Breaking: ಬಿಜೆಪಿ 2ನೇ ಪಟ್ಟಿ ಪ್ರಕಟ, ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌, ಬೊಮ್ಮಾಯಿಗೆ ಹಾವೇರಿ ಟಿಕೆಟ್‌

By Santosh Naik  |  First Published Mar 13, 2024, 7:11 PM IST

ಬಿಜೆಪಿ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಲಾಗಿದೆ.
 


ನವದೆಹಲಿ (ಮಾ.13): ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ 2ನೇ ಪಟ್ಟಿಯನ್ನು ಬುಧವಾರ ಸಂಜೆ ಬಿಡುಗಡೆ ಮಾಡಿದೆ. 72 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಡ್‌ ಘೋಷಣೆ ಮಾಡಿದೆ. ನಿರೀಕ್ಷೆಯಂತೆ ಮೈಸೂರು-ಕೊಡಗು ಕ್ಷೇತ್ರದಿಂದ ರಾಜಕುಮಾರ ಯದುವೀರ್‌ ಒಡೆಯರ್‌ಗೆ ಬಿಜೆಪಿ ಟಿಕೆಟ್‌ ನೀಡಿದೆ. ಹಿಂದಿನ ಎರಡು ಬಾರಿ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಮಿಸ್‌ ಆಗಿದೆ. ಹಾಲಿ ಸಂಸದರಾಗಿದ್ದ 9 ಮಂದಿಗೆ ಟಿಕೆಟ್‌ ನೀಡಲಾಗಿಲ್ಲ. ಇದರಲ್ಲಿ ಮೂರು ಮಂದಿ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದಿದ್ದರು. ಆ ಕಾರಣಕ್ಕಾಗಿ ಬೇರೆಯವರಿಗೆ ಟಿಕೆಟ್‌ ನೀಡಲಾಗಿದೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಟಿಕೆಟ್‌ಅನ್ನು ಇನ್ನೂ ಘೋಷಣೆ ಮಾಡಲಾಗಿಲ್ಲ. ಈ ಕ್ಷೇತ್ರದಲ್ಲಿ ಯಾರು ಟಿಕೆಟ್‌ ಪಡೆಯಲಿದ್ದರೆ ಎನ್ನುವುದನ್ನು ಹೈಕಮಾಂಡ್‌ ನಾಯಕರೇ ತೀರ್ಮಾನ ಮಾಡಲಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಟಿಕೆಟ್‌ಗಳ ಕ್ಷೇತ್ರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಪ್ರಮುಖವಾಗಿ ತುಮಕೂರು ಕ್ಷೇತ್ರದಿಂದ ವಿ. ಸೋಮಣ್ಣ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

2ನೇ ಪಟ್ಟಿಯಲ್ಲಿ ಲೋಕಸಭೆಗೆ ಒಟ್ಟು 72 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.  72 ಮಂದಿ  ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಒಟ್ಟು 20 ಅಚ್ಚರಿಗಳನ್ನು ಬಿಜೆಪಿ ಪ್ರಕಟಿಸಿದೆ. ಇನ್ನು ಮಹಾರಾಷ್ಟ್ರ ನಾಗ್ಪುರದಿಂದ ನಿತಿನ್‌ ಗಡ್ಕರಿ, ಮುಂಬೈ ಉತ್ತರದಿಂದ ಪೀಯುಷ್‌ ಗೋಯೆಲ್‌ ಹಾಗೂ ಭೀಡ್‌ ಕ್ಷೇತ್ರದಿಂದ ಪಂಕಜಾ ಮುಂಡೆ ಅವರಿಗೆ ಟಿಕೆಟ್‌  ನೀಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಹರ್ಯಾಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮನೋಹರ್ ಲಾಲ್‌ ಖಟ್ಟರ್‌ಗೆ ಕರ್ನಾಲ್‌ನಿಂದ ಟಿಕೆಟ್‌ ನೀಡಲಾಗಿದೆ.

