ಎಲೆಕ್ಷನ್ ರಿಸಲ್ಟ್: ಬಳ್ಳಾರಿಯಲ್ಲಿ ಕೈ ಕರಾಮತ್ತು, ಬಿಜೆಪಿ, ಶ್ರೀರಾಮುಲುಗೆ ಭಾರೀ ಮುಖಭಂಗ

By Suvarna NewsFirst Published Apr 30, 2021, 3:02 PM IST
Highlights

ಕೊರೋನಾ ಆತಂಕದ ಮಧ್ಯೆಯೂ ಸ್ಥಳೀಯ ಚುನಾವಣೆಗಳು ನಡೆದಿದ್ದು, ಇಂದು (ಏ.30) ಫಲಿತಾಂಶ ಪ್ರಕಟವಾಗಿದೆ. ಅದಲ್ಲೂ ಬಳ್ಳಾರಿಯಲ್ಲಿ ಬಿಜೆಪಿ ಮರ್ಮಾಘಾತವಾಗಿದೆ.

ಬಳ್ಳಾರಿ, (ಏ.30): ಗಣಿನಾಡು ಬಳ್ಳಾರಿ ಅಂದ ತಕ್ಷಣ ನೆನಪಿಗೆ ಬರೋದು ಅಂದ್ರೆ ರೆಡ್ಡಿ ಬ್ರದರ್ಸ್ ಜೊತೆ ಶ್ರೀರಾಮುಲು. ಬಿಜೆಪಿಯ ಭದ್ರಕೋಟೆ. ಆದ್ರೆ, ಇದೀಗ ನಗರಸಭೆ ಚುನಾವಣೆಯಲ್ಲಿ ಕಮಲ ನೆಲಕಚ್ಚಿದ್ದು, ಸಚಿವ ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದೆ.

ಹೌದು.. ತೀವ್ರ ಕುತೂಹಲ ಮೂಡಿಸಿದ್ದಂತ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು (ಶಕ್ರವಾರ) ಪ್ರಕಟಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ದರೇ, ಬಿಜೆಪಿಗೆ ಮರ್ಮಾಘಾತವಾಗಿದೆ.

ಕೊರೋನಾ ಆತಂಕದ ಮಧ್ಯೆ ಚುನಾವಣೆ ಪ್ರಚಾರ: ಸಬೂಬು ಹೇಳಿದ ಶ್ರೀರಾಮುಲು

ಬಳ್ಳಾರಿಯ 39 ವಾರ್ಡ್ ಗಳಿಗೆ ನಡದ ಚುನಾವಣೆಯಲ್ಲಿ ಪೈಕಿ, ಕಾಂಗ್ರೆಸ್ 21 ಸ್ಥಾನಗಳಲ್ಲಿ ಜಯ ಗಳಿದ್ರೆ, ಬಿಜೆಪಿ 13 ಹಾಗೂ 5 ಸ್ಥಾನಗಳಲ್ಲಿ ಇತರ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದೆ.

ಸೋಮಶೇಖರ್ ರೆಡ್ಡಿ ಪುತ್ರನಿಗೆ ಸೋಲು
ಪ್ರಮುಖವಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಡ್ ನಂ 18ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಪುತ್ರ ಶ್ರವಣ ಕುಮಾರ್ ರೆಡ್ಡಿ ಸೋಲು ಕಂಡಿದ್ದಾರೆ. ಈ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ನಂದೀಶ್ 128 ಮತಗಳಿಂದ ಗೆದ್ದಿರುವುದು ಅಚ್ಚರಿಯಾಗಿದೆ.

ಶ್ರೀರಾಮುಲುಗೆ ಮುಖಭಂಗ
ಹೌದು....ಕೊರೋನಾದಿಂದ ಇಡೀ ದೇಶವೇ ಆತಂದಲ್ಲಿದ್ರೆ, ಇತ್ತ ಸಮಾಜ ಕಲ್ಯಾಣ ಸಚಿವ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಭರ್ಜರಿ ಪ್ರಚಾರ ಮಾಡಿದ್ದರು.  ಸಾರ್ವಜನಿಕವಾಗಿ ಟೀಕೆಗಳು ವ್ಯಕತವಾಗಿದ್ರು ಶ್ರೀರಾಮುಲು ಮಾತ್ರ ನೂರಾರು ಜನರನ್ನು ಸೇರಿಸಿಕೊಂಡು ಭರ್ಜರಿ ಕ್ಯಾಂಪೇನ್ ಮಾಡಿದ್ರು. ಆದ್ರೆ, ಮತದಾರ ಬಿಜೆಪಿಯನ್ನು ನಿರಾಕರಿಸಿದ್ದು, ಕಾಂಗ್ರೆಸ್‌ನ್ನು ಬೆಂಬಲಿಸಿದ್ದಾರೆ. ಇದರಿಂದ ಶ್ರೀರಾಮುಲುಗೆ ಮುಖಭಂಗವಾಗಿದೆ.

click me!