Karnataka Politics| ಭಯದಿಂದಾಗಿ ಬಿಜೆಪಿ ತಾಪಂ, ಜಿಪಂ ಚುನಾವಣೆ ನಡೆಸಿಲ್ಲ: ಪಾಟೀಲ್‌

Kannadaprabha News   | Asianet News
Published : Nov 24, 2021, 01:15 PM IST
Karnataka Politics| ಭಯದಿಂದಾಗಿ ಬಿಜೆಪಿ ತಾಪಂ, ಜಿಪಂ ಚುನಾವಣೆ ನಡೆಸಿಲ್ಲ: ಪಾಟೀಲ್‌

ಸಾರಾಂಶ

*  ಪರಿಷತ್‌ ಚುನಾವಣೆಯಲ್ಲಿ ಕಡಿಮೆ ಆದ ಮತದಾರರು *  ಜಿಪಂ, ತಾಪಂ ಸದಸ್ಯ ಮತದಾರರು ಹೆಚ್ಚಾಗಿದ್ದರೆ ಒಳ್ಳೆಯದು *  ಪಕ್ಷದೊಳಗೆ ಟಿಕೆಟ್‌ಗಾಗಿ ಪೈಪೋಟಿ ಇರೋದು ಸಾಮಾನ್ಯ 

ಧಾರವಾಡ(ನ.24): ಬಿಜೆಪಿ(BJP) ಸೋಲಿನ ಭಯದಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಮುಂದೂಡುತ್ತಿದೆ. ಈ ಕಾರಣಕ್ಕೆ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಮತದಾರರು ಕಡಿಮೆ ಆಗಿದ್ದಾರೆ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ್‌(HK Patil) ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಚುನಾವಣೆಗೆ(Vidhan Parishat Election) ಕಾಂಗ್ರೆಸ್‌(Congress) ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ನಾಮಪತ್ರ(Nomination) ಸಲ್ಲಿಕೆ ವೇಳೆ ಮಾಧ್ಯಮದ ಜತೆ ಮಾತನಾಡಿದರು.
ಜಿಪಂ, ತಾಪಂ ಸದಸ್ಯ ಮತದಾರರು ಹೆಚ್ಚಾಗಿದ್ದರೆ ಒಳ್ಳೆಯದು. ಇರಲೇಬೇಕು ಎಂದೇನಿಲ್ಲ. ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಆದರೆ, ರಾಜ್ಯ ಸರ್ಕಾರ(Government of Karnataka) ಚುನಾವಣಾ ಭಯದಿಂದಾಗಿ ಜಿಪಂ(Zilla Panchayat), ತಾಪಂ ಚುನಾವಣೆಯನ್ನು(Taluk Panchayat) ವಿಳಂಬ ಮಾಡುತ್ತಿದೆ. ಇದು ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ ರಾಜ್‌ ಕಾನೂನಿಗೆ ವ್ಯತಿರಿಕ್ತವಾಗಿ ನಡೆಯುವುದು ಮಾತ್ರವಲ್ಲದೆ, ಸಂವಿಧಾನದ 73, 74ನೇ ತಿದ್ದುಪಡಿ ಮೂಲಕ ತಿಳಿಸಲಾದ ಸದಸ್ಯರ ಅವಧಿ ಮುಗಿಯುವ ಪೂರ್ವದಲ್ಲಿ ಚುನಾವಣೆ ಮಾಡಬೇಕು ಎಂಬ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಈ ವಿಚಾರ ಅತ್ಯಂತ ದುರ್ದೈವದ ಸಂಗತಿಯಾಗಿದೆ. ಇದು ಬಿಜೆಪಿಯವರಿಗೆ ಸ್ಥಳೀಯ ಸಂಸ್ಥೆಗಳ ಕುರಿತು ಇರುವ ಅನಾದರವನ್ನು ತೋರುತ್ತದೆ ಎಂದು ಎಚ್‌.ಕೆ.ಪಾಟೀಲ್‌ ಟೀಕಿಸಿದರು.

MLC Election| ಕಣದಲ್ಲಿ ಇಬ್ಬರಿದ್ದರೆ ಗೊಂದಲ: ಜಗದೀಶ ಶೆಟ್ಟರ್‌

ಎಲ್ಲ ಹಿರಿಯ ನಾಯಕರ ಒಪ್ಪಿಗೆ ಮೇರೆಗೆ ಎಸ್‌.ಆರ್‌.ಪಾಟೀಲ್‌(SR Patil) ಅವರ ಬದಲು ಇನ್ನೊಬ್ಬ ನಾಯಕರಿಗೆ ಟಿಕೆಟ್‌ ನೀಡಲಾಗಿದೆ. ಪಾಟೀಲರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಪಕ್ಷದ ಒಳಗೆ ಟಿಕೆಟಿಗಾಗಿ ಪೈಪೋಟಿ ಸಾಮಾನ್ಯ ವಿಷಯ. ಕೆಲವೆಡೆ ಪ್ರಬುದ್ಧ ನಾಯಕರು ಇಲ್ಲದ ಸಂದರ್ಭದಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಾರೆ. ಅದಕ್ಕೆ ವಿಶೇಷ ಮಹತ್ವ ಇರುವುದಿಲ್ಲ. ಹೀಗಾಗಿ, ಅದರ ಬಗ್ಗೆ ಹೆಚ್ಚಿನ ಮಾತನಾಡಲ್ಲ ಎಂದರು.

