ನಿಜಕ್ಕೂ 20 ಲಕ್ಷ ಕೋಟಿ ಇದೆಯಾ? ಮತ್ತ್ಯಾಕೆ ಬಿಜೆಪಿ ಸಂಸದರಿಗೆ ಅಸಮಾಧಾನ!

By Suvarna NewsFirst Published May 22, 2020, 2:42 PM IST
Highlights

ಕೊರೋನಾ ನಿಯಂತ್ರಿಸಲು ಹಾಗೂ ದೇಶದ ಆರ್ಥಿಕ ವ್ಯವಸ್ಥೆಗೆ ವೇಗ ನೀಡಲು ಕೇಂದ್ರದಿಂದ 20 ಲಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್| ಮೋದಿ ಘೋಷಿಸಿದ್ದ ಬಜೆಟ್ ವಿವರಿಸಿದ್ದ ಸಚಿವೆ ನಿರ್ಮಲಾ| ಕೇಂದ್ರ ಸರ್ಕಾರದ ಕೊರೋನಾ ಪ್ಯಾಕೇಜ್ ಬಗ್ಗೆ ಬಿಜೆಪಿ ಸಂಸದರಿಗೇ ಅಸಮಾಧಾನ|

ನವದೆಹಲಿ(ಮೇ.22): ಮೊದಲ ದಿನ 20 ಲಕ್ಷ ಕೋಟಿ ಎಂದು ದನಿ ಎತ್ತರಿಸಿ ಮಾತನಾಡುತ್ತಿದ್ದ ಬಿಜೆಪಿ ಸಂಸದರು ಈಗೀಗ ಕೇಂದ್ರ ಸರ್ಕಾರದ ಕೊರೋನಾ ಪ್ಯಾಕೇಜ್‌ ಬಗ್ಗೆ ಖಾಸಗಿಯಾಗಿ ಅಸಮಾಧಾನ ಹೊರ ಹಾಕುತ್ತಾರೆ.

ಅನೇಕ ಸಂಸದರು ತಮಗೆ ಆಪ್ತರಿರುವ ಪತ್ರಕರ್ತರ ಎದುರು ಸಣ್ಣ ದನಿಯಲ್ಲಿ ಹೇಳಿಕೊಳ್ಳುವ ಪ್ರಕಾರ, ಕನಿಷ್ಠ ಪಕ್ಷ ಒಂದು ಲಕ್ಷ ಕೋಟಿಯನ್ನಾದರೂ ನೇರವಾಗಿ ಜನರಿಗೆ ನೀಡುವ ಬಗ್ಗೆ ಯೋಜನೆ ರೂಪಿಸಬೇಕಿತ್ತು. ಆದರೆ ಬಹಳಷ್ಟು ಸಂಸದರಿಗೆ ಪಕ್ಷದ ವೇದಿಕೆಗಳಲ್ಲಿಯೂ ಗಟ್ಟಿಯಾಗಿ ಹೇಳುವಷ್ಟುದೈರ್ಯ ಇಲ್ಲ. ಇದಕ್ಕೆಲ್ಲ ನಿರ್ಮಲಾ ಸೀತಾರಾಮನ್‌ ಕಾರಣ ಎಂಬುದು ಅವರ ಅಂಬೋಣ.

‘ಜನರಿಂದ ಆರಿಸಿ ಬರುವವರ ಕಷ್ಟ ಯಾರಿಗೆ ಹೇಳೋಣ. ನಿರ್ಮಲಾ, ಪಿಯೂಷ್‌, ಸುರೇಶ್‌ ಪ್ರಭು ಇವರೇನು ಚುನಾವಣೆಗೆ ನಿಲ್ತಾರಾ? ರಾಜ್ಯಸಭೆಗೆ ಬ್ಯಾಕ್‌ ಡೋರ್‌ ಎಂಟ್ರಿ ಮಾಡುವವರು’ ಎಂದು ಬಿಜೆಪಿ ಲೋಕಸಭಾ ಸಂಸದರು ಅಲವತ್ತುಕೊಳ್ಳುತ್ತಾ ಇರುತ್ತಾರೆ. ಅಂದಹಾಗೆ, ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್‌ ಸಂಸದರು ಚಿದಂಬರಂ ನೀತಿ ಬಗ್ಗೆ ಹೀಗೆಯೇ ಹೇಳುತ್ತಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!