
ರಾಮನಗರ(ಜ.31): ಇವತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರಿಗೆ ಬಲ ಕೊಡುವ ಕೆಲಸವನ್ನ ಮಾಡುತ್ತಿದೆ. ಯಾರಿಗೆ ಬ್ಯಾಂಕ್ ಅಕೌಂಟ್ ಇರಲಿಲ್ಲ ಅವರಿಗೆ ಜನ್ ಧನ್ ಖಾತೆ ಮಾಡಿದೆ. ಕೋವಿಡ್ ಸಂಕಷ್ಟದಲ್ಲಿ 500 ರೂ. ಮೂರು ಬಾರಿ ಹಣ ಹಾಕಿತ್ತು. ನಮ್ಮ ಪಕ್ಕದ ಪಾಕಿಸ್ತಾನ ಗೋದಿ ಹಿಟ್ಟಿಗೆ ದರೋಡೆ ಮಾಡ್ತಿದೆ.ಸಿನಿಮಾ ನಟಿ ರಮ್ಯಾ ಪಾಕಿಸ್ತಾನ ಸ್ವರ್ಗಕ್ಕೆ ಹೋಲಿಕೆ ಮಾಡ್ತಾರೆ. ಮೋದಿ ಸರ್ಕಾರ ಕೊರೋನಾ ಕಾಲದಲ್ಲಿ 88 ಕೋಟಿ ಜನರಿಗೆ ಉಚಿತ ಪಡಿತರ ಕೊಡ್ತು. ರೈತರಿಗೆ ಬಲ ಕೊಡಲು ಕಿಸಾನ್ ಸಮ್ಮಾನ್ ಯೋಜನೆ ಕೊಟ್ರು. ಪ್ರಧಾನಿ ಮೋದಿ ಎಲ್ಲೂ ಕೂಡ ಡಂಗೂರ ಮಾಡಲಿಲ್ಲ, ಆದ್ರೆ ಕೆಲವರು ರೈತರ ಹೆಸರು ಹೇಳಿಕೊಂಡೆ ರಾಜಕೀಯ ಮಾಡಲಿಲ್ಲ ಅಂತ ವಿಪಕ್ಷಗಳ ವಿರುದ್ಧ ಅಂತ BJP National General Secretaryಸಿ.ಟಿ ರವಿ ಹರಿಹಾಯ್ದಿದ್ದಾರೆ.
ಇಂದು(ಮಂಗಳವಾರ) ರಾಮನಗರ ಜಿಲ್ಲೆಯ ಅಚಲು ಗ್ರಾಮದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು, ರಾಮನಗರ, ಮಂಡ್ಯದಲ್ಲಿ ಬಿಜೆಪಿ ಒಂದು ಸೀಟು ಗೆದ್ದಿರಲಿಲ್ಲ, ಈಗ ಒಂದು ಗೆದ್ದಿದೆ. ಆದ್ರೆ ಈ ಭಾಗದಲ್ಲೇ ಅತೀ ಹೆಚ್ಚು ಜನರು ಹೈನುಗಾರಿಕೆ ಮಾಡ್ತಾರೆ. ಆದ್ರೆ ಹಾಲಿನ ಸಬ್ಸಿಡಿ ಹೆಚ್ಚು ಮಾಡಿದ್ದು ಯಡಿಯೂರಪ್ಪ ಸಿಎಂ ಆಗಿದ್ದಾಗ, ಕೋವಿಡ್ ಹಂಚಿದ್ದು ಚೀನಾ ದೇಶ, ನಮ್ಮ ದೇಶದ ಜನಸಂಖ್ಯೆ 150 ಕೋಟಿ. ನಮ್ಮಲ್ಲಿ ಇಂಜೆಕ್ಷನ್ ಕಂಡುಹಿಡಿಯುವ ಮೊದಲು ಅಮೆರಿಕಾದಲ್ಲಿ ಇಂಜೆಕ್ಷನ್‌ಗೆ 7 ಸಾವಿರ ಆಗಿತ್ತು. ಆದ್ರೆ ಈಗ ನಮ್ಮ ದೇಶದಲ್ಲಿ ಎಲ್ಲರೂ ಎರಡು ಇಂಜೆಕ್ಷನ್ ತಗೊಂಡು ಈ ಡೋಸ್ ಲಸಿಕೆ ಪಡೆಯುತ್ತಿದೆ. ಆದ್ರೆ ಇದಕ್ಕೆಲ್ಲಾ ಸಹಕಾರಿಯಾಗಿದ್ದು ಬಿಜೆಪಿ ಸರ್ಕಾರ, ಪ್ರಧಾನಿ ಮೋದಿಯವರು, ನಮ್ಮ ಹಿಂದೂ ಧರ್ಮದಲ್ಲಿ ಉಪಕಾರ ಮಾಡಿದವರಿಗೆ ಅಪಕಾರ ಮಾಡಲ್ಲ ಅಂತ ಹೇಳಿದ್ದಾರೆ.
ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮಗನಿಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ರಾಮನಗರದಲ್ಲಿ ಒಂದು ತ್ಯಾಗದ ನಾಟಕ ನಡೀತಿದೆ. ಈ ತ್ಯಾಗ ರಾಮನಗರದ ಜನರ ಹಿತಕ್ಕಾಗಿ ತ್ಯಾಗವಲ್ಲ ಅಂತ ಹೇಳುವ ಮೂಲಕ ಸಿವಿ ಚಕ್ರವರ್ತಿ ಕಥೆ ಹೇಳಿ ಜೆಡಿಎಸ್‌ಗೆ ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ.
ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟಿದ್ದು ತ್ಯಾಗದ ವಿಚಾರ, ಈಗ ಅಮ್ಮ ಮಗನಿಗಾಗಿ ಬಿಟ್ಟದ್ದು ಬಹುದೊಡ್ಡ ತ್ಯಾಗ. ಇವರ ಮುಂದೆ ಸಿವಿ ಚಕ್ರವರ್ತಿ, ದಲೀಚಿ ತ್ಯಾಗ ಎಲ್ಲರೂ ಕಳೆದುಹೋದ್ರು. ಈಗ ತ್ಯಾಗದ ಪರಮಮೂರ್ತಿಗಳಾಗಿ ಇರೋದು ಕುಮಾರಣ್ಣ, ಅನಿತಾ ಅಕ್ಕ ಅಂತ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.