ರೈತರನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ: ಕಾಂಗ್ರೆಸ್ ವಿರುದ್ಧ ರವಿಕುಮಾರ್ ವಾಗ್ದಾಳಿ

By Kannadaprabha News  |  First Published Sep 18, 2023, 12:30 AM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಸ್ಥಗಿತವಾಗಿದೆ, ಕಾವೇರಿ ನೀರಿನ ವಿಚಾರದಲ್ಲಿ ರೈತರನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ, ಕುಡಿಯುವ ನೀರಿನ ಆಭಾವ ಇದ್ದರೂ ನೀರು ಬಿಡಲಾಗುತ್ತಿದೆ ಎಂದು ಎಂಎಲ್‌ಸಿ ರವಿಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 


ಕೋಲಾರ (ಸೆ.18): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಸ್ಥಗಿತವಾಗಿದೆ, ಕಾವೇರಿ ನೀರಿನ ವಿಚಾರದಲ್ಲಿ ರೈತರನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ, ಕುಡಿಯುವ ನೀರಿನ ಆಭಾವ ಇದ್ದರೂ ನೀರು ಬಿಡಲಾಗುತ್ತಿದೆ ಎಂದು ಎಂಎಲ್‌ಸಿ ರವಿಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಳಬಾಗಿಲಿ ಕುರುಡುಮಲೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ನಾಯಕರ ರಾಜ್ಯ ಪ್ರವಾಸ: ಬಿಜೆಪಿ ನಾಯಕರು ಮುಳಬಾಗಲಿನ ಕುರುಡುಮಲೆ ದೇವಸ್ಥಾನದಿಂದ ರಾಜ್ಯ ಪ್ರವಾಸ ಆರಂಭ ಮಾಡಲಿದ್ದಾರೆ. ಕಾವೇರಿ ನೀರಿನ ವಿಚಾರ, ಬರ ಸೇರಿದಂತೆ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಪ್ರವಾಸ ಮಾಡಲಿದ್ದೇವೆ ಎಂದು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಯ ಸಿಕ್ಕಿ ಮತ್ತೆ ಮೋದಿ ಪ್ರಧಾನಿ ಆಗಲಿದ್ದಾರೆ, ಕುರುಡುಮಲೆ ಗಣೇಶ ಪೂಜೆ ಬಳಿಕ ಶ್ರೀನಿವಾಸಪುರದಲ್ಲಿ ರೈತರನ್ನು ಭೇಟಿ ಮಾಡುತ್ತೇವೆ, ಹಬ್ಬ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಆರಂಭವಾಗುತ್ತೆ, ಕಾವೇರಿ ವಿಚಾರವಾಗಿ ಮೊದಲು ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಭೇಟಿ ಕೊಡ್ತೇವೆ ಎಂದು ಹೇಳಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಇನ್ನು ನಡೆಯುತ್ತಿದೆ, ರಾಷ್ಟ್ರೀಯ ಅಧ್ಯಕ್ಷ ನಡ್ದ ಅವರು ಸ್ಪಷ್ಟನೆ ನೀಡಲಿದ್ದಾರೆ, ಹಾಲಿ ಸಂಸದರಿರುವ ಬಿಜೆಪಿ ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಅಂತ ಒತ್ತಾಸೆ ಇದೆ ಎಂದರು.

Latest Videos

undefined

ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?

