ನಿತೀಶ್‌ ಕುಮಾರ್‌ ಫಾರಿನ್‌ ಹುಡ್ಗಿ ಥರ, ಯಾರ ಕೈ ಹಿಡೀತಾರೆ, ಯಾರ ಬಿಡ್ತಾರೆ ಅನ್ನೋದು ಗೊತ್ತಾಗಲ್ಲ: ಬಿಜೆಪಿ ಮುಖಂಡ

By Santosh NaikFirst Published Aug 19, 2022, 10:34 AM IST
Highlights

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರನ್ನು ವಿದೇಶದ ಹುಡುಗಿಯರಿಗೆ ಹೋಲಿಕೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ, ವಿದೇಶದ ಹುಡುಗಿಯರು ಬಾಯ್‌ಫ್ರೆಂಡ್‌ ಬದಲಾವಣೆ ಮಾಡುವ ರೀತಿಯಲ್ಲಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಇಲ್ಲಿ ಪಕ್ಷಗಳನ್ನು ಚೇಂಜ್‌ ಮಾಡ್ತಾರೆ ಎಂದು ಹೇಳಿದ್ದಾರೆ.
 

ಇಂದೋರ್‌ (ಆ. 19): ಅಮೆರಿಕಕ್ಕೆ ತೆರಳಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು 25 ದಿನಗಳ ನಂತರ ಇಂದೋರ್‌ಗೆ ವಾಪಸಾಗಿದ್ದಾರೆ. ಭಾರತಕ್ಕೆ ಮರಳಿದ ಬೆನ್ನಲ್ಲಿಯೇ ಅವರು ನೇರವಾಗ ವಿಮಾನ ನಿಲ್ದಾಣದಿಂದ ಪಿತೃ ಪರ್ವತ ತಲುಪಿದರು. ಹನುಮಂತನ ದರ್ಶನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಹಾರ ಸರ್ಕಾರದ ಕುರಿತಾಗಿ ಮಾತನಾಡಿದರು.  ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಆದಾಗ ನಾನು ಅಮೆರಿಕದಲ್ಲಿದ್ದೆ. ಅಲ್ಲಿದ್ದ ನನ್ನ ಪರಿಚಯದವರೊಬ್ಬರು ಇದೆಲ್ಲವನ್ನು ನೋಡಿ ಒಂದು ಮಾತು ಹೇಳಿದ್ದರು, ವಿದೇಶದಲ್ಲಿ ಹುಡುಗಿಯರು ಬಾಯ್‌ಫ್ರೆಂಡ್‌ಗಳನ್ನು ಬದಲಾಯಿಸೋ ರೀತಿಯಲ್ಲಿ ಬಿಹಾರದ ರಾಜಕಾರಣ ನಡೆಯುತ್ತದೆ ಎಂದಿದ್ದರು. "ನಾನು ಅಮೆರಿಕದಲ್ಲಿ ಪ್ರಯಾಣ ಮಾಡುತ್ತಿದ್ದೆ. ಈ ವೇಳೆ ಬಿಹಾರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚಚರ್ಎ ಮಾಡುತ್ತಿದ್ದೆ. ಇದೇ ವೇಳೆ ನನ್ನ ಜೊತೆಯಲ್ಲಿದ್ದ ಅಲ್ಲಿನ ನಿವಾಸಿಯೊಬ್ಬರು. ಇಲ್ಲಿನ ಹುಡುಗಿಯರು ಯಾವ ಟೈಮ್‌ನಲ್ಲಿ ಬೇಕಾದ್ರೂ ಬಾಯ್‌ಫ್ರೆಂಡ್ಸ್‌ಗಳನ್ನ ಚೇಂಜ್‌ ಮಾಡ್ತಾರೆ. ಬಿಹಾರ ಸಿಎಂ ಕೂಡ ಅದೇ ರೀತಿ ಇರಬಹುದು. ಯಾವ ಕ್ಷಣದಲ್ಲಿ ಯಾರ ಕೈ ಹಿಡಿತಾರೆ, ಯಾರ ಕೈ ಬಿಡ್ತಾರೆ ಅನ್ನೋದೇ ಗೊತ್ತಾಗೋದಿಲ್ಲ' ಎಂದು ಹೇಳಿದ್ದಾರೆ.

ಕಮಲ್‌ನಾಥ್‌ ಮಾತಿಗೆ ಬೆಲೆ ಇಲ್ಲ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ ನಾಥ್‌ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎನ್ನುವ  ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ್ದ ಕೈಲಾಶ್‌ ವಿಜಯವರ್ಗೀಯ, ಕಮಲ್‌ ನಾಥ್‌ ಅವರಿಗೆ 75 ವರ್ಷ ದಾಟಿದೆ. ಅವರು ಈಗ ಹೇಳುವ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಹೊರ ದೇಶಗಳಲ್ಲಿ ಹೆಚ್ಚಿನ ಉತ್ಸಾಹವಿದೆ ಎಂದ ಅವರು, ಭಾರತೀಯರಲ್ಲಿ ಕೂಡ ಹೆಚ್ಚಿನ ಉತ್ಸಾಹವಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರು.

