ರೇವಣ್ಣ ಜೊತೆ ಹೋಗಿ ಗರ ಬಿಡಿಸಿಕೊಳ್ಳಿ: ಸಿಎಂ ಸಿದ್ದರಾಮಯ್ಯಗೆ ಅಶೋಕ್‌ ಸಲಹೆ

By Kannadaprabha NewsFirst Published Dec 6, 2023, 9:43 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡುವ ಕುರಿತು ಮಂಗಳವಾರ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬರ ಪರಿಹಾರ ಕುರಿತ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ಅಶೋಕ್‌ ಅವರು, ಸಿದ್ದರಾಮಯ್ಯ ಅವರು ತಮ್ಮ ಮೊದಲ ಸರ್ಕಾರದಲ್ಲಿ ಇದ್ದಂತೆ ಇಲ್ಲ.
 

ವಿಧಾನಸಭೆ (ಡಿ.06): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡುವ ಕುರಿತು ಮಂಗಳವಾರ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬರ ಪರಿಹಾರ ಕುರಿತ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ಅಶೋಕ್‌ ಅವರು, ಸಿದ್ದರಾಮಯ್ಯ ಅವರು ತಮ್ಮ ಮೊದಲ ಸರ್ಕಾರದಲ್ಲಿ ಇದ್ದಂತೆ ಇಲ್ಲ. ಗರ ಬಡಿದಂತೆ, ಗಾಳಿ ಹೊಡೆದಂತೆ ಆಗಿದ್ದೀರಿ. ಈ ರೀತಿಯ ಸಿದ್ದರಾಮಯ್ಯ ಅವರನ್ನು ನಾವು ನೋಡಿಲ್ಲ. ಜೆಡಿಎಸ್‌ ನಾಯಕ ರೇವಣ್ಣ ಅವರ ಜೊತೆ ಹೋಗಿ ನಿಮಗೆ ಹಿಡಿದಿರುವ ಗರ ಅಥವಾ ಹೊಡೆದಿರುವ ಗಾಳಿ ದೂರವಾಗಲಿದೆ ಎಂದು ಛೇಡಿಸಿದರು.

ಇದಕ್ಕೆ ರೇವಣ್ಣ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರಿಗೆ ಯಾರೂ ಏನೇ ಮಾಟ, ಮಂತ್ರ ಮಾಡಿದರೂ ಏನೂ ಆಗಲ್ಲ. ಅದು ಮಾಡಿದವರಿಗೇ ವಾಪಸ್‌ ತಟ್ಟುತ್ತದೆ ಎಂದು ಹೇಳಿದರು. ಇದಕ್ಕೆ ಅಶೋಕ್‌, ಇದು ನನ್ನ ಮಾತಲ್ಲ. ಮಾಜಿ ಸಚಿವ ಎಚ್‌.ಆಂಜನೇಯ ಅವರೇ 2025-16ರಲ್ಲಿ ಇದ್ದ ಸಿದ್ದರಾಮಯ್ಯ ಅವರೇ ಬೇರೆ, ಈಗಿನ ಸಿದ್ದರಾಮಯ್ಯ ಅವರೇ ಬೇರೆ ಎಂದು ಹೇಳಿದ್ದಾರೆ. ಅದನ್ನು ನಾನು ಪ್ರಸ್ತಾಪಿಸಿದೆ ಎಂದರು.

Latest Videos

ಬಿಜೆಪಿಯವರಿಗೆ ಏಕೆ ಇಷ್ಟೊಂದು ಗಾಬರಿಯಾಗುತ್ತಿದೆ: ಸಚಿವ ದಿನೇಶ್‌ ಗುಂಡೂರಾವ್ ಪ್ರಶ್ನೆ

ಅಶೋಕ್‌ ನೆರವಿಗೆ ಯತ್ನಾಳ್‌: ಸದನದ ಮೊದಲ ದಿನ ವಿಪಕ್ಷ ನಾಯಕ ಅಶೋಕ್‌ ಅವರನ್ನು ಅಭಿನಂದಿಸಿ ಮಾತನಾಡಲು ನಿರಾಕರಿಸಿದ್ದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಮಂಗಳವಾರ ಅಶೋಕ್‌ ಅವರ ನೆರವಿಗೆ ಬಂದ ಘಟನೆ ಗಮನ ಸೆಳೆಯಿತು. ಅಶೋಕ್ ಅವರು ತಮ್ಮ ಮಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗರ ಬಡಿದಂತಿದ್ದೀರಿ ಎಂದು ಹೇಳಿದ್ದು ಯಾವ ಅರ್ಥದಲ್ಲಿ ಎಂದರೆ, ಮೊದಲಿನ ಸಿದ್ದರಾಮಯ್ಯ ಆಗಿದ್ದರೆ ಬರ ನಿರ್ವಹಣೆ ಸರಿಯಾಗಿ ಆಗುತ್ತಿತ್ತು ಎಂದು. ನೀವು ಯಾವುದಕ್ಕೂ ಅಂಜಬೇಡಿ. ದೇವರಿದ್ದಾನೆ. ಮೊದಲಿನ ಸಿದ್ದರಾಮಯ್ಯ ಆಗಿಯೇ ಇರಿ. 5 ವರ್ಷ ನೀವೇ ಮುಖ್ಯಮಂತ್ರಿ ಯಾಗಿ ಉಳಿಯಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ ಎಂದು ಯತ್ನಾಳ ಹೇಳಿದರು.

