ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ, ಇದೆಂಥಾ ಸಭ್ಯತೆ ಸ್ವಾಮಿ...!

By Suvarna NewsFirst Published May 20, 2020, 10:38 PM IST
Highlights

ಕಾನೂನು ಮತ್ತು ಸಂಸದೀಯವ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತೊಂದು ಎಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗಿದ್ದಾರೆ.

ಕೋಲಾರ, (ಮೇ.20): ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧಕ್ಷೆಯನ್ನು ನಿಂದಿಸಿರುವ ಪ್ರಸಂಗ ನಡೆದಿದೆ.

ಇಂದು (ನುಧವಾರ) ಕೋಲಾರದ ಎಸ್. ಅಗ್ರಹಾರ ಕೆರೆ ಬಳಿ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಯುತ್ತಿರುವುದನ್ನು ವೀಕ್ಷಿಸಲು ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ  ಸಚಿವ ಆಗಮಿಸಿದ್ದಾರೆ.

Latest Videos

ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ

ಈ ವೇಳೆ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧಕ್ಷೆ ನಳಿನಿ ಎನ್ನುವರು,  ಕೆರೆ ಒತ್ತುವರಿ ತೆರವಿಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಒತ್ತುವರಿ ಮಾಡಿಕೊಂಡವರಿಗೆ ಪಹಣಿ ನೀಡಲಾಗಿದೆ. ಇದಕ್ಕೆ ಯಾರು ಹೊಣೆ. ಇದನ್ನು ಬಗೆಹರಿಸಿಕೊಡಿ ಎಂದು ಸಚಿವ ಮಾಧುಸ್ವಾಮಿಗೆ ಮನವಿ ಮಾಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಮಾಧುಸ್ವಾಮಿ, ನಾನು ಬಹಳ ಕೆಟ್ಟ ಮನುಷ್ಯ. ಬಾಯಿ ಮುಚ್ಚಿಕೊಂಡು ಇಲ್ಲಿಂದ ಹೋಗು ಅಂತೆಲ್ಲಾ ಅವಾಚ್ಯ ಶಬ್ಧಗಳಿಂದ ರೈತ ಮಹಿಳೆಗೆ ಏರು ಧ್ವನಿಯಿಂದಲೇ ಗದರಿದ್ದಾರೆ.

ಮಾಧುಸ್ವಾಮಿ ವಿರುದ್ಧ ಕುರುಬರ ಕಿಚ್ಚು: CM ಕ್ಷಮೆಯಾಚಿಸಿದ ಬೆನ್ನಲ್ಲೇ ಮಹತ್ವದ ಘೋಷಣೆ

ಬಳಿಕೆ ಹೇಗೆ ಮಾತನಾಡುತ್ತೀರಿ ಎಂದು ನಳಿನ್ ಸಚಿವರಿಗೆ ಕೇಳಿದಾಗ ಮತ್ತಷ್ಟು ಕೆಂಡಾಮಂಡಲರಾದರು. ಇದೇ ವೇಳೆ ಪೊಲೀಸ್ರು ಮಧ್ಯೆ ಪ್ರವೇಶಿಸಿದರು.

ಇದೀಗ ಮಾಧುಸ್ವಾಮಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದು, ಅಹವಾಲು ಸಲ್ಲಿಸಲು ಬಂದ ರೈತ ಮಹಿಳೆಯನ್ನು ಈ ರೀತಿಯಾಗಿ ನಿಂದಿಸಿದ್ದು ಸರಿಯೇ? ಎಂದು ಆಕ್ರೋಶಗೊಂಡಿದ್ದಾರೆ.

ಸಿದ್ದರಾಮಯ್ಯ ಅಕ್ರೋಶ
ರೈತ ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಸಚಿವ ಮಾಧುಸ್ವಾಮಿಯನ್ನು ಸಂಪುಟಿಂದ ಕೈಬಿಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಹವಾಲು ಸಲ್ಲಿಸಲು ರೈತ ಮಹಿಳೆ ಬಂದಿದ್ದಾರೆ. ಅನ್ಯಾಯಕ್ಕೊಳಗಾದ ಮಹಿಳೆಯನ್ನ ನಿಂದಿಸಿರುವುದು ಸರಿಯಲ್ಲ. ಮಾಧುಸ್ವಾಮಿ ದುರ್ವರ್ತನೆ ಅಕ್ಷಮ್ಯವಾದದು, ಸಚಿವ ಸಂಪುಟದಿಂದ ಕೈಬಿಡಬೇಕು. ಜೊತೆಗೆ ಮಾಧುಸ್ವಾಮಿ ಮಹಿಳೆಯ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಇದೇ ಮಾಧುಸ್ವಾಮಿ ಹೊಸದುರ್ಗದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮೇಲೆ ರೇಗಾಡಿ ಟೀಕೆಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

click me!