ಗ್ಯಾರಂಟಿ ಬಿಟ್ಟು ಬೇರೆ ಯೋಜನೆ ಇಲ್ಲವೇ?: ಸಚಿವ ರಾಜಣ್ಣ ಹೇಳಿರೋದು ಮೂರು ಡಿಸಿಎಂ ನೀಡುವ ಬಗ್ಗೆ ಇನ್ಯಾರಾರ ಮನಸ್ಸಿನಲ್ಲಿ ಎಷ್ಟು ಹುದ್ದೆಗಳಿವೆ ಗೊತ್ತಿಲ್ಲ. ಸಿಎಂ ಸ್ಥಾನ ಬೇಕು ಅಂತ ಪರಮೇಶ್ವರ್ ಕೇಳುತ್ತಿದ್ದಾರೆ. ಎರಡೂವರೆ ವರ್ಷ ಯಾವಾಗ ಆಗುತ್ತೋ ಅಂತ ಡಿ.ಕೆ.ಶಿವಕುಮಾರ್ ಕಾಯುತ್ತಿದ್ದಾರೆ, ಕಾಂಗ್ರೆಸ್‌ನ ಶಾಸಕರೇ ಅಭಿವೃದ್ಧಿ ವಿಚಾರವಾಗಿ ಪತ್ರ ಬರೆದಿದ್ದಾರೆ, ಅಲ್ಲದೆ ಐದು ಗ್ಯಾರಂಟಿ ಬಿಟ್ಟು ಬೇರೆ ಸ್ಕೀಮ್‌ಗಳೇ ಇಲ್ವಾ ಎಂದು ಪ್ರಶ್ನಿಸಿದ ಅವರು, ಶೇ.20 ರಷ್ಟು ಮಹಿಳೆಯರಿಗೂ ೨ ಸಾವಿರ ಹಣ ಹಾಕಿಲ್ಲ, ಪದವೀಧರರಿಗೆ ಒಂದು ಪೈಸಾ ಕೊಟ್ಟಿಲ್ಲ, ಬಸ್‌ಗಳು ಕಡಿಮೆ ಮಾಡಿ, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ, ಮೂರೇ ತಿಂಗಳಲ್ಲಿ ಆಡಳಿತ ವಿರೋಧಿ ನೀತಿ ಎದುರಿಸುತ್ತಿದ್ದಾರೆ ಎಂದರು.

ನನಗೆ ಗುಂಡಿಕ್ಕಿದರೂ ರೈತರ ಪರ ಹೋರಾಡುವೆ: ಸಂಸದ ಮುನಿಸ್ವಾಮಿ

ಎಂಎಲ್‌ಎಗಳಿಗೆ ಕೇವಲ 50 ಲಕ್ಷ ಕೊಟ್ಟಿದ್ದಾರೆ, 34 ಜನ ಶಾಸಕರು ಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ವಿರೋಧ ಪಕ್ಷದ ನಾಯಕರು ಬೇಕು, ಅದರ ಬಗ್ಗೆ ಎರಡನೇ ಮಾತಿಲ್ಲ, ಆದರೆ ಸರ್ಕಾರ ಏನೂ ಮಾಡ್ಬೇಕು ಅದನ್ನು ಮಾಡಲಿ, ಡಿಎಂಕೆ-ಕಾಂಗ್ರೆಸ್ ನ ಸಂಬಂಧ ಗಟ್ಟಿಗೊಳಿಸೋಕೆ ನೀರು ಬಿಟ್ರಾ, ತಮಿಳುನಾಡಿಗೆ ಏಕೆ ಕಾವೇರಿ ನೀರು ಬಿಟ್ಟರು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದರು. ಚೈತ್ರಾ ಕುಂದಾಪುರ ಕೇಸ್‌ನಲ್ಲಿ ಕಾನೂನು ಇದೆ, ಕಾನೂನು ಅದರ ಕಾರ್ಯವನ್ನು ನೋಡಿಕೊಳ್ಳಲಿದೆ. ಬಿಜೆಪಿ ಪಕ್ಷದಲ್ಲಿ ಹಣ ಪಡೆದು ಟಿಕೆಟ್ ಕೊಡುವ ವ್ಯವಸ್ಥೆ ಇಲ್ಲ ಆಕೆಯನ್ನು ಅರೆಸ್ಟ್ ಮಾಡಿದ್ದಾರೆ. ಕಾನೂನು ಅದರ ಕಾರ್ಯವನ್ನು ನೋಡಿಕೊಳ್ಳಲಿದೆ ಎಂದು ತಿಳಿಸಿದರು.

click me!