
ಬೆಂಗಳೂರು (ಮೇ 29): ಕೊರೋನಾ ಕಾರಣಕ್ಕೆ ಕಳೆದ ಎರಡು ತಿಂಗಳಿನಿಂದ ತಣ್ಣಗಾಗಿದ್ದ ಬಿಜೆಪಿ ಪಕ್ಷದೊಳಗಿನ ಭಿನ್ನಮತೀಯರ ರಾಗ ಇದೀಗ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಮತ್ತೆ ಸದ್ದು ಮಾಡಲು ಆರಂಭಿಸಿದೆ.
ಆರಂಭದಿಂದಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಔತಣ ಕೂಟದ ನೆಪದಲ್ಲಿ ಒಂದೆಡೆ ಸಭೆ ಸೇರಿದ್ದು, ಈ ಅತೃಪ್ತರ ಕೂಟದ ಹೊಸ ರಾಜಕೀಯ ಆಟಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬೆಚ್ಚಿ ಬಿದ್ದಿದ್ದಾರೆ.
'ಕತ್ತಿ' ವರಸೆ ವಿರುದ್ಧ ಅಖಾಡಕ್ಕಿಳಿದ ಕೋರೆ; ಸೀಟಿಗಾಗಿ ನಾಯಕರ ಮೊರೆ
ಬಂಡಾಯಗಾರರಿಗೆ ಫೇಸ್ಬುಕ್ ಮೂಲಕ ಎಚ್ಚರಿಕೆ
ಹೌದು...ವೀರಶೈವ - ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದು, ಬಿಎಸ್‌ವೈ ವಿರುದ್ಧ ಬಂಡಾಯ ಸಾರಿರುವ ನಾಯಕರಿಗೆ ಫೇಸ್‌ಬುಕ್ ಮೂಲಕ ಖಡಕ್ ವಾರ್ನಿಂಗ್ ಕೊಟ್ಟಿದೆ.
ವೀರಶೈವ ಲಿಂಗಾಯತ ಸಮಾಜದ ಮೇರು ನಾಯಕ ಶರಣ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಲಿಂಗಾಯತ ಶಾಸಕರು ಬಹಿರಂಗವಾಗಿ ಮಾತನಾಡಿದ್ದು ಕಂಡರೆ ನಾವು ಕೂಡ ನಿಮ್ಮ ಬಂಡವಾಳವನ್ನು ಬಹಿರಂಗವಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಂಡಾಯಗಾರರಿಗೆ ಫೇಸ್ ಬುಕ್ ಮೂಲಕ .ವೀರಶೈವ - ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.