ಹೂವಿನಹಡಗಲಿ (ಜು.3): ವಿಜಯನಗರ ಜಿಲ್ಲೆಯ ಅನ್ಯ ಪಕ್ಷಗಳ ಶಾಸಕರಿಗೆ ಇದೇ ಕೊನೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಪಕ್ಷದ ವಿಜಯ ಕಹಳೆ ಇಲ್ಲಿಂದಲೇ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಇಲ್ಲಿನ ಶಿವಶಾಂತವೀರ ಸಮುದಾಯ ಭವನದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
undefined
ಹೂವಿನ ಹಡಗಲಿಯಲ್ಲಿ ಪಕ್ಷದ ವತಿಯಿಂದ ಇಂದು ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶವನ್ನು ಉದ್ಘಾಟಿಸಲಾಯಿತು. pic.twitter.com/VEJP10Zd5v
— Anand Singh (@AnandSinghBS)2023ರ ಚುನಾವಣೆ ಬಳಿಕ ಸಂಪೂರ್ಣ ಜಿಲ್ಲೆ ಬಿಜೆಪಿಮಯವಾಗಲಿದೆ. ಇನ್ಮುಂದೆ ಕಾಂಗ್ರೆಸ್ಸಿನ ಯಾವುದೇ ಕುತಂತ್ರ ನಡೆಯಲು ಬಿಡಲ್ಲ. ಆ ಪಕ್ಷದ ಶಾಸಕರು ತಮ್ಮೂರಿಗೆ ಗಂಟುಮೂಟೆ ಕಟ್ಟಿಕೊಂಡು ಹೋಗಲು ಸಿದ್ಧರಾಗಬೇಕಿದೆ ಎಂದು ಎಚ್ಚರಿಕೆ ನೀಡಿದರು.
ಅಪ್ಪ ಭೀಷ್ಮನಿದ್ದಂತೆ, ಬಯಸಿದಾಗ ಸಾವು ಬರುತ್ತದೆ: ಎಚ್‌ಡಿಕೆ
ಭಾರತೀಯ ಜನತಾ ಪಕ್ಷ ಹಿಂದುತ್ವ ಹಾಗೂ ದೇಶ ಉಳಿಸಲು ಜನ್ಮ ತಾಳಿದ್ದು, ಯಾವುದೇ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿಯಬೇಕೆಂಬ ಉದ್ದೇಶವಿಲ್ಲ. ಮುಂಬರುವ 2023ರ ಚುನಾವಣೆಯ ಧರ್ಮಯುದ್ಧದಲ್ಲಿ ಹಿಂದುತ್ವಕ್ಕೆ ಜಯ ಸಿಗಲಿಗೆ ಎಂದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೇವಲ ಇಬ್ಬರು ಶಾಸಕರಿಂದ ಆರಂಭವಾಗಿರುವ ಬಿಜೆಪಿ ಇಂದು ದೇಶದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರ ಸಂಘಟನೆಯ ಶಕ್ತಿಯಿಂದ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದರು.
ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಆಡಳಿತ ನಡೆಸುವ ಕಾಲ ಹೋಗಿದೆ. ಈ ಧರ್ಮಯುದ್ಧದಲ್ಲಿ ಹಿಂದುತ್ವಕ್ಕೆ ಜಯ ಸಿಗಬೇಕಿದೆ. ಜತೆಗೆ ಈ ಪಕ್ಷದ ನೀತಿ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷ ಸೇರಲು ಬೇರೆ ಪಕ್ಷದ ನಾಯಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.