Tap to resize

Latest Videos

ಹಿಮಾಚಲ ಪ್ರದೇಶದ ಹಮೀರ್‌ ಪುರದಿಂದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪರ್ಧೆ ಮಾಡಲಿದ್ದರೆ, ತೆಲಂಗಾಣದ ಮೆಹಬೂಬ್‌ ನಗರದಿಂದ ಡಿಕೆ ಅರುಣಾ ಸ್ಪರ್ಧೆ ಮಾಡಲಿದ್ದಾರೆ. ಡಿಕೆ ಅರುಣಾ ಕರ್ನಾಟಕ ಸಹ ಉಸ್ತುವಾರಿ ಕೂಡ ಆಗಿದ್ದರು. ಉತ್ತರಾಖಂಡದ ಮಾಜಿ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಅವರಿಗೆ ಹರಿದ್ವಾರ ಟಿಕೆಟ್‌ ಪಡೆದಿದ್ದರೆ, ಗಡವಾಲ್‌ನಿಂದ ಅನೀಲ್ ಬುಲೂನಿಗೆ ಟಿಕೆಟ್‌ ನೀಡಲಾಗಿದೆ.

Breaking: ಮಿಷನ್‌ 400 ಗುರಿ, 195 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿ ರಿಲೀಸ್‌!

ಬಿಜೆಪಿಯ 9 ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ನಳಿನ್ ಕುಮಾರ್‌ ಕಟೀಲ್‌ಗೆ ದಕ್ಷಿಣ ಕನ್ನಡ, ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್‌ ಸಿಂಹ, ಕೊಪ್ಪಳದಿಂದ ಕರಡಿ ಸಂಗಣ್ಣ, ಬೆಂಗಳೂರು ಉತ್ತರದಿಂದ ಸದಾನಂದ ಗೌಡ, ಬಳ್ಳಾರಿಯಲ್ಲಿ ದೇವೇಂದ್ರಪ್ಪ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದ್ದರೆ, ಚಾಮರಾಜನಗರದಲ್ಲಿ ಶ್ರೀನಿವಾಸ್‌ ಪ್ರಸಾದ್‌,  ಹಾವೇರಿಯಲ್ಲಿ ಸಿಎಂ ಉದಾಸಿ, ತುಮಕೂರಿನಲ್ಲಿ ಜಿಎಸ್‌ ಬಸವರಾಜ್‌ ಹಾಗೂ ದಾವಣಗೆರೆಯಲ್ಲಿ ಜಿಎಂ ಸಿದ್ಧೇಶ್ವರ ನಿವೃತ್ತಿ ಘೋಷಣೆ ಮಾಡಿರುವ ಕಾರಣ ಬೇರೆಯವರಿಗೆ ಟಿಕೆಟ್‌ ನೀಡಲಾಗಿದೆ.

ಮಥುರಾಕ್ಕೆ ಹೇಮಾ ಮಾಲಿನಿ ಫಿಕ್ಸ್​! ಕಂಗನಾ ರಣಾವತ್​ ಕಥೆ ಏನು? ಬಿಜೆಪಿ ಪಟ್ಟಿ ಹೇಳ್ತಿರೋದೇನು?

ಟಿಕೆಟ್‌ ಪಡೆದ ರಾಜ್ಯದ 20 ಅಭ್ಯರ್ಥಿಗಳು

ಬಿಜಾಪುರ- ರಮೇಶ್ ಜಿಗಜಿಣಗಿ
ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ- ಪಿ.ಸಿ. ಗದ್ದಿಗೌಡರ
ಕಲಬುರಗಿ- ಉಮೇಶ್ ಜಾಧವ್
ಬೀದರ್- ಭಗವಂತ ಖೂಬಾ
ಕೊಪ್ಪಳ- ಡಾ. ಬಸವರಾಜ ಕ್ಯಾವತೋರ್
ಬಳ್ಳಾರಿ- ಶ್ರೀರಾಮುಲು
ಹಾವೇರಿ- ಬಸವರಾಜ ಬೊಮ್ಮಾಯಿ
ಧಾರವಾಡ- ಪ್ರಹ್ಲಾದ್ ಜೋಶಿ
ದಾವಣಗೆರೆ- ಗಾಯತ್ರಿ ಸಿದ್ದೇಶ್ವರ
ಶಿವಮೊಗ್ಗ- ಬಿ.ವೈ. ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ - ಕ್ಯಾ.ಬ್ರಿಜೇಶ್ ಚೌಟಾ
ತುಮಕೂರು - ವಿ. ಸೋಮಣ್ಣ
ಮೈಸೂರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಚಾಮರಾಜನಗರ- ಎಸ್. ಬಸವರಾಜು
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್. ಮಂಜುನಾಥ್
ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ - ಪಿ.ಸಿ. ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ

 

 


 

click me!