ಬಿಜೆಪಿಯವರು ಔಟ್ ಸೋರ್ಸ್ ಮೂಲಕವಾದ್ರೂ ವಿಪಕ್ಷ ನಾಯಕನ ಆರಿಸಿ: ನಾಗತಿಹಳ್ಳಿ ಚಂದ್ರಶೇಖರ್‌ ಸಲಹೆ

Published : Sep 01, 2023, 12:31 PM ISTUpdated : Sep 01, 2023, 01:36 PM IST
ಬಿಜೆಪಿಯವರು ಔಟ್ ಸೋರ್ಸ್ ಮೂಲಕವಾದ್ರೂ ವಿಪಕ್ಷ ನಾಯಕನ ಆರಿಸಿ: ನಾಗತಿಹಳ್ಳಿ ಚಂದ್ರಶೇಖರ್‌ ಸಲಹೆ

ಸಾರಾಂಶ

ವಿಪಕ್ಷ ನಾಯಕನಿಲ್ಲದೆ ವಿಧಾನ ಸಭೆ ಅಪೂರ್ಣ ಎನಿಸುತ್ತಿದೆ. ನಿಮಗೆ  ಆಯ್ಕೆ ತೀರಾ ಕಷ್ಟವಾದಲ್ಲಿ ಕಾಂಗ್ರೆಸ್ ನಲ್ಲೇ ಸೂಕ್ತರಾದ ಒಬ್ಬರನ್ನು ಹುಡುಕಿ ವಿಪಕ್ಷ ನಾಯಕನ ಹುದ್ದೆಯನ್ನು  ‘ಔಟ್ ಸೋರ್ಸ್’ ಮಾಡಿ! 

ಬೆಂಗಳೂರು (ಸೆ.01): ಕರ್ನಾಟಕ ವಿಧಾನಸಭಾ ಚುನಾವಣೆ- 2023ರಲ್ಲಿ ಸೋತು ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೂಡಲೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ತಮ್ಮಿಂದ ಸಾಧ್ಯವಾಗದಿದ್ದರೆ, ಕಾಂಗ್ರೆಸ್‌ ಪಕ್ಷದಲ್ಲೇ ಒಬ್ಬ ಸೂಕ್ತ ವ್ಯಕ್ತಿಯನ್ನು ಆರಿಸಿ ಹೊರಗುತ್ತಿಗೆ (ಔಟ್‌ ಸೋರ್ಸ್‌) ಆಧಾರದಲ್ಲಿ ವಿಪಕ್ಷ ನಾಯಕ ಸೀಟಿನಲ್ಲಿ ಕೂರಿಸಿ ಎಂದು ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸಲಹೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಬಿಜೆಪಿಗೆ ಒಂದು ವಿನಮ್ರ ಸಲಹೆ. ವಿಪಕ್ಷ ನಾಯಕನಿಲ್ಲದೆ ವಿಧಾನ ಸಭೆ ಅಪೂರ್ಣ ಎನಿಸುತ್ತಿದೆ. ನಿಮಗೆ  ಆಯ್ಕೆ ತೀರಾ ಕಷ್ಟವಾದಲ್ಲಿ ಕಾಂಗ್ರೆಸ್ ನಲ್ಲೇ ಸೂಕ್ತರಾದ ಒಬ್ಬರನ್ನು ಹುಡುಕಿ ವಿಪಕ್ಷ ನಾಯಕನ ಹುದ್ದೆಯನ್ನು  ‘ಔಟ್ ಸೋರ್ಸ್’ ಮಾಡಿ! ಎಂದು ಬರೆದು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ವಿಭಿನ್ನ ರೀತಿಯ ಕಮೆಂಟ್‌ಗಳು ಕೂಡ ಬರುತ್ತಿವೆ. 

ಆಸ್ತಿಗಾಗಿ 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ ಮಲತಾಯಿ: ಕಂದಮ್ಮ ದಾರುಣ ಸಾವು

