ಜೆ.ಪಿ.ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ, ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

By Gowthami K  |  First Published Jan 20, 2023, 1:35 PM IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ ವಿಜಯಪುರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಬಿಜೆಪಿ ಪಕ್ಷದ ಒಂಬತ್ತು ದಿನಗಳ ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.


ವಿಜಯಪುರ (ಜ.20): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ ವಿಜಯಪುರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಬಿಜೆಪಿ ಪಕ್ಷದ ಒಂಬತ್ತು ದಿನಗಳ ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆ ಸೇರಿಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ನಾಳೆ ದೆಹಲಿಯಿಂದ‌ ವಿಶೇಷ ವಿಮಾನದ ಮೂಲಕ ಕಲಬುರಗಿ ಏರ್ ಪೋರ್ಟ್ ಗೆ ಆಗಮಿಸಲಿರುವ ನಡ್ಡಾ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 11-30 ಕ್ಕೆ ಹೆಲಿಕಾಪ್ಟರ್  ವಿಜಯಪುರ ನಗರದ ಸೈನಿಕ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬಳಿಕ 11-40 ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಆಶ್ರಮಕ್ಕೆ ಭೇಟಿ ‌ನೀಡಲಿದ್ದಾರೆ. ಆಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿರುವ ಜೆ.ಪಿ. ನಡ್ಡಾ ನಂತರ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ  ನಗರದ ವಾರ್ಡ್ ನಂಬರ್ 12 ರ  ಬಿಎಲ್ಡಿಇ ಎಂಜೀನಿಯರ್ ಕಾಲೇಜ್ ಬಳಿ ಮೈದಾನದಲ್ಲಿ ಮನೆ ಮನೆ ಭೇಟಿ ಹಾಗೂ ಸದಸ್ಯತ್ವವು ಅಭಿಮಾನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ವಾರ್ಡ್ ನಂಬರ್ 10 ರಲ್ಲಿ ಗೋಡೆ ಬರಹ‌ ಹಾಗೂ ಫಲಾನುಭವಿಗಳ ಮನೆಗೆ ಭೇಟಿ‌ ನೀಡಲಿರುವ ನಡ್ಡಾ ಸಾಂಕೇತಿಕವಾಗಿ ಐದು‌ ಜನ ಫಲಾನುಭವಿಗಳ ಮನೆಗೆ ಭೇಟಿ ನೀಡಿನಂತರ 12-45 ಕ್ಕೆ ಹೆಲಿಕಾಪ್ಟರ್ ಮೂಲಕ ಸಿಂದಗಿಯತ್ತ ಪಯಣ ಬೆಳೆಸಲಿದ್ದಾರೆ.

ಸಿಂದಗಿಯ ವಿಜಯಪುರ ರಸ್ತೆಯಲ್ಲಿ ಅಯೋಜನೆ ಮಾಡಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ , ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಅಶ್ವಥ ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು,
ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಶಾಸಕ ಯತ್ನಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಹಾಲಿ ಹಾಗೂ‌ ಮಾಜಿ ಶಾಸಕರು, ಪದಾಧಿಕಾರಿಗಳು ‌ನಿಗಮ ಮಂಡಳಿ ಅಧ್ಯಕ್ಷರು  ಸಾಥ್‌ ನೀಡಲಿದ್ದಾರೆ. ಸಾರ್ವಜನಿಕ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ನಾಗಠಾಣ ಇಂಡಿ ದೇವರಹಿಪ್ಪರಗಿ ಹಾಗೂ ಸಿಂದಗಿ ನಾಲ್ಕು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಈ ಮೂಲಕ ಮುಂಬರುವ 2023 ರ ಚುನಾವಣೆಗೆ ಈಗಲೇ ಕೇಸರಿ ಪಡೆ  ರಣ‌ಕಹಳೆ ಮೊಳಗಿಸಿದೆ. 

Tap to resize

Latest Videos

ಮೊದಲು ಕಾಂಗ್ರೆಸ್‌ ಗೆಲ್ಲಲಿ, ಆಮೇಲೆ ಫ್ರೀ ವಿದ್ಯುತ್‌ ಕೊಡಲಿ: ಬಿ.ಎಲ್‌.ಸಂತೋಷ್‌

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಒಂಬತ್ತು ದಿನಗಳ ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆಗೆ ಶನಿವಾರ ಕರ್ನಾಟಕದ ವಿಜಯಪುರದಿಂದ ಚುನಾವಣೆಗೆ ಚಾಲನೆ ನೀಡಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಇನ್ನು ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ವಿಜಯಪುರದಿಂದ ಒಂಬತ್ತು ದಿನಗಳ ಜನಸಂಪರ್ಕ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದೆ. ವಿಜಯ ಸಂಕಲ್ಪ ಯಾತ್ರೆ ಜನವರಿ 29 ರವರೆಗೆ ನಡೆಯಲಿದೆ.

ಪಕ್ಷದ ಮೂಲಗಳ ಪ್ರಕಾರ, ಯಾತ್ರೆಯು ಮನೆ ಮನೆಗೆ ಪ್ರಚಾರ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಒಳಗೊಂಡಿರುತ್ತದೆ ಮತ್ತು ಬೂತ್ ಮಟ್ಟದಲ್ಲಿ ಪಕ್ಷದ ನೆಲೆಯನ್ನು ಬಲಪಡಿಸುತ್ತದೆ. ವಿಜಯಪುರದಿಂದ ಆರಂಭವಾಗಲಿರುವ ಮುಂದಿನ ಒಂಬತ್ತು ದಿನಗಳ ಕಾಲ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ಹೊಸ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ.

ರಾಹುಲ್‌ಗಾಂಧಿಯಂತೆ ಮಾತಾಡಬೇಡಿ; ಸಿದ್ದರಾಮಯ್ಯಗೆ ಜೋಶಿ ಟಾಂಗ್‌

ಪ್ರಧಾನಿ ನರೇಂದ್ರ ಮೋದಿ ಅವರು ಯಾದಗಿರಿ ಮತ್ತು ಕಲಬುರಗಿಗೆ ಭೇಟಿ ನೀಡಿದ ಎರಡು ದಿನಗಳ ನಂತರ ನೀರಾವರಿ, ಕುಡಿಯುವ ನೀರು ಮತ್ತು ಹೆದ್ದಾರಿ ಯೋಜನೆಗಳು ಮತ್ತು ಅಲೆಮಾರಿ ಬುಡಕಟ್ಟು ಲಂಬಾಣಿಗರಿಗೆ ಹಕ್ಕು ಪತ್ರ (ಭೂಮಿ ಹಕ್ಕು ಪತ್ರ) ವಿತರಣೆಗೆ ಚಾಲನೆ ನೀಡಿದ ಎರಡು ದಿನಗಳ ನಂತರ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ.

click me!