
ಬೆಂಗಳೂರು[ಜ.15] ದೇವೇಗೌಡರಿಗೆ ಕರೆ ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಳವಣಿಗೆಗಳ ವಿವರಣೆ ಪಡೆದುಕೊಂಡಿದ್ದಾರೆ. ‘ವಾಟ್ ಈಸ್ ಹ್ಯಾಪನಿಂಗ್’ ಎಂದು ಗೌಡರನ್ನು ಕೇಳಿದ್ದಾರೆ.
ಇದಕ್ಕೆ ಉತ್ತರ ನೀಡಿದ ಗೌಡರು, ನಾನು ಟೀ ಕುಡಿಯುತ್ತಾ ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವೆ.. ನೆಮ್ಮದಿಯಾಗಿ ಸಂಕ್ರಾಂತಿ ಆಚರಣೆ ಮಾಡ್ತಾ ಇದೀನಿ ಎಂದು ನಸು ನಗುತ್ತಲೇ ಉತ್ತರಿಸಿದ ಉತ್ತರಿಸಿದ್ದಾರೆ.
ಗೌಡರ ಆಟ ಬಲ್ಲವರಾರು?: ಮಗನೊಂದಿಗೆ ಮಾತುಕತೆ ಜೋರು!
ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವೆ ಎಂದು ಉತ್ತರಿಸಿದ ದೇವೇಗೌಡ, ಬಿಜೆಪಿಯ ಯಾವ ತಂತ್ರಗಳು ಸಫಲ ಆಗಲ್ಲ. ಪರಿಸ್ಥಿತಿ ಕೈ ಮೀರದಂತೆ ಎಲ್ಲ ರೀತಿ ಎಚ್ಚರ ವಹಿಸಲಾಗುತ್ತಿದೆ.ನೀವೇನು ಚಿಂತೆ ಮಾಡಬೇಡಿ ಎಂದಿದ್ದಾರೆ. ದೇವೇಗೌಡರಿಗೆ ದೂರವಾಣಿಯಲ್ಲಿ ಅಭಯ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ಪಕ್ಷದ ಮುಖಂಡರು ಎಲ್ಲ ಮಾಹಿತಿ ಪಡೆದುಕೊಂಡಿದ್ದು ಕಾದುನೋಡೋಣ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.