
ಬೆಂಗಳೂರು, (ಜೂನ್.18): ನಾಯಕತ್ವ ಬದಲಾವಣೆ ಚರ್ಚೆ ವಿಚಾರ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮಹತ್ವ ಕೋರ್ ಕಮಿಟಿ ಸಭೆ ನಡೆಯುತ್ತಿದೆ.
ಇನ್ನು ಕೋರ್ ಕಮಿಟಿ ಸಭೆಗೂ ಮುನ್ನ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯಡಿಯೂರಪ್ಪರನ್ನು ಬದಲಾವಣೆ ಮಾಡಿದ್ರೆ ಪಕ್ಷ ನಾಶ ಆಗುತ್ತದೆ ಎಂಬ ಕೆಲ ಮಠಾಧೀಶರ ಹೇಳಿಕೆಗೆ ಮಾರ್ಮಿಕವಾಗಿ ಉತ್ತರ ನೀಡಿದರು.
ಸಿಎಂ ಬದಲಾವಣೆ ವಿಚಾರ: ವರಿಷ್ಠರಿಗೆ ಒತ್ತಡ ಹಾಕಲ್ಲ ಎಂದ ಜಯಮೃತ್ಯುಂಜಯ ಶ್ರೀ
ನಮ್ಮದು ಸಿದ್ಧಾಂತದ ಪಾರ್ಟಿ, ನಮ್ಮದು ಕಾರ್ಯಕರ್ತರ ಪಾರ್ಟಿ. ಅನೇಕ ಮಠಾಧೀಶರು ನಮ್ಮ ಪಕ್ಷಕ್ಕೆ ಹರಸಿದ್ದಾರೆ ಆ ಬಗ್ಗೆ ಕೃತಜ್ಞತೆ ಇದೆ.ಹೋರಾಟ ಮಾಡಿ ಬೀದಿಯಲ್ಲಿ ನಿಂತು ಬೆವರು ರಕ್ತ ಸುರಿಸಿ ಪಾರ್ಟಿ ಕಟ್ಟಿದ್ದು ಕಾರ್ಯಕರ್ತರು ಎಂದರು.
ನಮ್ಮ ಪಕ್ಷದ ಬೆಳವಣಿಗೆಗೆ ಮಠಾಧೀಶರು ಆಶಿರ್ವದಿಸಿದ್ದಾರೆ. ಎಲ್ಲಾ ಮಠಾಧೀಶರ ಬೆಂಬಲ ಸದಾಕಾಲ ಇರಲಿ. ನಮ್ಮ ಪಕ್ಷಕ್ಕೆ ಜಾತಿಯಿಲ್ಲ. ನಮ್ಮ ಪಕ್ಷಕ್ಕೆ ಇರುವುದು ಸಿದ್ಧಾಂತ ಮಾತ್ರ. ಹೀಗಾಗಿ ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪಕ್ಷ ಹಾಗೂ ರಾಜ್ಯದ ಹಿತದ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು. ಕೊರ್ ಕಮಿಟಿ ಇರುವುದೇ ಒಳಿತು, ಕೆಡುಕುಗಳ ಚರ್ಚೆಗೆ. ಕೋರ್ ಕಮಿಟಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗುತ್ತದಾ ಎಂದು ಮಾಧ್ಯಮದ ಮುಂದೆ ನಾನು ಹೇಳೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.