ಧಾರವಾಡದಲ್ಲಿ(Dharwad) ಎರಡು ಅಭ್ಯರ್ಥಿ ಬದಲಾಗಿ ಒಬ್ಬರನ್ನೇ ಕಣಕ್ಕಿಳಿಸಿದ ಬಗ್ಗೆ ಮಾತನಾಡಿ, ಕೋಟಾ ವ್ಯವಸ್ಥೆ ಇರುವಾಗ ಒಬ್ಬರನ್ನೇ ಸ್ಪರ್ಧೆಗೆ ಇಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಿಂದಿನಿಂದಲೂ ಒಬ್ಬರನ್ನೇ ನಾವು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತಿದ್ದೇವೆ ಎಂದರು.

ಸಲೀಂ ಹೆಸರಲ್ಲಿ ಸುಮಾರು 7 ಕೋಟಿ ಆಸ್ತಿ

ನಾಮಪತ್ರದಲ್ಲಿ ಸುಮಾರು 6 ಕೋಟಿ ಮೌಲ್ಯದ ಸಂಪನ್ಮೂಲ ಹೊಂದಿದ್ದಾಗಿ ಹೇಳಿಕೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಬಳಿ ಇರುವುದು ಮಾರುತಿ 800 ಕಾರು. ಪಾಲಿಟಿಕಲ್‌ ಸೈನ್ಸ್‌ನಲ್ಲಿ ಎಂಎ ಮಾಡಿರುವ ಸಲೀಂ ಅವರಿಗೆ ಪತ್ನಿ ಆಸ್ಮಾ ಅಹ್ಮದ್‌, ಪುತ್ರಿ ಆರಝೂ, ಪುತ್ರ ಅರ್ಮಾನ್‌ ಇದ್ದಾರೆ.

Karnataka Politics| ಬಿಜೆಪಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ

ಚರಾಸ್ತಿ ವಿವರ

75 ಲಕ್ಷ ಮೌಲ್ಯದ ಚರಾಸ್ತಿಯನ್ನು ಸಲೀಂ ಅಹ್ಮದ್‌ ಹೊಂದಿದ್ದರೆ, ಪತ್ನಿ 83.88 ಲಕ್ಷ ಚರಾಸ್ತಿ ಹೊಂದಿದ್ದಾರೆ. 1.15 ಲಕ್ಷ ನಗದು ಸಲೀಂ ಕೈಯಲ್ಲಿದ್ದರೆ, 55 ಸಾವಿರ ಆಸ್ಮಾ ಬಳಿ ಇದೆ. ಸಲೀಂ ಎಸ್‌ಬಿಐ ಖಾತೆಯಲ್ಲಿ 1.15 ಲಕ್ಷ, ಪತ್ನಿಯ ವಿಜಯ ಬ್ಯಾಂಕ್‌ ಖಾತೆಯಲ್ಲಿ 2362 ಇದೆ. ಇವರು 41.50 ಲಕ್ಷ ಸಾಲ ನೀಡಿದ್ದಾರೆ. ಆಸ್ಮಾ 26 ಲಕ್ಷ ಸಾಲವನ್ನು ಇತರರಿಗೆ ಕೊಟ್ಟಿದ್ದಾರೆ. ಸಲೀಂ ಬಳಿ ಮಾರುತಿ 800 ಕಾರಿದೆ. ಇನ್ನು, 29.55 ಲಕ್ಷ ಚಿನ್ನಾಭರಣ ಸಲೀಂ ಬಳಿ ಇದ್ದರೆ, ಆಸ್ಮಾ ಬಳಿ 56.70 ಲಕ್ಷ ಚಿನ್ನಾಭರಣವಿದೆ. ಪುತ್ರ ಪುತ್ರಿ ಬಳಿ ಯಾವುದೆ ಚರಾಸ್ತಿಯಿಲ್ಲ.

ಸ್ಥಿರಾಸ್ತಿ: 

ಸ್ಥಿರಾಸ್ತಿ ಹೊಂದಿರುವ ಸಲೀಂ ಅಹ್ಮದ್‌ ಹೆಸರಲ್ಲಿ ರಾಮನಗರದಲ್ಲಿ ಕೃಷಿಯೇತರ ಭೂಮಿ, ಬೆಂಗಳೂರಿನ(Bengaluru) ಮಹಾಲಕ್ಷ್ಮೀಪುರಂನಲ್ಲಿ 5 ಕೋಟಿಯ ಮನೆ ಇದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