ಸಂಕಲ್ಪ ಪತ್ರ ಹೆಸರಿನಲ್ಲಿ ಲೋಕ ಚುನಾವಣೆಗೆ ಪ್ರಣಾಳಿಕೆ ಬಿಡುಗೊಳಿಸಿದ ಬಿಜೆಪಿ

By Anusha Kb  |  First Published Apr 14, 2024, 9:50 AM IST

 ಭರ್ಜರಿ ಪ್ರಚಾರದೊಂದಿಗೆ 3ನೇ ಬಾರಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಣಾಳಿಕೆ ಬಿಡುಗೊಳಿಸಿದ್ದಾರೆ. 


ನವದೆಹಲಿ: ಭರ್ಜರಿ ಪ್ರಚಾರದೊಂದಿಗೆ 3ನೇ ಬಾರಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಣಾಳಿಕೆ ಬಿಡುಗೊಳಿಸಿದ್ದಾರೆ. ಮೋದಿ ಕಿ ಗ್ಯಾರಂಟಿ ಘೋಷಣೆಯೊಂದಿಗೆ ಸಂಕಲ್ಪ ಪತ್ರ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಕೇಂದ್ರದ ಯೋಜನೆಗಳ ಫಲಾನುಭವಿಗಳಿಗೆ ಸಂಕಲ್ಪ ಪತ್ರಗಳನ್ನು ವಿತರಿಸಲಾಯ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಜೆಪಿ, ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಪಸ್ಥಿತರಿದ್ದರು.

ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಈ ಸಂಕಲ್ಪ ಪತ್ರವನ್ನು ನಿರ್ಮಿಸಲಾಗಿದೆ. ಈ ಸಂಕಲ್ಪ ಸಮಿತಿಯ ಅಧ್ಯಕ್ಷ ರಾಜನಾಥ್ ಸಿಂಗ್ ಮಾತನಾಡಿ, ನಾವು ಪ್ರಣಾಳಿಕೆ ಸಿದ್ದಗೊಳಿಸುವಾಗ ಈ ಹಿಂದೆ ನೀಡಿರೋ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಅದರಂತೆ ಮುಂದಿನ ಪ್ರಣಾಳಿಕೆಯೂ ಅದೇ ರೀತಿಯಲ್ಲಿರಬೇಕೆಂದು ಪ್ರಣಾಳಿಕೆ ತಯಾರಿಸಿದ್ದೇವೆ. ನಾವು ಏನು ಹೇಳುತ್ತೇವೆ ಅದನ್ನು ಮಾಡುತ್ತೇವೆ. ಇದು ಬಿಜೆಪಿಯ ಅತಿದೊಡ್ಡ ಶಕ್ತಿ. ನಾವು ಈ ಹಿಂದೆ ಹೇಳಿದಂತೆ ರಾಮಮಂದಿರ ನಿರ್ಮಾಣ ಮಾಡಿದ್ದೇವೆ. ಆರ್ಟಿಕಲ್ 370 ರದ್ದು ಮಾಡಿ ತೋರಿಸಿದ್ದೇವೆ. ಗರೀಬ್ ಕಲ್ಯಾಣ್ ಬಗ್ಗೆ ಮಾತನಾಡಿದ್ದೆವು, ಅದರಂತೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ತಂದು ಅನುಷ್ಠಾನ ಮಾಡಿದ್ದೇವೆ. ಸಂಕಲ್ಪಿತ್ ಭಾರತ ಮತ್ತು ಸಶಕ್ತ ಭಾರತ ಮಾಡಿದ್ದೇವೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.

Tap to resize

Latest Videos

ಮೋದಿ ಗ್ಯಾರಂಟಿಯನ್ನ ಈ ಬಾರಿ ನೀಡುತ್ತಿದೇವೆ,  ಮೋದಿ ಗ್ಯಾರಂಟಿ ಎಂದರೆ 24 ಕ್ಯಾರೇಟ್ ಬಂಗಾರದಷ್ಟೆ ಪ್ಯೂರಿಟಿಯಾಗಿರಲಿದೆ. ಈ ಬಾರಿಯ ಮೋದಿ ಗ್ಯಾರಂಟಿಯನ್ನು 2024 ರಿಂದ ಮುಂದಿನ ಐದು ವರ್ಷದಲ್ಲಿ ಅನುಷ್ಟಾನಕ್ಕೆ ತರಲಿದ್ದೇವೆ ಎಂದು ಸಿಂಗ್ ಹೇಳಿದರು. 

ಇನ್ನು ಅಮಿತ್ ಶಾ, ರಾಜನಾಥ್ ಸಿಂಗ್, ನಡ್ಡಾ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿ ಸಂಕಲ್ಪ ಪತ್ರ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ, ದೆಹಲಿಯ ನಿವಾಸಿಯೊಬ್ಬರಿಗೆ ಸಂಕಲ್ಪ ಪತ್ರದ ಮೊದಲ ಪ್ರತಿಯನ್ನು ನೀಡಿದರು. ನಂತರ ಗಾಜಿಯಬಾದ್ ಯುವಕನಿಗೆ, ಹರಿಯಾಣದ ರೈತನಿಗೆ  ಹಾಗೂ ಛತ್ತೀಸ್ಗಢದ ಮಹಿಳೆಗೆ ಪ್ರಣಾಳಿಕೆ ಪತ್ರವನ್ನು ಪ್ರಧಾನಿ ಹಸ್ತಾಂತರಿಸಿದರು.

Watch LIVE: BJP releases Sankalp Patra for Lok Sabha elections 2024. https://t.co/8rxAB1SuU4

— BJP (@BJP4India)

 

click me!