ಡಿಕೆಶಿ, ಸಿದ್ದುಗೆ ಚೆಂಡುಹೂವು ಚೆಂದ ಕಾಣುತ್ತದೆ: ಸಿ.ಟಿ.ರವಿ

Published : Feb 20, 2023, 06:38 AM IST
ಡಿಕೆಶಿ, ಸಿದ್ದುಗೆ ಚೆಂಡುಹೂವು ಚೆಂದ ಕಾಣುತ್ತದೆ: ಸಿ.ಟಿ.ರವಿ

ಸಾರಾಂಶ

ಬಸವರಾಜ ಬೊಮ್ಮಾಯಿ ಸರ್ವವ್ಯಾಪಿ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ನಿಂದ ಕಾಂಗ್ರೆಸ್ಸಿನವರು ನಿಶಸ್ತ್ರಿಗಳಾಗಿ ಕಿವಿ ಮೇಲೆ ಚೆಂಡು ಹೂವು ಇಟ್ಟು​ಕೊ​ಳ್ಳುವ ಸ್ಥಿತಿಗೆ ಬಂದಿದ್ದಾರೆ. ಅವರು ಜನರಿಗೆ ಚೆಂಡು ಹೂವು ಮುಡಿಸಲು ಪ್ರಯತ್ನಿಸಿದ್ದರು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡದ ಕಾರಣ ಈಗ ಅವರೇ ಚೆಂಡು ಹೂವು ಇಟ್ಟುಕೊಂಡಿದ್ದಾರೆ ಎಂದ ಸಿ.ಟಿ.ರವಿ 

ಕಾರವಾರ(ಫೆ.20): ಮುಂದಿನ ವಿಧಾನಸಭಾ ಚುನಾವಣೆ ಯುದ್ಧದಲ್ಲಿ ಹಲವು ಶಸ್ತ್ರ ಪ್ರಯೋಗ ಮಾಡಲು ಕಾಂಗ್ರೆಸಿಗರು ಸಿದ್ಧರಾಗಿದ್ದರು. ಆದರೆ ಎಲ್ಲ ಶಸ್ತ್ರಗಳನ್ನು ಬಿಜೆಪಿ ತನ್ನ ಬತ್ತಳಿಕೆಯೊಳಗೆ ಸೇರಿಸಿಕೊಂಡು ಬಿಟ್ಟಿವೆ. ಚುನಾವಣೆ ಬಳಿಕ ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ನಿಶಸ್ತ್ರಿಗಳಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಲೇವಡಿ ಮಾಡಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರ ಜತೆ ಮಾತನಾಡಿ, ಬಸವರಾಜ ಬೊಮ್ಮಾಯಿ ಸರ್ವವ್ಯಾಪಿ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ನಿಂದ ಕಾಂಗ್ರೆಸ್ಸಿನವರು ನಿಶಸ್ತ್ರಿಗಳಾಗಿ ಕಿವಿ ಮೇಲೆ ಚೆಂಡು ಹೂವು ಇಟ್ಟು​ಕೊ​ಳ್ಳುವ ಸ್ಥಿತಿಗೆ ಬಂದಿದ್ದಾರೆ. ಅವರು ಜನರಿಗೆ ಚೆಂಡು ಹೂವು ಮುಡಿಸಲು ಪ್ರಯತ್ನಿಸಿದ್ದರು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡದ ಕಾರಣ ಈಗ ಅವರೇ ಚೆಂಡು ಹೂವು ಇಟ್ಟುಕೊಂಡಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಜಿಗಿಜಿಗಿತ: ಪಕ್ಷಾಂತರ ಪರ್ವ ಜೋರು

ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ಚೆಂಡು ಹೂವು ಚಂದ ಕಾಣುತ್ತದೆ. ಕಿವಿಗೆ ಹಾಗೆಯೇ ಇಟ್ಟುಕೊಂಡಿದ್ದರೆ ಇನ್ನಷ್ಟುಚಂದ ಕಾಣಿಸುತ್ತೀರಿ. ಜನರಿಗೆ ಚೆಂಡು ಹೂವು ಮುಡಿಸುತ್ತಿದ್ದ ಕಾಂಗ್ರೆಸ್ಸಿಗರು ಈಗ ಅವರೇ ಮುಡಿದುಕೊಳ್ಳುವಂಥ ವಾತಾವರಣ ಬಿಜೆಪಿ ಮಾಡಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka News Live: ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಮನ, ರಾಜ್ಯದ 17 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್!
Modern Muslim League: ಕಾಂಗ್ರೆಸ್‌ ಆಧುನಿಕ ಮುಸ್ಲಿಂ ಲೀಗ್‌; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ!