ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಪರ: ಪಿ.ಎಚ್. ಪೂಜಾರ್

By Kannadaprabha NewsFirst Published Dec 19, 2023, 7:45 PM IST
Highlights

ಮನೆ ಮನೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರೈತರಿಗೆ ವಿವಿಧ ಸೌಲಭ್ಯಗಳು, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಹೀಗೆ ಹತ್ತು ಹಲವು ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮೋದಿಯವರು ದೇಶದ ಸಮಗ್ರ ಬದಲಾವಣೆಯ ಹರಿಕಾರರು ಎಂದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್ 

ಬಾಗಲಕೋಟೆ(ಡಿ.19):  ದೇಶದ ಎಲ್ಲ ಜನರ ಅಭಿವೃದ್ಧಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಜನಪರವಾದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರ ಪರ ಇದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ಹೇಳಿದ್ದಾರೆ.

ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಮನೆ ಮನೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರೈತರಿಗೆ ವಿವಿಧ ಸೌಲಭ್ಯಗಳು, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಹೀಗೆ ಹತ್ತು ಹಲವು ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮೋದಿಯವರು ದೇಶದ ಸಮಗ್ರ ಬದಲಾವಣೆಯ ಹರಿಕಾರರು ಎಂದರು. 

Latest Videos

ಉತ್ತರ ಕರ್ನಾಟಕ ಬಗ್ಗೆ ಚರ್ಚಿಸೋಕೆ ಬಿಜೆಪಿ-ಜೆಡಿಎಸ್‌ ಆಸಕ್ತಿ ಇಲ್ಲ: ಸಚಿವ ಚಲುವರಾಯಸ್ವಾಮಿ

ದೇಶದಲ್ಲಿ ಇಲ್ಲಿಯವರೆಗೆ 13.5 ಕೋಟಿ ನಲ್ಲಿಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 11 ಕೋಟಿಗೂ ಹೆಚ್ಚು ರೈತರಿಗೆ ₹ 2.6 ಲಕ್ಷ ಕೋಟಿ ಸಹಾಯ ನೀಡಲಾಗಿದೆ. ನಾಲ್ಕು ಕೋಟಿ ಪಕ್ಕಾ ಮನೆಗಳ ನಿರ್ಮಾಣ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ 10 ಕೋಟಿ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಕೇಂದ್ರ ಸರ್ಕಾರವು ಬಡವರಿಗೂ ಉಚಿತ ಚಿಕಿತ್ಸೆ ನೀಡುತ್ತಿದೆ. ಆಹಾರ ಭದ್ರತೆ ಖಾತ್ರಿ ಯೋಜನೆಯಡಿ ಪ್ರತಿ ತಿಂಗಳು 80 ಕೋಟಿ ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗುತ್ತಿದೆ ಎಂದು ವಿವರಣೆ ನೀಡಿದರು. ಬಾಗಲಕೋಟೆ ಜಿಲ್ಲಾ ಲೀಡ್ ಬ್ಯಾಂಕ ಮ್ಯಾನೆಜರ ಮಧಸೋದನ ಸರ್ ಕೇಂದ್ರ ಸರ್ಕಾರದ ವಿವಿಧ ಯೋಜನೆಯಗಳ ಬಗ್ಗೆ ತಿಳಿಸಿದರು.

ಕೆನರಾ ಬ್ಯಾಂಕಿನ ಮೋಗನೂರು ಶಾಖೆ ಮ್ಯಾನೆಜರ್‌ ಮಹಾಂತೇಶ್ ಪಾಟೀಲ, ಚಂದ್ರಶೇಖರ ಭಾಪ್ರಿ, ಹಿರೇಮಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ನೀಲಮ್ಮ ಹುಲ್ಲಿಕೇರಿ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ್ ಛಲವಾದಿ, ಮಹಾಂತೇಶ್ ಹುಲ್ಲಿಕೇರಿ, ಅಭಿವೃದ್ಧಿ ಅಧಿಕಾರಿ ಶಕುಂತಲಾ ಮೇಟಿ, ಮಾಜಿ ಅಧ್ಯಕ್ಷ ಶಿವಲಿಂಗಪ್ಪ ನಾಲವತವಾಡ. ಮುಖಂಡ ಹನಮಂತ ವಟ್ಗೂಡೆ ಯಲ್ಲಪ್ಪ ವಡ್ಡರ, ಪ್ರಕಾಶ ಗುಳೇದಗುಡ್ಡ, ಡಾ. ಕೃಷ್ಣಾ ಚೌಧರಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಇದ್ದರು.

ಮನೆಮನೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರೈತರಿಗೆ ವಿವಿಧ ಸೌಲಭ್ಯಗಳು, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಹೀಗೆ ಹತ್ತು ಹಲವು ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಮೋದಿಯವರು ದೇಶದ ಸಮಗ್ರ ಬದಲಾವಣೆಯ ಹರಿಕಾರರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ತಿಳಿಸಿದ್ದಾರೆ.  

click me!