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಬರ ಪರಿಹಾರಕ್ಕೆ ಕಾಯದೆ ಸಮೀಕ್ಷೆ ನಡೆಸಿದ ಒಂದೆರಡು ತಿಂಗಳಲ್ಲೇ ರೈತರಿಗೆ ಎನ್‌ಡಿಆರ್‌ಎಫ್‌ ನಿಯಮದ ದರಕ್ಕಿಂತ ದುಪ್ಪಟ್ಟು ಬೆಳೆ ಪರಿಹಾರವನ್ನು ರೈತರಿಗೆ ನೀಡಿದ್ದೆವು. ನಿಮಗೇನು ಸಮಸ್ಯೆ, ತೋರಿಕೆಗಷ್ಟೆ ರೈತರಿಗೆ ತಲಾ 2000 ರು. ತಾತ್ಕಾಲಿಕ ಬೆಳೆ ನಷ್ಟ ಪರಿಹಾರ ಘೋಷಿಸಿರುವುದು ಅವಮಾನಕರ. ಸರ್ಕಾರ ಕೂಡಲೇ ರೈತರ ಬೆಳೆ ನಷ್ಟಕ್ಕೆ ಕೂಡಲೇ ಮೂರು ಪಟ್ಟು ಪರಿಹಾರ ಘೋಷಿಸಬೇಕು...’

ಇದು, ನೂತನ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪರಿ. ಬರ ನಿರ್ವಹಣೆ ಕುರಿತು ತಾವು ಮಂಡಿಸಿದ್ದ ಮೊದಲ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆಯೇ ತಮ್ಮ ರಾಜ್ಯಪ್ರವಾಸದ ವೇಳೆ ಕಂಡುಬಂದ ರೈತರ ಸಂಕಷ್ಟ, ವಿದ್ಯುತ್‌ ಸಮಸ್ಯೆ, ಕುಡಿಯುವ ನೀರು, ಮೇವಿನ ಸಮಸ್ಯೆ ಮತ್ತಿತರ ವಿಚಾರಗಳನ್ನು ಸುಧೀರ್ಘವಾಗಿ ಮಂಡಿಸುತ್ತಾ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ಬಿಜೆಪಿ ಗೆಲುವಿಗೆ ಮೋದಿ ಕೊಟ್ಟ ಹಣವೇ ಕಾರಣ: ಶಾಸಕ ಕೆ.ಎಂ.ಉದಯ್ ಆರೋಪ

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಫೂರ್ಣ ವಿಫಲವಾಗಿದೆ. ಅಧಿವೇಶನ ನಡೆಯುತ್ತಿದೆ ವಿಪಕ್ಷದವರು ಕೇಳುತ್ತಾರೆ ಎನ್ನುವ ಕಾರಣಕ್ಕೆ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ತಾತ್ಕಾಲಿಕವಾಗಿ ತಲಾ 2000 ರು. ಪರಿಹಾರ ಘೋಷಿಸಿದ್ದೀರಿ. ಅದೂ ಕೂಡ ಇನ್ನೂ ಫಲಾನುಭವಿಗೆ ತಲುಪಿಲ್ಲ. ಬರ ನಿರ್ವಹಣೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ. ಆದರೆ, ಸರ್ಕಾರ ಅದನ್ನು ಸಮರ್ಪಕವಾಗಿ ಖರ್ಚು ಮಾಡಲು ಆದೇಶ ನೀಡಿಲ್ಲ. ಅಧಿಕಾರಿಗಳಿಗೂ ಖರ್ಚು ಮಾಡುವ ಮನಸ್ಸಿಲ್ಲ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ನಿರ್ವಹಣೆಗೆ 700 ಕೋಟಿಗೂ ಹೆಚ್ಚು ಹಣವಿದೆ ಅನ್ನುತ್ತಾರೆ. ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕಿಗೆ ಕೇವಲ 25 ಲಕ್ಷ ರು. ಕುಡಿಯುವ ನೀರಿಗೆ ನೀಡಿದ್ದಾರೆ. ಈ ಹಣದಲ್ಲಿ ಯಾವ ರೀತಿ ಬರ ನಿರ್ವಹಣೆ ಮಾಡಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.

click me!