"ब्वॉयफ्रेंड कभी भी बदल लेती हैं लड़कियां..."

BJP General Secretary, Kailash Vijayvargiya. pic.twitter.com/u0QKelMfmr

— काश/if Kakvi (@KashifKakvi)


ಸಂಸದೀಯ ಮಂಡಳಿಯಲ್ಲಿ ಶಿವರಾಜ್ ಪದಚ್ಯುತಿ ವಿಚಾರವನ್ನು ರಾಜಕೀಯವನ್ನು ಬಹಳ ವೇಗವಾಗಿ ನೋಡಬಾರದು ಎಂದ ಅವರು, ಪಕ್ಷದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಸತ್ಯನಾರಾಯಣ್ ಜತಿಯ ಅವರನ್ನು ತೆಗೆದುಕೊಂಡಿರುವ ಬಗ್ಗೆ ಮಾತನಾಡಿದ ವಿಜಯವರ್ಗೀಯ, ಅವರು ನನ್ನ ಹಳೆಯ ಸ್ನೇಹಿತ, 1983 ರಲ್ಲಿ ನಾನು ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿದ್ದೆ, ಆಗ ಅವರು ಉಜ್ಜಯಿನಿ ಸಂಸದರಾಗಿದ್ದರು. ಹೊಸಬರಿಗೂ ಅವಕಾಶ ಸಿಗಬೇಕು ಎಂದು ಹೇಳಿದರು.

ಬಿಹಾರ ಸರ್ಕಾರದ ಶೇ.72ರಷ್ಟು ಸಚಿವರ ಮೇಲೆ ಕ್ರಿಮಿನಲ್‌ ಕೇಸ್‌, ಎಡಿಆರ್‌ ವರದಿ!

ಈಗಲೂ ಬಂಗಾಳದ ಉಸ್ತುವಾರಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಉಸ್ತುವಾರಿ ಅಧಿಕಾರವನ್ನು ಮರಳಿ ಪಡೆದುಕೊಳ್ಳುವ ಕುರಿತಾಗಿ ಮಾತನಾಡಿದ ಅವರು, ನನಗೆ ಗೊತ್ತಿಲ್ಲ ಇಂಥ ವಿಚಾರಗಳೆಲ್ಲಾ ಮಧ್ಯಪ್ರದೇಶದವರೆಗೆ ಬಂದು ಹೇಗೆ ತಲುಪುತ್ತದೆ ಎನ್ನುವುದು. ನಾನು ಪಶ್ಚಿಮ ಬಂಗಾಳದ ಬಿಜೆಪಿಯ ಉಸ್ತುವಾರಿ ಆಗಿದ್ದೆ ಹಾಗೂ ಈಗಲೂ ಹಾಗೆಯೇ ಇದ್ದೇನೆ. ನನ್ನನ್ನು ಬಂಗಾಳದ ಬಿಜೆಪಿಯ ಉಸ್ತುವಾರಿ ಸ್ಥಾನದಿಂದ ತೆಗೆದುಹಾಕಿಲ್ಲ ಎಂದಿದ್ದಾರೆ.

Bihar Cabinet: ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲೂ ಪ್ರಸಾದ್‌ ಹಿರಿಯ ಪುತ್ರ ತೇಜ್‌ ಪ್ರತಾಪ್‌!

ಇದು ಸಿಎಂ ಆಗಿ ನಿತೀಶ್‌ ಅವರ ಕೊನೆಯ ಅವಧಿ: ಬಿಜೆಪಿ ಫೈರ್‌ ಬ್ರ್ಯಾಂಡ್‌ ನಾಯಕರಲ್ಲಿ ಒಬ್ಬರಾಗಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಬಗ್ಗೆ ಕಿಡಿಕಾರಿದರು. ಬಿಹಾರದಲ್ಲಿ ಮಹಾಘಟಬಂದನ್‌ ಸರ್ಕಾರ ಮತ್ತೆ ರಚನೆಯಾಗಿರುವ ಬಗ್ಗೆ ಮಾತನಾಡಿದ ಅವರು, ಬಿಹಾರದ ಹೊಸ ಸರ್ಕಾರಕ್ಕೆ ನಾನು ಶುಭಾಶಯಗಳನ್ನು ಕಳಿಸುತ್ತೇನೆ ಎಂದರು. ಅದಲ್ಲದೆ, ಮುಂದಿನ ಚುನಾವಣೆಯಲ್ಲಿ ಅವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗುವ ಸಾಧ್ಯತೆ ಇದೆಯಲ್ಲ ಎನ್ನುವ ಪ್ರಶ್ನೆಗೆ, ಮೊದಲು ಅವರು ಸಿಎಂ ಸ್ಥಾನ ಉಳಿಸಿಕೊಳ್ಳಲಿ. ಇದು ಬಿಹಾರದಲ್ಲಿ ಸಿಎಂ ಆಗಿ ಅವರ ಕೊನೆಯ ಅವಧಿ ಎಂದು ಹೇಳಿದ್ದಾರೆ.
 

click me!