಸಿ ಸಚಿವರಿದ್ದಾರೆ. ಕುರುಬ ಸಮುದಾಯದ ಅತೀಹೆಚ್ಚು ಮುಖಂಡರು ಬಿಜೆಪಿಯಲ್ಲಿದ್ದಾರೆ. ಸಿದ್ದರಾಮಯ್ಯನವರದ್ದು ಬರೀ ಹೇಳಿಕೆಗೆ ಸಮುದಾಯದ ಓಲೈಕೆಯೇ ಹೊರತು ನಿಜವಾಗಿ ಇಲ್ಲವೇ ಇಲ್ಲ ಎಂದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಈಗಾಗಲೇ ಶುರುವಾಗಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅ.18 ಹಾಗೂ 19ರ 2 ದಿನಗಳ ಕಾಲ ಬೀದರ್‌, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನಡೆಯಲಿದೆ. ಅ. 18 ರಂದು ಬೀದರ್‌ನ ಔರಾದ್‌ ಹಾಗೂ ಹುಮ್ನಾಬಾದ್‌ನಲ್ಲಿ ಹಾಗೂ ಅ. 19 ರಂದು ಕಲಬುರಗಿ ಜಿಲ್ಲೆಯ ಗ್ರಾಮೀಣ ಅಸೆಂಬ್ಲಿ ಮತಕ್ಷೇತ್ರ ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಸಮಾವೇಶಗಳು ನಡೆಯಲಿವೆ ಎಂದು ರವಿ ಕುಮಾರ್‌ ಹೇಳಿದ್ದಾರೆ.
 

click me!