ಕೋಟಿ ಕೋಟಿ ಹಣ ಎಲ್ಲಿಂದ ಬಂತು ಸರ್ಕಾರ ಹೇಳಲಿ: ಕೋಟ ಶ್ರೀನಿವಾಸ ಪೂಜಾರಿ

By Kannadaprabha NewsFirst Published Oct 17, 2023, 3:40 AM IST
Highlights

ಅಂಬಿಕಾಪತಿಯ ಮನೆಯಲ್ಲಿ 42 ಕೋಟಿ, ಸಂತೋಷ್ ಮನೆಯಲ್ಲಿ 52 ಕೋಟಿ ರು. ಸಿಕ್ಕಿದ್ದು, ಇದು ರಾಜ್ಯದ ಜನತೆಯ ತೆರಿಗೆ ಹಣ, ಪಂಚ ರಾಜ್ಯದ ಚುನಾವಣೆಯ ಖರ್ಚಿಗೆ ಕಳುಹಿಸಲು ಸಂಗ್ರಹಿಸಿದ್ದ ಹಣ ಎಂದು ಹೇಳಲಾಗುತ್ತಿದೆ. 

ಉಡುಪಿ (ಅ.17): ಅಂಬಿಕಾಪತಿಯ ಮನೆಯಲ್ಲಿ 42 ಕೋಟಿ, ಸಂತೋಷ್ ಮನೆಯಲ್ಲಿ 52 ಕೋಟಿ ರು. ಸಿಕ್ಕಿದ್ದು, ಇದು ರಾಜ್ಯದ ಜನತೆಯ ತೆರಿಗೆ ಹಣ, ಪಂಚ ರಾಜ್ಯದ ಚುನಾವಣೆಯ ಖರ್ಚಿಗೆ ಕಳುಹಿಸಲು ಸಂಗ್ರಹಿಸಿದ್ದ ಹಣ ಎಂದು ಹೇಳಲಾಗುತ್ತಿದೆ. ಇದು ಸುಳ್ಳು ಎಂದಾದರೇ ಹಣ ಸಿಕ್ಕಿದ್ದು ನಿಜ ತಾನೆ, ಅದು ಎಲ್ಲಿಂದ ಬಂತು ಎಂಬುದನ್ನು ಸರ್ಕಾರ ಬಹಿರಂಗ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಐಟಿ ದಾಳಿ ಮಾಡಿಸುತ್ತಿರುವುದು ಮೋದಿ ಎಂದು ಜಗದೀಶ್ ಶೆಟ್ಟರ್ ಆರೋಪಿಸುತಿದ್ದಾರೆ.

ಶೆಟ್ಟರ್ ಹಿರಿಯ ರಾಜಕಾರಣಿ ಕಾನೂನು ಪದವೀಧರ, ಒಬ್ಬರ ಮನೆಯಲ್ಲಿ ದಾಖಲೆ ಇಲ್ಲದೇ 40 -50 ಕೋಟಿ ರು. ಇಟ್ಟುಕೊಳ್ಳಬಹುದೇ, ಇದಕ್ಕೇನೆನ್ನುತ್ತಾರೆ ಎಂದು ಕೋಟ ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮನೆಗಳಲ್ಲಿ ಐಟಿ ದಾಳಿಗೆ ಸಿಕ್ಕಿದ ಹಣ ವೈಎಸ್ ಟಿ - ಎಸ್ ಎಸ್ ಟಿ ಟ್ಯಾಕ್ಸ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ವೈ ಎಸ್ ಟಿ ಮತ್ತು ಎಸ್ ಎಸ್ ಟಿ ಪ್ರಚಲಿತದಲ್ಲಿರುವ ಸತ್ಯ, ಹಾಗಂತ ನಮಗೆ ಹೇಳಲು ಸಂಕೋಚವಾದರೂ ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು ಎಂದರು.

ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ವರ್ಗಾವಣೆ ದಂಧೆ ತನಿಖೆ ಮಾಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳನ್ನು ಸಮಿತಿಯ ಮೂಲಕ ತನಿಖೆ ಮಾಡುವುದಾದರೇ ಅದರಲ್ಲಿ ಈಗ ನಡೆಯುತ್ತಿರುವ ವರ್ಗಾವಣೆ ದಂಧೆಯ ಹಗರಣವನ್ನೂ ಸೇರಿಸಿಬಿಡಿ ಎಂದವರು ಆಗ್ರಹಿಸಿದರು. ಬಿಜೆಪಿ ಸರ್ಕಾರದಲ್ಲಿ ವರ್ಷಕ್ಕೊಮ್ಮೆ ಅಧಿಕಾರಿಗಳ ವರ್ಗಾವಣೆ ಆಗುತ್ತಿತ್ತು, ಈಗ ನೂರಾರು ವರ್ಗಾವಣೆಗಳಾಗುತ್ತಿವೆ. ಸ್ವತಃ ಮುಖ್ಯಮಂತ್ರಿಯೇ ಸಹಿ ಮಾಡಿ ವರ್ಗಾವಣೆ ಮಾಡಿಸುತ್ತಿದ್ದಾರೆ, ಅಧಿಕಾರಿಗಳಿಗೆ ಒಂದೆಡೆ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದವರು ಹೇಳಿದರು. ಅಧಿಕಾರಿಗಳು ವರ್ಗಾವಣೆಗೆ ಮಾತ್ರವಲ್ಲ, ವರ್ಗಾವಣೆ ಮಾಡದಿರುವುದಕ್ಕೂ ಹಣ ಕೊಡಬೇಕಾಗಿದೆ, ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಗರಣವನ್ನೂ ಸಮಿತಿಯ ಮೂಲಕ ತನಿಖೆ ಮಾಡಿಸಿ ಎಂದರು.

ಎಲ್ಲಾ ಶಾಸಕರು ಪ್ರತಿಭಟಿಸುವ ಪರಿಸ್ಥಿತಿ ಸೃಷ್ಟಿಸಬೇಡಿ: ಅನುದಾನ ಬಿಡುಗಡೆ ಮಾಡದೇ ಸಿದ್ದರಾಮಯ್ಯ ಸರ್ಕಾರ ವಿರೋಧ ಪಕ್ಷದ ಶಾಸಕರನ್ನು ಹಣಿಯಲು ಹೊರಟಿದ್ದು, ಶಾಸಕ ಮುನಿರತ್ನ ಅವರಿಗೆ ಆಗಿರುವ ಸಮಸ್ಯೆ ರಾಜ್ಯದ ಎಲ್ಲಾ ವಿರೋಧ ಪಕ್ಷದ ಶಾಸಕರಿಗೆ ಎದುರಾಗಿದೆ. ಮುನಿರತ್ನ ಅವರ ಹೋರಾಟಕ್ಕೆ ಬಿಜೆಪಿಯ ಎಲ್ಲಾ ಶಾಸಕರ ಬೆಂಬಲ ಇದೆ. ನಾವೆಲ್ಲರೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಟಿ ಮಾಡಬೇಡಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇವರೆಲ್ಲಾ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಆಕ್ರೋಶ

ಅವರು ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಹೊಸ ಯೋಜನೆ ಮಂಜೂರು ಮಾಡಿ ಎಂದು ಮುನಿರತ್ನ ವಾದಿಸುತ್ತಿಲ್ಲ, ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು, ಅನುದಾನವನ್ನೂ ಸರ್ಕಾರ ತಡೆ ಹಿಡಿದಿದೆ. ಬಿಜೆಪಿ ಸರ್ಕಾರ ಇರುವಾಗ ಬೊಮ್ಮಾಯಿಯವರು ಎಲ್ಲರಿಗೂ ಅನುದಾನ ಕೊಟ್ಟಿದ್ದಾರೆ, ಶಾಸಕರು ಸರ್ಕಾರದ ಭಾಗ ಎಂಬುದನ್ನು ಮರೆಯಬಾರದು. ಅನುದಾನ ತಡೆ ಹಿಡಿಯುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಭಾಗ್ಯಗಳನ್ನು ಕೊಡುವುದು, ಬಿಡುವುದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ, ಆದರೆ ಅದಕ್ಕಾಗಿ ಹಿಂದಿನ ಸರ್ಕಾರ ಮಂಜೂರು ಮಾಡಿ, ಹಣ ಬಿಡುಗಡೆ ಮಾಡಿದ, ಟೆಂಡರ್ ಆದ ಯೋಜನೆಗಳ ಹಣವನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!