ಬಿಜೆಪಿಯಲ್ಲಿ ಅಸಮಧಾನ ಸ್ಫೋಟ: ಅತೃಪ್ತ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಪಟ್ಟಿ

By Suvarna NewsFirst Published May 29, 2020, 3:37 PM IST
Highlights

ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧವಾಗಿ ಅತೃಪ್ತ ಶಾಸಕರು ಅಸಮಾಧಾನದ ಕಿಡಿ ಹೊತ್ತಿಸಿದ್ದಾರೆ. ಪ್ರತ್ಯೇಕ ಸಭೆಯನ್ನು ನಡೆಸುವ ಮೂಲಕ ಪಕ್ಷದ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಹಾಗಾದ್ರೆ ಸಭೆಯಲ್ಲಿ ಯಾರೆಲ್ಲ ಇದ್ದರು ಎನ್ನುವ ಪಟ್ಟಿ ಇಲ್ಲಿದೆ.
 

ಬೆಂಗಳೂರು(ಮೇ 29): ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್​ನ ಅತೃಪ್ತ ಶಾಸಕರ ಬಂಡಾಯದಿಂದ ಸರ್ಕಾರ ರಚಿಸಿದ್ದ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಲವರು ಬಂಡಾಯದ ಬಾವುಟ ಹಾರಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧವಾಗಿ ಅತೃಪ್ತ ಶಾಸಕರು ಅಸಮಾಧಾನದ ಕಿಡಿ ಹೊತ್ತಿಕೊಂಡಿದ್ದು, ಪ್ರತ್ಯೇಕ ಸಭೆಯನ್ನು ನಡೆಸುವ ಮೂಲಕ ಪಕ್ಷದ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿದ್ದಾರೆ. 

ಬಿಜೆಪಿ ಭಿನ್ನಮತದ ಬಗ್ಗೆ ಯತ್ನಾಳ್ ನೋ ರಿಯಾಕ್ಷನ್!

ಕಲ್ಯಾಣ ಕರ್ನಾಟಕ ಶಾಸಕರ ಸಭೆ
ಹೌದು...ಬೆಂಗಳೂರಿನ ಹೊರವಲಯದಲ್ಲಿ ಉಮೇಶ್ ಕತ್ತಿ ನೇತೃತ್ವದಲ್ಲಿ ಅತೃಪ್ತ ಸಭೆ ನಡೆದಿದೆ. ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದ ಅತೃಪ್ತ ಬಿಜೆಪಿ ಶಾಸಕರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರೇ ಸಭೆಯಲ್ಲಿ ಇದರಲ್ಲಿದ್ದರು.

ಸಭೆಯಲ್ಲಿದ್ದ ಶಾಸಕರು ಪಟ್ಟಿ
* ಉಮೇಶ್ ಕತ್ತಿ
* ವಿಜಯಪುರ ನಗರ ಶಾಸಕ- ಬಸನಗೌಡ ಪಾಟೀಲ್ ಯತ್ನಾಳ್
* ಅರವಿಬಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ
* ಸುರಪುರ ಶಾಸಕ ರಾಜುಗೌಡ ಕಾಗೆ
* ಸಿರಗುಪ್ಪ ಶಾಸಕ ಸೋಮಲಿಂಗಪ್ಪ
* ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು
* ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಮಡು
* ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ
* ಹೊಸದುರ್ಗಾ ಶಾಸಕ ಗೂಳಿಹಟ್ಟಿ ಶೇಖರ್
* ತೇರದಾಳ ಶಾಸಕ ಸಿದ್ದು ಸವದಿ
* ರಾಮದುರ್ಗಾ ಶಾಸಕ ಮಹದೇವಪ್ಪ ಯಾದವಾಡ
* ರಾಯಚೂರು ನಗರ ಕ್ಷೇತ್ರದ ಶಾಸಕ ಶಿವರಾಜ ಪಾಟೀಲ್
* ಸೇಡಂ ಶಾಸಕ ರಾಜಕುಮಾರ್ ಪಾಟೀಲ್
* ಅಳಂದ ಶಾಸಕ ಸುಭಾಷ್ ಗುತ್ತೇದಾರ್
ಇಷ್ಟು ಸೇರಿದಂತೆ ಇನ್ನೂ ಹಲವಾರು ಶಾಸಕರು ಉಮೇಶ್ ಕತ್ತಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಸಭೆ ನಡೆದದ್ದು ನಿಜವಾದರೂ ಇದು ಬಂಡಾಯದ ಬಾವುಟ ಹಾರಿಸುವ ಸಭೆಯಾಗಿರಲಿಲ್ಲ ಎಂದು ಆ ಶಾಸಕರು ಸಬೂಬು ಹೇಳುತ್ತಿದ್ದಾರೆ.

click me!