ನಾಗತ್ತಿಹಳ್ಳಿ ಚಂದ್ರಶೇಖರ್‌ ಅವರ ಸಲಹೆಗೆ ಕಮೆಂಟ್‌ ಮಾಡಿರುವ ರಾಮ್‌ ಮಂಜುನಾಥ್‌ ಎನ್ನುವವರು 'ಈ ಸಲಹೆ ಕೇಂದ್ರ ಸರ್ಕಾರಕ್ಕೂ ಅನ್ವಯ ಆಗುತ್ತದೆಯೇ.. ಅಲ್ಲಿಯೂ ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ಗೆ ವಿರೋಧಪಕ್ಷದ ಸ್ಥಾನ ಸಿಕ್ಕಿಲ್ಲ' ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಂದೆಡೆ ಬೋಪಣ್ಣ ಎನ್ನುವವರು 'ನಮ್ಮ್ ಬಿಜೆಪಿಯೋರು... ಥೇಟ್ ರಾಹುಲ್ ಗಾಂಧಿ ಅವರಂತಹ ವ್ಯಕ್ತಿತ್ವದ ನಾಯಕನನ್ನ ಹುಡುಕುತ್ತಿದ್ದಾರೆ ಸಾ... ವಿರೋಧ ಪಕ್ಷದ ನಾಯಕನಾಗಿ ಮಾಡಲು... ಸ್ವಲ್ಪ ತಾಳ್ಮೆಯಿಂದ ಇರಿ... ಎಂದು ಕಮೆಂಟ್‌ ಮೂಲಕ ತಿರುಗೇಟು ನೀಡಿದ್ದಾರೆ. 

ಬಿಜೆಪಿ ಮುಳುಗುತ್ತಿರುವ ಹಡಗು ಆಗಿದೆ: ರಾಜ್ಯದಲ್ಲಿ ಬಿಜೆಪಿಯಿಂದ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಬಗ್ಗೆ ಮಾತನಾಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ನಾವಿಕನಿಲ್ಲದೆ ಬಿಜೆಪಿ ದೋಣಿ ಅಲುಗಾಡುತ್ತಿದೆ. ಬಿಜೆಪಿ ಎನ್ನುವ ಹಡಗು ಮುಳುಗುತ್ತಿದೆ ಅನ್ನೋ ಭಯ ಬಿಜೆಪಿ ಶಾಸಕರಿಗೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದ್ದರು. ಸರ್ಕಾರ ರಚನೆಯಾಗಿ 100 ದಿನ ಕಳೆಯುತ್ತಾ ಬಂದರೂ, ವಿಪಕ್ಷ ನಾಯಕನ ಅಯ್ಕೆ ಮಾಡುವ ಸಾಮರ್ಥ್ಯ ವಿಪಕ್ಷಗಳಿಗೆ ಇಲ್ಲ. ವಿಪಕ್ಷ ನಾಯಕನನ್ನು ಮುಖ್ಯಮಂತ್ರಿಗಳ ನೆರಳು ಎಂದು ಕರಿಯುತ್ತಾರೆ. ಆದರೆ, ರಾಜ್ಯದಲ್ಲಿ ವಿಪಕ್ಷ ನಾಯಕನನ್ನು ಅಯ್ಕೆ ಮಾಡದೆ ರಾಜ್ಯಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಹೇಳಿದ್ದರು.

ಸೆ.11ರಂದು ಬೆಂಗಳೂರು ಬಂದ್‌: ಖಾಸಗಿ ಬಸ್‌, ಆಟೋ, ಟ್ಯಾಕ್ಸಿಗಳ ಸೇವೆ ಸ್ಥಗಿತ

ಆಂತರಿಕ ಕಚ್ಚಾಟದಿಂದಲೇ ವಿಪಕ್ಷ ನಾಯಕನ ಆಯ್ಕೆ ಆಗುತ್ತಿಲ್ಲ:  ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ಒದ್ದಾಡುತ್ತಿದೆ. ಬಿಜೆಪಿ ಸಂಪೂರ್ಣ ಗೊಂದಲದ ಗೂಡಾಗಿದೆ. ಜೆಡಿಎಸ್‌ ಪಕ್ಷ ಕೂಡಾ ಅದೇ ರೀತಿಯಾಗಿದೆ ಎಂದು ವ್ಯಂಗ್ಯವಾಡಿದರು. ಬೇರೆ ಪಕ್ಷಗಳಿಗೆ ಹೊಲಿಸಿದರೆ ನಮ್ಮ ಪಕ್ಷ ಜನಪರವಾಗಿದೆ. ಹಾಗಾಗಿ, ಬೇರೆ ಶಾಸಕರು ನಮ್ಮ ಪಕ್ಷಕ್ಕೆ ಬರೋಕೆ ಮನಸ್ಸು ಮಾಡಿರಬಹುದು ಎಂದರು. ನನಗೆ ಎಷ್ಟುಜನ ಬರ್ತಾರೆ ಅನ್ನೊ ಮಾಹಿತಿ ಇಲ್ಲ. ನಮಗೇನು ಶಾಸಕರನ್ನು ಕರೆ ತರಬೇಕು ಎನ್ನುವ ಅವಶ್ಯಕತೆಯಿಲ್ಲ, ನಮ್ಮ ಸರ್ಕಾರ ಸುಭದ್ರವಾಗಿದೆ. ಬರುವವರ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌
ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