ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪೇ ಸಿಎಂ ಪೋಸ್ಟರ್ ವಿರುದ್ಧವಾಗಿ ಬಿಜೆಪಿ ಸ್ಕ್ಯಾಮ್ ರಾಮಯ್ಯ ಎಂಬ ಹೆಸರಿನಡಿ ಕಾಂಗ್ರೆಸ್ ಅಧಿಕಾರವಧಿಯ ಭ್ರಷ್ಟಾಚಾರ ಹಗರಣದ ಪುಸ್ತಕ ಬಿಡುಗಡೆ ಮಾಡಿದೆ.
ಬೆಂಗಳೂರು (ಸೆ.22): ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜಟಾಪಡಿಗೆ ಕಾರಣವಾಗಿದ್ದು, ಬಿಜೆಪಿಯ 40 % ಕಮಿಶನ್ ವಿಚಾರವಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪೇ ಸಿಎಂ ಪೋಸ್ಟರ್ ವಿರುದ್ಧವಾಗಿ ಬಿಜೆಪಿ ಕೂಡ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳ ಕುರಿತಂತೆ ಪುಸ್ತಕ ಬಿಡುಗಡೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸುದ್ದಿಗೋಷ್ಟಿ ನಡೆಸಿ ಸ್ಕ್ಯಾಮ್ ರಾಮಯ್ಯ ಎಂಬ ಹೆಸರಿನಡಿ ಕಾಂಗ್ರೆಸ್ ಅಧಿಕಾರವಧಿಯ ಭ್ರಷ್ಟಾಚಾರ ಹಗರಣದ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಸುದ್ದಿಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಛಲವಾದಿ ನಾರಯಣಸ್ವಾಮಿ, ಸಿದ್ದರಾಜು, ರಾಜ್ಯ ವಕ್ತಾರ ಎಂ ಜಿ ಮಹೇಶ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಕಟೀಲ್ ದೇಶದ ಹಳೆಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಸುಧೀರ್ಘ ರಾಜಕೀಯದಲ್ಲಿ ದೇಶಕ್ಕೆ ಕಾಂಗ್ರೆಸ್ ಎರಡನ್ನು ಕೊಡುಗೆಯಾಗಿ ಕೊಟ್ಡಿದೆ. ಒಂದು ಭ್ರಷ್ಟಾಚಾರ ಗಂಗೋತ್ರಿ ಎರಡನೆಯದ್ದು ಭಯೋತ್ಪಾದನೆ ಇದರೆಡಕ್ಕೂ ಕಾಂಗ್ರೆಸ್ ಕಾರಣ. 1947 ರಿಂದ 2014 ರವರೆಗೆ ದೇಶವನ್ನು ಆಳಿರುವ ಕಾಂಗ್ರೆಸ್ ಭ್ರಷ್ಟಾಚಾರ ಕೊಡುಗೆಯನ್ನು ನೋಡಿದ್ದೇವೆ. ನೆಹರೂ ಅವರಿಂದ ಮನಮೋಹನ್ ಸಿಂಗ್ ವರೆಗೆ ಎಲ್ಲರೂ ಭ್ರಷ್ಟಾಚಾರದ ಕೊಡುಗೆ ನೀಡಿದ್ದಾರೆ. ಮೊದಲಿಗೆ ಜೀಪ್ ಹಗರಣ, ಭೋಫರ್ಸ್, ಸಿಮೆಂಟ್ ,ಕಾಮನ್‌ವೆಲ್ತ್, 2G ಹಗರಣದವರೆಗೆ ಆಕಾಶ, ಗಾಳಿ, ಮಣ್ಣಿನಲ್ಲೂ ಭ್ರಷ್ಟಾಚಾರ ಮಾಡಿರೋದು ಕಾಂಗ್ರೆಸ್ ಎಂದು ಹೇಳಿದ್ದಾರೆ
ಯುಪಿಎ ಕಾಲದಲ್ಲೂ ಕೂಡ ಸರಣಿ ಹಗರಣಗಳ ಕಾಲಘಟ್ಟವಾಗಿತ್ತು. ಹಗರಣಗಳಲ್ಲಿ ಸಿಲುಕಿ ತನಿಖೆ ಎದುರಿಸುತ್ತಿರುವುದು ಅದೇ ಪಾರ್ಟಿಗೆ ಸೇರಿದವರು. ತನಿಖೆಯಲ್ಲಿ ಬಂದ ಫಲಿತಾಂಶ ಕಾಂಗ್ರೆಸ್ ಅನ್ನು ಮುಜುಗರಕ್ಕೆ ಈಡು ಮಾಡಿದೆ. ಡಿಕೆಶಿ ಇಡಿ ತನಿಖೆ ಕೂಡ ದಾರಿ ತಪ್ಪಿಸಿದೆ.
ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅನೇಕ ಹಗರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಯ್ಯ ಸರ್ಕಾರ ಮಾಡಿದೆ.
ಲೋಕಾಯುಕ್ತಾವನ್ನು ಮುಚ್ಚುವ ಪ್ರಯತ್ನ ಆಗಿದೆ. ಅರ್ಕಾವತಿ ,ಹಾಸಿಗೆ ದಿಂಬು ಹಗರಣ, ಮೊಟ್ಟೆ ಹಗರಣಗಳನ್ನು ಮುಚ್ಚಿ ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.
Pay CM Posters: ಕಾಂಗ್ರೆಸ್, ಬಿಜೆಪಿ ಪೋಸ್ಟರ್ ಫೈಟ್: ಪೇ ಸಿಎಂಗೆ ಕಮಲ ಪಡೆ ಕೌಂಟರ್
ಡ್ರಗ್ ಮತ್ತು ಸ್ಯಾಂಡ್ ಮಾಫಿಯಾ ಎರಡು ಮಾಫಿಯಾಗಳು ಕಾಂಗ್ರೆಸ್ ಸರ್ಕಾರವನ್ನು ನಡೆಸಿದೆ. ನಮ್ಮ ಸರ್ಕಾರ ಅದೆಲ್ಲದನ್ನು ನಿಯಂತ್ರಿಸಿದೆ.
ಸಂಪೂರ್ಣ ತನಿಖೆ ಮಾಡುವ ಕೆಲಸ ನಮ್ಮಿಂದ ಆಗುತ್ತಿದೆ. ಬಂಧನ ಕೂಡ ಆಗಲಿದೆ. ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಕೆಂಪಣ್ಣ ಎಂಬ ಗುತ್ತಿಗೆದಾರರನ್ನು ಇಟ್ಕೊಂಡು ಸಿದ್ದರಾಮಯ್ಯ ರಾಜಕೀಯ ಮಾಡ್ತಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ರೆ ಕೊಡಿ, ನಮ್ಮ ಸರ್ಕಾರ ತನಿಖೆ ಮಾಡುತ್ತದೆ. ಯಾರೇ ಇರಲಿ ತನಿಖೆಯನ್ನು ಮಾಡಿಸುತ್ತದೆ, ಎಷ್ಟೆ ದೊಡ್ಡವರಿದ್ರೂ ಕ್ರಮ ಆಗುತ್ತದೆ. ಪಾರದರ್ಶಕ ಆಡಳಿತವನ್ನು ಸರ್ಕಾರ ಮಾಡುತ್ತದೆ ಎಂದು ಕಟೀಲ್ ಹೇಳಿದ್ದಾರೆ.
PayCM Posters: ಬಿಜೆಪಿಗೆ ಸವಾಲ್ ಹಾಕಿ ಸಿದ್ದರಾಮಯ್ಯ ಸರಣಿ ಟ್ವೀಟ್
Live : ಪತ್ರಿಕಾಗೋಷ್ಠಿ
ಉಪಸ್ಥಿತಿ : ರಾಜ್ಯಾಧ್ಯಕ್ಷರಾದ ಶ್ರೀ , ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ , ಶ್ರೀ ಮತ್ತು ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಎಂ. ಜಿ. ಮಹೇಶ್. https://t.co/s2gv64QxkT
ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯನ್ನು ಟೀಕಿಸಿದ ಕಟೀಲ್: ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆ ನಡೆಯುತ್ತಿದೆ. ದೇಶವನ್ನು ಒಡೆದು ಹಾಕಿರುವ ಪಾಪ ಕಾಂಗ್ರೆಸ್‌ಗಿದೆ. ಭಾರತ್ ಜೋಡೊ ಬದಲು ಕಾಂಗ್ರೆಸ್ ಜೋಡೊ ಮಾಡಬೇಕಿತ್ತು. ಸಿದ್ದರಾಮಯ್ಯ, ಡಿಕೆಶಿಯನ್ನು ಜೋಡೊ ಮಾಡಿಸುವ ಕೆಲಸ ಮಾಡಬೇಕಿತ್ತು. ಡಿಕೆಶಿ, ಹಾಗು ಸಿದ್ದರಾಮಯ್ಯ ನಡುವಿನ ಜಗಳ ಹೊರಗೆ ಬರ್ತಿದೆ. ಡಿಕೆಶಿ, ಡೀಲ್ ಮಾಸ್ಟರ್ ಅಂತಾ ಕಾಂಗ್ರೆಸ್ ವೇದಿಕೆಯಲ್ಲೇ ಮಾತಾಡಿದ್ರು. ಕಾಂಗ್ರೆಸ್ ಇವತ್ತು ತಮ್ಮ ಮುಖ ಉಳಿಸಿಕೊಳ್ಳಲು, ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಇದೇ ವೇಳೆ ಹೇಳಿದ್ದಾರೆ.