
ಬೆಂಗಳೂರು, (ಜುಲೈ.03): ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಕೊಲೆ ಖಂಡಿಸಿ ಕರ್ನಾಟಕ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರತಿಭಟನೆ ನಡೆಸಿತು.
ನಿನ್ನೆ(ಶನಿವಾರ) ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆದಿದ್ದು,ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸೈಯದ್ ಸಲಾಂ , ಮುಸ್ಲಿಂ ಮಂಚ್ ಅಧ್ಯಕ್ಷ ಸೈಯದ್ ಇಲಿಯಾಸ್ ಸೇರಿದಂತೆ ಬಿಜೆಪಿ ಮುಖಂಡ ಜಗದೀಶ್ ಹಿರೇಮನಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಲಿ ಪರಿಷತ್ ಸದಸ್ಯರು ಆಗಿರುವ ರವಿಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕನ್ಹಯ್ಯ ಲಾಲ್ ಹತ್ಯೆಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಗ್ರವಾಗಿ ಖಂಡಿಸಿತು. ಈ ವೇಳೆ ಮಾತನಾಡಿದ ಮುಸ್ಲಿಂ ಮಂಚ್ ಅಧ್ಯಕ್ಷ ಸೈಯದ್ ಇಲಿಯಾಸ್ ಎಲ್ಲಾ ಮುಸ್ಲಿಂರು ಆತಂಕವಾದಿಗಳಲ್ಲ. ಆದ್ರೆ ಆತಂಕವಾದಿಗಳಾಗಿರುವ ಎಲ್ಲರೂ ಮುಸ್ಲಿಂ ಆಗಿದ್ದಾರೆ ಎಂದು ಹೇಳಿದ್ರು.
Udaipur Murder Live Updates: ರಾಜ್ಯದ ಹಲವೆಡೆ ಪ್ರತಿಭಟನೆ, ಕೃತ್ಯಕ್ಕೆ ವ್ಯಾಪಕ ಖಂಡನೆ
ಕನ್ಹಯ್ಯ ಕೊಲೆಯನ್ನು ಎಲ್ಲಾ ಮುಸ್ಲಿಂರು ಖಂಡಿಸಬೇಕು ಮತ್ತು ಕೊಲೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ರು. ಬಳಿಕ ಸುದೀರ್ಘ ಭಾಷಣ ಮಾಡಿದ ರವಿಕುಮಾರ್ ಮುಸ್ಲಿಂರಿಂದ ಕಾಂಗ್ರೆಸ್ ಗೆ ಲಾಭವಾಗಿದೆ. ಆದ್ರೆ ಕಾಂಗ್ರೆಸ್ ನಿಂದ ಮುಸ್ಲಿಂರಿಗೆ ಯಾವುದೇ ಅನುಕೂಲ ಆಗಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮನ್ನು ಏಣಿ ತರ ಬಳಕೆ ಮಾಡಿಕೊಂಡು ಬಳಿಕ ಬಿಸಾಡುತ್ತಿದೆ ಎಂದು ಆರೋಪ ಮಾಡಿದ್ರು.
ಇನ್ನಾದ್ರೂ ಮುಸ್ಲಿಂ ಸಮುದಾಯದ ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ ನಿಂದ ದೂರಾಗಿ, ಬಿಜೆಪಿ ಜೊತೆ ಕೈಜೋಡಿಸಲು ಕರೆ ನೀಡಿದ್ರು. ಕನ್ಹಯ್ಯ ಲಾಲ್ ಕೊಲೆಯನ್ನು ಕಾಂಗ್ರೆಸ್ ನ ಅಲ್ಪಸಂಖ್ಯಾತ ಮೋರ್ಚಾ ಖಂಡಿಸಿಲ್ಲ. ಪ್ರತಿಭಟನೆಯನ್ನೂ ಮಾಡಿಲ್ಲ. ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡುವಂತೆ ಆಗ್ರಹಿಸಿದ್ರು. ತಮ್ಮ ಭಾಷಣದ ಕೊನೆಯಲ್ಲಿ ಮುಸ್ಲಿಂರಲ್ಲಿ ಒಗ್ಗಟ್ಟಿದೆ. ಮುಸ್ಲಿಂರು (ಕುಡಿತ) ಮದ್ಯಪಾನವನ್ನು ವಿರೋಧ ಮಾಡ್ತಾರೆ. ಆದ್ರೆ ಹಿಂದು ಸಮಾಜಕ್ಕೆ ಕುಡಿತ ಕಳಂಕವಾಗಿದೆ. ಹಿಂದುಗಳು ಕುಡಿದು ಹಾಳಾಗುತ್ತಿದ್ದಾರೆ ಎಂದು ಹೇಳಿದ್ರು.
ತಮ್ಮ ಭಾಷಣದಲ್ಲಿ ರವಿಕುಮಾರ್ ಈ ವಿಚಾರವನ್ನು ಯಾಕೆ ಪ್ರಸ್ತಾಪ ಮಾಡಿದ್ರು ಎಂದು ಅರ್ಥವಾಗಿಲ್ಲ. ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಿಂದುಗಳು ಕುಡಿದು ಹಾಳಾಗ್ತಾ ಇದ್ದಾರೆ ಎನ್ನುವ ಮಾತನ್ನು ಯಾಕೆ ಪ್ರಸ್ತಾಪ ಮಾಡಿದ್ರು ಎನ್ನೋದನ್ನ ರವಿಕುಮಾರ್ ಅವರೇ ಸ್ಪಷ್ಟಪಡಿಸಬೇಕಿದೆ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.