
ಮೈಸೂರು, (ನ.25): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯೊಬ್ಬರು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಅದ್ದೂರಿ ವಿವಾಹ ಆಯೋಜಿಸಿದ್ದು, ಇಂತಹ ವೈಭವದ ಮದುವೆಯ ಅಗತ್ಯ ಇರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರಿಗೆ ಮಾತನಾಡಿದ ಅವರು, ಸರ್ಕಾರವೇ ಕಟ್ಟುಪಾಡುಗಳನ್ನು ಮಾಡಿ, ಸರ್ಕಾರದಲ್ಲಿರುವವರೇ ಅವುಗಳನ್ನು ಮುರಿಯುವುದು ಸರಿಯಲ್ಲ ಎಂದು ಸಿಎಂಗೆ ಕೋರೋನಾ ವೈರಸ್ ರೂಲ್ಸ್ ಬಗ್ಗೆ ಪಾಠ ಮಡಿದರು.
ನಾವು 105 ಶಾಸಕರು ಗೆದ್ದಿದ್ದರಿಂದ ಬಿಜೆಪಿ ಸರ್ಕಾರ ಬಂದಿದ್ದು: ವಲಸಿಗರಿಗೆ ಶಾಸಕ ಟಾಂಗ್
ನಾನು ನನ್ನ ಎಲ್ಲ ಮಕ್ಕಳ ಮದುವೆಗಳನ್ನು ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದ್ದೇನೆ. ಯಡಿಯೂರಪ್ಪ ಅವರಿಗೂ ಮದುವೆ ಆಯೋಜಕರಿಗೂ ಇದು ಅರ್ಥವಾಗಿರಬೇಕು ಎಂದು ಹೇಳಿದರು.
ಕೋವಿಡ್ ಬಗ್ಗೆ ಮಾಸ್ಕ್, ಸಾಮಾಜಿ ಅಂತರ ಕಾಪಾಡಿಕೊಳ್ಳಿ ಅಂತ ಜಾಗೃತಿ ಮಾತುಗಳನ್ನಾಡುವ ರಾಜಕೀಯ ನಾಯಕರೇ ಮದುವೆ, ಚುನಾವಣೆಗಳಲ್ಲಿ ಅದ್ಯಾವುದನ್ನೂ ಪಾಲಿಸದೇ ರಾಜಾರೋಷವಾಗಿ ಓಡಾಡುತ್ತಾರೆ.
ಅದರಲ್ಲೂ ಸಾಮಾನ್ಯ ಜನರು ಹೀಗೆ ಮಾಡಿದ್ರೆ ಸಾಕು ಅವರ ಮೇಲೆ ಕೇಸ್ ಅದು ಇದು ಅಂತ ಹಾಕ್ತಾರೆ. ಆದ್ರೆ, ನಿಯಮ ರೂಪಿಸುವವರೇ ರೂಲ್ಸ್ ಬ್ರೇಕ್ ಮಾಡುವವರಿಗೆ ಮೂಗುದಾಣ ಹಾಕುವರು ಯಾರು ಎನ್ನುವುದ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.