ನಾನು ಚಾಣುಕ್ಯ ಅಲ್ಲ, ಆದರೆ ಅವರ ಕಥೆಗಳನ್ನು ಓದಿ, ಅವುಗಳನ್ನು ಪ್ರಯೋಗ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದೇನೆ. ಆ ಕಾರಣಕ್ಕಾಗಿಯೇ ವಿಜಯನಗರ ಜಿಲ್ಲೆ ರಚನೆಯಾಗಿದೆ. ಸಚಿವಗಿರಿ ಕೇವಲ 5 ವರ್ಷಕ್ಕೆ ಮಾತ್ರ ಸೀಮಿತ. ಆದರೆ, ನನ್ನ ಕೆಲಸ ಇತಿಹಾಸ ಪುಟದಲ್ಲಿ ಸೇರಬೇಕೆಂಬ ಕಾರಣಕ್ಕಾಗಿ ಹಟ ಹಿಡಿದು ನನ್ನ ಕೆಲಸ ಮಾಡಿಸಿಕೊಂಡಿದ್ದೇವೆ. ಇಂದಿನ ರಾಜಕಾರಣಿಗಳಲ್ಲಿ ಆ ಹಟ, ಛಲ ಇರಬೇಕೆಂದು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 70 ದಾಟಲ್ಲ, ಚಾಲೆಂಜ್: ಎಚ್‌ಡಿಕೆ
ಸೊರಬ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ನಾಯಕತ್ವ ಕೊರತೆಯಿಂದ ಸಾಕಷ್ಟುನಾಯಕರು ಪಕ್ಷ ಬಿಟ್ಟು ಹೊರಗೆ ಬಂದು ಬಿಜೆಪಿ ಸೇರಿದ್ದಾರೆ. ಈಗ ಬಿಜೆಪಿ ದೇಶದಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದೆ. ರಾಜಕೀಯ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಲು ಮನೆತನದ ಹೆಸರು, ಗೌರವ ಬೇಕಾಗಿಲ್ಲ. ಆದರೆ, ಕೊನೆ ಭಾಗದ ಜನರ ಅಭಿವೃದ್ಧಿಗಾಗಿ ಹೋರಾಟ ಮಾಡಿದಾಗ ಮಾತ್ರ ಜನರ ಮನ ಗೆದ್ದು ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಸಚಿವ ಭೈರತಿ ಬಸವರಾಜ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿದೆ. ಆ ಕಾರಣಕ್ಕಾಗಿ ರಷ್ಯಾ-ಯುಕ್ರೇನ್ ಯುದ್ಧ ನಿಲ್ಲಿಸಲು ನರೇಂದ್ರ ಮೋದಿ ಅವರನ್ನು ಕೋರಿದ್ದರು. ಅಂತಹ ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೌರ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸಿ, ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮೈಲಾರದ ಕಾಗಿನೆಲೆ ಪೀಠದ ವಸತಿ ಶಾಲೆಗೆ .10 ಕೋಟಿ ಅನುದಾನ ನೀಡಿದ್ದಾರೆ, ಪುರಸಭೆಯ ಹೆಸರಿನಲ್ಲಿದ್ದ ಹಡಗಲಿ ಕನಕ ಸಮುದಾಯ ಭವನದ ನಿವೇಶನವನ್ನು ಮರಳಿ ಕುರುಬ ಸಮಾಜದ ಹೆಸರಿಗೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೇ.ಲ. ನರೇಂದ್ರ ಬಾಬು ಮಾತನಾಡಿ, ಮುಂಬರುವ 2023ರ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಯವಾಗಲಿದೆ. ಶ್ರಮ ಸಮಾಜವನ್ನು ಸಂಘಟನೆ ಮಾಡಬೇಕಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಕಾಂಗ್ರೆಸ್ ಅವಧಿಯಲ್ಲಿ ಕಿವಿ, ಕಣ್ಣು ಎರಡೂ ಇರಲಿಲ್ಲ, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ಮಾನ್ಯತೆ ನೀಡಿ ಆಯೋಗಕ್ಕೆ ಹೆಚ್ಚು ಶಕ್ತಿ ತುಂಬಿದ್ದಾರೆ. ಬಿಜೆಪಿಯಲ್ಲಿ ಅಧಿಕಾರ, ಪ್ರೀತಿಯನ್ನು ಹಂಚಿ ಉಣ್ಣುವ ಸಂಸ್ಕೃತಿ ಇದೆ. ಬೇರೆ ಪಕ್ಷದಂತೆ ಒಬ್ಬರ ಕೈಯಲ್ಲಿ ಪಕ್ಷ ಇಲ್ಲ, ಇದು ಪಕ್ಷಕ್ಕೆ ಜನರ ಪಕ್ಷವಾಗಿದೆ ಎಂದರು.
ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಈಟಿ ಲಿಂಗರಾಜ, ಮಾಜಿ ಶಾಸಕರಾದ ಬಿ. ಚಂದ್ರನಾಯ್ಕ, ನೇಮಿರಾಜ ನಾಯ್ಕ, ಎಚ್. ಪೂಜೆಪ್ಪ, ಅಶ್ವಥ ನಾಯಾರಣ, ವಿವೇಕಾನಂದ ಡಬ್ಬಿ, ಚಂದ್ರಶೇಖರ ಪಾಟೀಲ್, ಉಮೇಶ ಸರ್ಜನ್, ಓದೋ ಗಂಗಪ್ಪ, ಎಸ್. ಸಂಜೀವರೆಡ್ಡಿ, ಅಯ್ಯಾಳಿ ತಿಮ್ಮಪ್ಪ, ವಿಜಯಕುಮಾರ, ಎಂ.ಬಿ. ಬಸವರಾಜ, ಸಿರಾಜ್ ಬಾವಿಹಳ್ಳಿ, ಸುವರ್ಣಮ್ಮ, ದೀನಾ ಮಂಜುನಾಥ, ಭಾಗ್ಯಮ್ಮ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ಪಟ್ಟಣದ ತೇರು ಹನುಮಪ್ಪ ದೇವಸ್ಥಾನದಿಂದ ಶಿವಶಾಂತವೀರ ಸಮುದಾಯ ಭವನದ ವರೆಗೂ ಮೆರವಣಿಗೆ ಆಯೋಜಿಸಲಾಗಿತ್ತು.